ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ಪ್ರವಾಸಿಗರಿಗೆ ಲಭ್ಯ ಆನೆಗಳ ಸಂಪೂರ್ಣ ವಿವರ

ಸಕ್ರೆಬೈಲು ಬಿಡಾರದಲ್ಲಿ ಫಲಕ: ಇದು ರಾಜ್ಯದಲ್ಲೇ ಮೊದಲ ಪ್ರಯೋಗ
Last Updated 20 ಜನವರಿ 2019, 20:00 IST
ಅಕ್ಷರ ಗಾತ್ರ

ಶಿವಮೊಗ್ಗ: ಸಕ್ರೆಬೈಲು ಬಿಡಾರದ ಎಲ್ಲ ಆನೆಗಳ ವಿವರವಾದಮಾಹಿತಿ ಇನ್ನು ಮುಂದೆ ಪ್ರತ್ಯೇಕ ಫಲಕಗಳಲ್ಲಿ ಪ್ರವಾಸಿಗರಿಗೆ ಲಭ್ಯವಾಗಲಿದೆ.

ಆನೆಗಳ ಕುರಿತ ಸಂಪೂರ್ಣ ಮಾಹಿತಿ ಹೀಗೆ ನೀಡುತ್ತಿರುವುದು ರಾಜ್ಯದಲ್ಲೇ ಪ್ರಥಮ ಪ್ರಯತ್ನ. ಬಿಡಾರದಲ್ಲಿ ಪ್ರಸ್ತುತ26 ಆನೆಗಳಿವೆ.ಎಲ್ಲ ಆನೆಗಳ ವಿವರವಾದ ಮಾಹಿತಿ ಫಲಕ ಅಳವಡಿಸುವುದರಿಂದಯಾವ ಆನೆ ಸ್ವಭಾವ ಹೇಗಿದೆ? ಯಾವುದು ಸಾಧು? ಯಾವುದು ತುಂಟ ಆನೆ? ಯಾವುದು ಅಪಾಯಕಾರಿ? ಎಂದು ಗ್ರಹಿಸಬಹುದು. ಆ ಮೂಲಕ ಪ್ರವಾಸಿಗರೂ ಎಚ್ಚರ ವಹಿಸಲು ಸಾಧ್ಯವಾಗುತ್ತದೆ.

ಮಾಹಿತಿ ಫಲಕಗಳಲ್ಲಿಏನಿರುತ್ತದೆ:ಬಿಡಾರದಲ್ಲಿರುವಪ್ರತಿಆನೆಯ ಹೆಸರು, ವಯಸ್ಸು, ಲಿಂಗ, ಸಿಕ್ಕ ಸ್ಥಳ, ಸೆರೆ ಸಿಕ್ಕ ದಿನ, ಆಗ ಅದರವಯಸ್ಸು, ಎತ್ತರ, ತೂಕ, ಸ್ವಭಾವ ಹೀಗೆ ಎಲ್ಲಾ ರೀತಿಯ ಮಾಹಿತಿ ಲಭ್ಯ.

ಪ್ರತಿದಿನ ತುಂಗಾಹಿನ್ನೀರಿನಲ್ಲಿ ಕಾಡಿನಿಂದ ಬೆಳಿಗ್ಗೆ ಬರುವಆನೆಗಳಿಗೆ ಮಾವುತರು ಗಂಟೆಗಟ್ಟಲೆ ತಿಕ್ಕಿಸ್ನಾನ ಮಾಡಿಸುತ್ತಾರೆ.ಸ್ನಾನ ಮುಗಿಸಿದ ಆನೆಗಳು ಅವುಗಳಿಗಾಗಿಯೇ ನಿಗದಿಪಡಿಸಿದ ಸ್ಥಳದಲ್ಲಿ ಬಂದು ನಿಲ್ಲುತ್ತವೆ.ಅಲ್ಲಿಯೇ ಈ ಮಾಹಿತಿಫಲಕ ಹಾಕಲಾಗುತ್ತಿದೆ.

‘ಬಿಡಾರಕ್ಕೆ ಬರುವ ಪ್ರತಿಪ್ರವಾಸಿಗರಿಗೂ ಮಾವುತರು ಮಾಹಿತಿ ಹೇಳುವುದು ಕಷ್ಟವಾಗುತ್ತದೆ. ಆಯಾ ಆನೆಗಳ ಮುಂದೆಯೇ ಇರುವಫಲಕಗಳನ್ನುಓದುವ ಮೂಲಕ ಪ್ರವಾಸಿಗರ ಕುತೂಹಲ ತಣಿಯುತ್ತದೆ. ಒಂದು ವಾರದ ಒಳಗೆ ಫಲಕ ಹಾಕುವ ಕಾರ್ಯ ಮುಗಿಯುತ್ತದೆ’ ಎಂದು ವಿವರ ನೀಡುತ್ತಾರೆವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಚಂದ್ರಶೇಖರ್.

ಬಿಡಾರದಲ್ಲಿರುವ ಆನೆಗಳು:ಗಂಗೆ, ಗೀತಾ, ನೇತ್ರಾ, ಭಾನುಮತಿ, ಕುಂತಿ, ಹೇಮಾ, ಭಾರತಿ, ಶಾರದೆ, ಶಿವ, ಸೂರ್ಯ, ಆಲೆ, ಧನುಷ್, ಅರ್ಜುನ, ರಾಘವೇಂದ್ರ, ಸೋಮಣ್ಣ, ನಾಗಣ್ಣ, ಬಾಲಣ್ಣ, ಮಣಿಕಂಠ, ರಂಗ, ದಾವಣಗೆರೆ ಗಣೇಶ, ಬೆಂಗಳೂರು ಗಣೇಶ. ಇನ್ನುಳಿದ ನಾಲ್ಕು ಆನೆಗಳಿಗೆ ಹೆಸರಿಟ್ಟಿಲ್ಲ.ಗಂಗೆ, ಗೀತಾ ಆನೆಗಳು ಬಿಡಾರದಲ್ಲಿನ ಹಿರಿಯ ಆನೆಗಳು; ಧನುಷ್, ಶಿವ, ಶಾರದೆಪುಟ್ಟ ಆನೆಗಳು.

ಆನೆ ಹಬ್ಬಕ್ಕೂ ಪ್ರಸಿದ್ಧ:ಈ ಬಿಡಾರದಲ್ಲಿ ಪ್ರತಿ ವರ್ಷಅಕ್ಟೋಬರ್‌ನಲ್ಲಿವನ್ಯಜೀವಿ ಸಪ್ತಾಹದ ಅಂಗವಾಗಿ ಆಯೋಜಿಸುವಆನೆಗಳ ಉತ್ಸವಪ್ರಸಿದ್ಧಿ ಪಡೆದಿದೆ. ಕ್ರಿಕೆಟ್‌, ಫುಟ್‌ಬಾಲ್ ಸೇರಿ ವಿವಿಧಕ್ರೀಡೆಗಳನ್ನು ನೋಡಲುಈ ಉತ್ಸವಕ್ಕೆಪ್ರವಾಸಿಗರ ದಂಡೇ ಬರುತ್ತದೆ.ಮಕ್ಕಳಿಗೆ ಆನೆ ಹಬ್ಬ ಎಂದರೆ ಪಂಚಪ್ರಾಣ. ಪ್ರತಿದಿನ ಬೆಳಿಗ್ಗೆ 7ರಿಂದ 12ರ ವರೆಗೆ ಆನೆಗಳವೀಕ್ಷಣೆಗೆ, ಆನೆ ಸವಾರಿಗೆಅವಕಾಶ ಕಲ್ಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT