‘ನಾಗರಹಾವು ಚಿತ್ರದಲ್ಲಿ ವಿಷ್ಣುವರ್ಧನ್ ಹತ್ತಿರುವ ಕುದುರೆ ಜಾಡು ಹತ್ತಿ ಸಾಹಸ ತೋರಲು ಯುವಜನರು ಪ್ರಯತ್ನಿಸುತ್ತಾರೆ. ಹತ್ತುವಾಗ ಬಹಳ ಎಚ್ಚರಿಕೆ ವಹಿಸಬೇಕು. ಆದರೆ ಯುವಕರು ಸಾಹಸಕ್ಕಾಗಿ ಹತ್ತಲು ಯತ್ನಿಸಿ ಅಪಾಯ ಎದುರಿಸುತ್ತಾರೆ. ಸರಿಯಾದ ಸಮಯಕ್ಕೆ ನಮ್ಮ ಪ್ರವಾಸಿ ಮಿತ್ರರು, ಮಾರ್ಗದರ್ಶಿಗಳು ಧಾವಿಸಿ ಅವರನ್ನು ಆಸ್ಪತ್ರೆಗೆ ಸೇರಿಸುವಲ್ಲಿ ಯಶಸ್ವಿಯಾದರು’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದರು.