ಮಂಗಳವಾರ, 6 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವಶಕ್ತಿ ಬಲಗೊಳಿಸಿದ ಹರ್ಡೇಕರ್‌ ಸೇವಾದಲ: ವೈ.ಎಚ್.ನಾಗರಾಜ್ ಶ್ಲಾಘನೆ

Last Updated 7 ಮೇ 2019, 10:52 IST
ಅಕ್ಷರ ಗಾತ್ರ

ಶಿವಮೊಗ್ಗ:ಭಾರತ ಸೇವಾದಲ ಕಟ್ಟುವ ಮೂಲಕ ನಾ.ಸು.ಹರ್ಡೇಕರ್‌ ಅವರು ಯುವಶಕ್ತಿಯನ್ನೇ ಜಾಗೃತಿ ಗೊಳಿಸಿದರು ಎಂದು ಸೇವಾದಲದ ಜಿಲ್ಲಾ ಘಟಕದ ಅಧ್ಯಕ್ಷ ವೈ.ಎಚ್.ನಾಗರಾಜ್ ಶ್ಲಾಘಿಸಿದರು.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಸೇವಾದಲ ಆಯೋಜಿಸಿದ್ದ ನಾ.ಸು.ಹರ್ಡೇಕರ್ ಅವರ ಜನ್ಮದಿನಾಚರಣೆ ಮತ್ತು ಬಸವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸೇವಾದಲದ ಮೂಲಕ ರಾಷ್ಟ್ರಪ್ರೇಮ ಬೆಳೆಸಿದರು. ಅವರ ಆದರ್ಶ, ತತ್ವಗಳನ್ನು ಎಲ್ಲರೂ ಮಾದರಿ.ದೇಶದ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಪ್ರತಿಯೊಬ್ಬರಲ್ಲೂ ಶಿಸ್ತು, ಸಂಯಮ ಬದ್ಧತೆಯ ಗುಣಗಳನ್ನು ಬೆಳೆಸುವಲ್ಲಿ ಅವರ ಪಾತ್ರ ಹಿರಿದಾಗಿತ್ತು. ಅವರ ದೇಶಪ್ರೇಮ ಅನನ್ಯ. ಅವರ ಜನ್ಮದಿನ ಆಚರಣೆಯ ಮೂಲಕ ಅವರ ಆದರ್ಶಗಳು ಯುವ ಜನರಿಗೆ ತಲುಪಿಸಬೇಕು ಎಂದರು.

ಕಾಂಗ್ರೆಸ್ ಮುಖಂಡ ಬಲದೇವ ಕೃಷ್ಣ ಮಾತನಾಡಿ, ಗಣ್ಯರ ಆದರ್ಶ ಗುಣಗಳನ್ನು ಎಲ್ಲರೂ ಬೆಳೆಸಿಕೊಳ್ಳಬೇಕು. ಅವರ ನಡೆದಂತೆ ನಡೆಯಬೇಕು ಎಂದು ಸಲಹೆ ನೀಡಿದರು.

ಮುಖಂಡರಾದ ಚಂದ್ರಭೂಪಾಲ್, ಕೆ.ಬಿ.ವಿನಾಯಕ ಮೂರ್ತಿ, ನಾಜಿಯಾ, ಅರ್ಚನಾ, ಸೆಲ್ವಂ ಮಾರ್ಟಿಸ್‌, ವಿಜಯಕುಮಾರ್, ಪಾತಿಮಾ, ಮಾರುತಿ, ರೋಜಾ ಷಣ್ಮುಗಂ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT