ಭಾನುವಾರ, ಆಗಸ್ಟ್ 25, 2019
27 °C

ಇಂದಿರಾ ಕೊಲೆ ಆರೋಪಿ ಬಂಧನ

Published:
Updated:

ಭದ್ರಾವತಿ: ಭದ್ರಾವತಿ ಸಂಚಿಹೊನ್ನಮ್ಮ ಕಾಲೇಜಿನ ಪಿಯು ವಿದ್ಯಾರ್ಥಿನಿ ಇಂದಿರಾ ಕೊಲೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮನೆಗಳಿಗೆ ಬಣ್ಣ ಬಳಿಯುವ ಕೆಲಸ ಮಾಡುವ ಶಿವಕುಮಾರ್ (21) ಬಂಧಿತ ಆರೋಪಿ.

ತಾಲ್ಲೂಕಿನ ಕಾಳಿಂಗನಹಳ್ಳಿಯ ಅವರ ಮನೆಯಲ್ಲಿ ಭಾನುವಾರ ಇಂದಿರಾ ಕೊಲೆಯಾಗಿದ್ದರು. ಅಡುಗೆ ಮನೆಯಲ್ಲಿ ಕತ್ತುಸೀಳಿ ಅವರನ್ನು ಕೊಲೆ ಮಾಡಲಾಗಿತ್ತು.

ಚಿಕ್ಕಮ್ಮಂದಿರಾದ ಕಲಾವತಿ, ತಿಲೋತ್ತಮೆ ಹಾಗೂ ಮಾವ ಜಗದೀಶನೊಂದಿಗೆ ಇಂದಿರಾ ವಾಸವಾಗಿದ್ದರು. ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದು ಅಂದು ಇಬ್ಬೊಬ್ಬ ಯುವಕನ ವಿಚಾರವಾಗಿ ಜಗಳ ನಡೆದು ಮಚ್ಚು ಬೀಸಿದ ಮರಿಣಾಮ ಇಂದಿರಾ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Post Comments (+)