ಮೊಳಕಾಲ್ಮುರು: ವಿಧಾನಸಭಾ ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಗುರುತರವಾದ ಹೊಣೆ ನನ್ನ ಮೇಲೂ ಇದ್ದು ಇದರಿಂದ ಎಂದಿಗೂ ನಾನು ಹೊರತಾಗಿ ನಡೆದುಕೊಳ್ಳುವುದಿಲ್ಲ ಎಂದು ರಾಜ್ಯ ದ್ರಾಕ್ಷಾರಸ ಹಾಗೂ ವೈನ್ಬೋರ್ಡ್ ಅಧ್ಯಕ್ಷ ಬಿ. ಯೋಗೇಶ್ ಬಾಬು ಹೇಳಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಚೆಗೆ ಕ್ಷೇತ್ರದ ಕೆಲ ಸಮಸ್ಯೆಗಳಿಗೆ ನಾನು ಅಧಿಕಾರಿಗಳಿಗೆ ಸೂಚನೆ ನೀಡಿದ ವಿಷಯಕ್ಕೆ ಸಂಬಂಧಪಟ್ಟಂತೆ ಕೆಲವರು ಸಾಮಾಜಿಕ ತಾಣಗಳಲ್ಲಿ ಮಾಡಿರುವ ಆರೋಪಗಳಿಗೆ ನಾನು ಬೆಲೆ ನೀಡುವುದಿಲ್ಲ. ಇದು ನನ್ನ ಸ್ವಕ್ಷೇತ್ರ ಇಲ್ಲಿ 15 ವರ್ಷದಿಂದ ರಾಜಕೀಯದಲ್ಲಿ ಇದ್ದೇನೆ. ಜಿಲ್ಲಾಪಂಚಾಯಿತಿ ಸದಸ್ಯನಾಗಿ, ವಿಧಾನಸಭಾ ಚುನಾವಣೆ ಪರಾಜಿತ ಅಭ್ಯರ್ಥಿಯಾಗಿ ಜನರ ಜತೆ ಇದ್ದೇನೆ. ಈಗ ರಾಜ್ಯಸರ್ಕಾರ ಶ್ರಮಕ್ಕೆ ಫಲವಾಗಿ ಮಂಡಳಿ ಅಧ್ಯಕ್ಷನನ್ನಾಗಿ ಮಾಡಿ ಸಚಿವದರ್ಜೆ ಸ್ಥಾನ ನೀಡಿದೆ. ಈ ಸಮಯದಲ್ಲಿ ನಾನು ಇನ್ನೂ ಹೆಚ್ಚು ಜನರಿಗೆ ಸ್ಪಂದನೆ ಮಾಡುವ ಮೂಲಕ ಸಿಕ್ಕಿರುವ ಅಧಿಕಾರಕ್ಕೆ ಮತ್ತು ಕೊಟ್ಟಿರುವ ಸರ್ಕಾರಕ್ಕೆ ನ್ಯಾಯ ಸಲ್ಲಿಸಬೇಕಿದೆ ಎಂದು ಹೇಳಿದರು.

ಕುಡಿಯುವ ನೀರಿನ ಸಮಸ್ಯೆ,. ಸಾರಿಗೆ ಸಮಸ್ಯೆ ಸೇರಿದಂತೆ ಕೆಲವುಗಳ ಬಗ್ಗೆ ಮಾದ್ಯಮಗಳಲ್ಲಿ ಬಂದಿರುವುದರ ಕುರಿತು ಸಂಬಂಧಪಟ್ಟವರ ಗಮನಕ್ಕೆ ತಂದು ಬಗೆಹರಿಸಲಾಗುವುದು. ಎಲ್ಲಾ ಸರ್ಕಾರಗಳ ಅವಧಿಯಲ್ಲೂ ಮೂಲಸೌಕರ್ಯಗಳ ಸಮಸ್ಯೆ ಇರುವುದು ಸಾಮಾನ್ಯ, ಇವುಗಳು ಗಮನಕ್ಕೆ ಬಂದಾಗ, ವಿರೋಧಕ್ಷದವರು ಟೀಕೆ ಮಾಡಿದಾಗ ಅಧಿಕಾರಿಗಳ ಮೂಲಕ ಸ್ಪಂದಿಸುವುದು ಜನಪ್ರತಿನಿಧಿಗಳ ಕೆಲಸ. ಈಗ ನಾನು ಅದನ್ನೇ ಮಾಡಿದ್ದು ಕೆಲವರು ಅಸಮಂಜಸ ಹೇಳಿಕೆ ನೀಡಿರುವುದು ಸರಿಯಲ್ಲ ಎಂದರು.

ಇಲ್ಲಿ ನಿರ್ಮಿಸಿರುವ ಕೆಎಸ್ಆರ್ಟಿಸಿ ಬಸ್ನಿಲ್ದಾಣ ಮತ್ತು ಡಿಪೋಗಳ ಶೀಘ್ರ ಉದ್ಘಾಟನೆಗೆ ಕ್ರಮ ಕೈಗೊಳ್ಳುವಂತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮನವಿ ಮಾಡಲಾಗುವುದು. ಕ್ಷೇತ್ರಕ್ಕೆ ಶಿಕ್ಷಣ ವ್ಯವಸ್ಥೆ, ಆರೋಗ್ಯ ವ್ಯವಸ್ಥೆಗೆ ಆದ್ಯತೆ ನೀಡುವಂತೆ ಮನವಿ ಮಾಡಲಾಗುವುದು. ಯಾವುದೇ ಸಮಸ್ಯೆ ಗಮನಕ್ಕೆ ತಂದರೂ ಸಾಧ್ಯವಾದಷ್ಟು ಸ್ಪಂದನೆ ಮಾಡಲಾಗುವುದು. ಕ್ಷೇತ್ರದಲ್ಲಿ ಶಿಷ್ಟಾಚಾರ ಉಲ್ಲಂಘಿಸಿ ಸರ್ಕಾರಿ ಕಾರ್ಯಕ್ರಮ ಮಾಡುತತಿರುವ ಬಗ್ಗೆ ಕ್ರಮ ಕೈಗೊಳ್ಳುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಪತ್ರ ಬರೆದು ಮನವಿ ಮಾಡಲಾಗಿದೆ ಎಂದು ಯೋಗೇಶ್ಬಾಬು ಹೇಳಿದರು.

ಮುಖಂಡರಾದ ವೈ.ಡಿ. ಕುಮಾರಸ್ವಾಮಿ, ಟಿ.ಎಸ್. ಪಾಲಯ್ಯ, ಶರತ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.