ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖ್ಯಮಂತ್ರಿ ಕುಟುಂಬದ ಆಸ್ತಿ ₹167 ಕೋಟಿ

ಪ್ರಜಾವಾಣಿ ವಾರ್ತೆ
Last Updated 15 ಅಕ್ಟೋಬರ್ 2018, 19:05 IST
ಅಕ್ಷರ ಗಾತ್ರ

ರಾಮನಗರ: ರಾಜ್ಯದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಅವರ ಪತ್ನಿ ಅನಿತಾ ಅವರ ಸದ್ಯದ ಒಟ್ಟು ಆಸ್ತಿ ಮೌಲ್ಯ ₹167.13 ಕೋಟಿ.

ರಾಮನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಸೋಮವಾರ ನಾಮಪತ್ರ ಸಲ್ಲಿಸಿದ ಅನಿತಾ ಕುಮಾರಸ್ವಾಮಿ ತಮ್ಮ ಹಾಗೂ ಪತಿಯ ಆಸ್ತಿ ವಿವರವನ್ನು ಚುನಾವಣಾ ಆಯೋಗಕ್ಕೆ ನೀಡಿದ್ದಾರೆ. ಕಳೆದ ವಿಧಾನಸಭೆ ಚುನಾವಣೆ ಸಂದರ್ಭ ಕುಮಾರಸ್ವಾಮಿ ಇದೇ ಪ್ರಮಾಣದ ಆಸ್ತಿಯನ್ನು ಘೋಷಣೆ ಮಾಡಿಕೊಂಡಿದ್ದರು. 2013ರಲ್ಲಿ ಈ ಕುಟುಂಬದ ಆಸ್ತಿ ಮೌಲ್ಯವು ₹ 137 ಕೋಟಿಗಳಾಗಿತ್ತು.

ಬಿ.ಇ. ಪದವೀಧರೆ ಆಗಿರುವ ಅನಿತಾ ಅವರು ಸ್ಥಿರಾಸ್ತಿಗಿಂತ ಚರಾಸ್ತಿಗಳಲ್ಲಿಯೇ ಹೆಚ್ಚಿನ ಹೂಡಿಕೆಯನ್ನು ಮಾಡಿದ್ದಾರೆ. ಕಸ್ತೂರಿ ಮೀಡಿಯಾ ಪ್ರೈ. ಲಿ. ಕಂಪೆನಿಯಲ್ಲಿ ಅವರ ಹೂಡಿಕೆಯ ಬಹುಪಾಲು ಇದೆ. 2660 ಗ್ರಾಂನಷ್ಟು ಚಿನ್ನ, 17 ಕೆ.ಜಿ. ಬೆಳ್ಳಿ ಹಾಗೂ 40 ಕ್ಯಾರೆಟ್‌ನಷ್ಟು ವಜ್ರ ಹೊಂದಿದ್ದಾರೆ. ₹8.29 ಲಕ್ಷ ಮೌಲ್ಯದ ಹಾರ್ಲೆ ಡೆವಿಡ್‌ಸನ್ ಬೈಕ್‌ ಹಾಗೂ ₹20 ಲಕ್ಷ ಮೌಲ್ಯದ ವ್ಯಾನ್ ಇವರ ಹೆಸರಿನಲ್ಲಿ ಇದೆ.

ಕುಮಾರಸ್ವಾಮಿ: ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಅವರಿಗೆ ಆಸ್ತಿ ಎಂದರೆ ಕೃಷಿ ಭೂಮಿ. ರಾಮನಗರ ತಾಲ್ಲೂಕಿನ ಕೇತಗಾನಹಳ್ಳಿಯಲ್ಲಿ ಒಟ್ಟು 48 ಎಕರೆಯಷ್ಟು ಕೃಷಿ ಭೂಮಿ ಅವರ ಹೆಸರಿನಲ್ಲಿದೆ. ಇದಲ್ಲದೆ ಜಯನಗರದಲ್ಲಿ ₨4.5 ಕೋಟಿ ಮೌಲ್ಯದ ಮನೆ ಹೊಂದಿದ್ದಾರೆ.

ಪತ್ನಿ ಅನಿತಾಗೆ ₹6.51 ಕೋಟಿ ಸಾಲ ಕೊಟ್ಟಿದ್ದಾರೆ. 750 ಗ್ರಾಂ ಚಿನ್ನಾಭರಣ, 12.5 ಕೆ.ಜಿ. ಬೆಳ್ಳಿ ಹಾಗೂ 4 ಕ್ಯಾರೆಟ್‌ನಷ್ಟು ವಜ್ರ ಹೊಂದಿದ್ದಾರೆ. ಓಡಾಟಕ್ಕೆ ಸ್ವಂತ ವಾಹನ ಇಲ್ಲ.

ಕೃಷಿ ಆದಾಯ ಕುಸಿತ: 2017–18ನೇ ಸಾಲಿನಲ್ಲಿ ವೇತನ ರೂಪದಲ್ಲಿ ಕೇವಲ ₨3.26 ಲಕ್ಷ ಮಾತ್ರ ಪಡೆದಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಇದರೊಟ್ಟಿಗೆ ಕೃಷಿ ಆದಾಯವಾಗಿ ವಾರ್ಷಿಕ ₹12.46 ಲಕ್ಷ ತೋರಿಸಿದ್ದಾರೆ. ಕಳೆದ ಸಾಲಿನಲ್ಲಿ ಅವರ ವಾರ್ಷಿಕ ಕೃಷಿ ಆದಾಯ ₹41.63 ಲಕ್ಷ ಇತ್ತು.


ಚಂದ್ರಶೇಖರ್ ಆದಾಯ ₹10 ಕೋಟಿ
ರಾಮನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಲ್. ಚಂದ್ರಶೇಖರ್ ಕುಟುಂಬವು ಒಟ್ಟು ₨10.20 ಕೋಟಿ ಮೌಲ್ಯದ ಆಸ್ತಿ ಹೊಂದಿದೆ. ಇದರಲ್ಲಿ ₨9.8 ಕೋಟಿ ಮೊತ್ತದ ಸ್ಥಿರಾಸ್ತಿ ಹಾಗೂ ₹37.3 ಮೌಲ್ಯದ ಚರಾಸ್ತಿ ಸೇರಿದೆ.

ಎಚ್‌ಡಿಕೆ ಕುಟುಂಬದ ಆಸ್ತಿ ಮೌಲ್ಯ (₹ಗಳಲ್ಲಿ)

ಆಸ್ತಿ ಮಾದರಿ ಕುಮಾರಸ್ವಾಮಿ ಅನಿತಾ
ಚರಾಸ್ತಿ 7.8 ಕೋಟಿ ₹ 94.22 ಕೋಟಿ
ಸ್ಥಿರಾಸ್ತಿ 35.10 ಕೋಟಿ ₹30 ಕೋಟಿ
ಹೂಡಿಕೆ ₹3ಸಾವಿರ ₹68.79 ಕೋಟಿ
ಠೇವಣಿ ₹22.25 ಲಕ್ಷ ₹1.90 ಕೋಟಿ
ಸಾಲ ನೀಡಿಕೆ ₹6.97 ಕೋಟಿ ₹17.6 ಕೋಟಿ
ಸ್ವಂತ ವಾಹನ ಇಲ್ಲ 1 ಬೈಕ್‌, 1ಕಾರ್‌
ಚಿನ್ನಾಭರಣ ಮೌಲ್ಯ ₹24.52 ಲಕ್ಷ ₹93.33 ಲಕ್ಷ
ಕೈಯಲ್ಲಿರುವ ನಗದು ₹12 ಲಕ್ಷ ₹32 ಲಕ್ಷ
ವಾರ್ಷಿಕ ಆದಾಯ ₹15.72 ಲಕ್ಷ ₹76.35 ಲಕ್ಷ
ಪಡೆದ ಸಾಲ₹2.94 ಕೋಟಿ ₹8.14 ಕೋಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT