ಬಹಿರಂಗ ಚರ್ಚೆಗೆ ಕಾಂಗ್ರೆಸ್‌ ಪಂಥಾಹ್ವಾನ

7

ಬಹಿರಂಗ ಚರ್ಚೆಗೆ ಕಾಂಗ್ರೆಸ್‌ ಪಂಥಾಹ್ವಾನ

Published:
Updated:
Deccan Herald

ಶಿವಮೊಗ್ಗ: ಜಿಲ್ಲೆಯ ಅಭಿವೃದ್ಧಿ ವಿಷಯದಲ್ಲಿ ಬಿಜೆಪಿ ಮುಖಂಡರ ಜತೆ ಬಹಿರಂಗ ಚರ್ಚೆಗೆ ಸಿದ್ಧ. ಸ್ಥಳ, ಸಮಯ ಅವರೇ ನಿಗದಿ ಮಾಡಲಿ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ತೀ.ನಾ. ಶ್ರೀನಿವಾಸ್ ಪಂಥಾಹ್ವಾನ ನೀಡಿದರು.

ಜಿಲ್ಲೆಯ ಅಭಿವೃದ್ಧಿಗೆ ಬಿ.ಎಸ್. ಯಡಿಯೂರಪ್ಪ ಹಾಗೂ ಬಿ.ವೈ. ರಾಘವೇಂದ್ರ ಅವರು ಏನು ಮಾಡಿಲ್ಲ ಎಂಬ ಹೇಳಿಕೆಗೆ ಈಗಲೂ ಬದ್ಧ. ಇಡೀ ಶಿವಮೊಗ್ಗ ಸುತ್ತಿದ್ದೇನೆ. ನನ್ನ ಕಣ್ಣಿಗೆ ಫೆಸಿಟ್‌ ಕಾಲೇಜು, ನಾರಾಯಣ ಆಸ್ಪತ್ರೆ, ರಾಯಲ್ ಆರ್ಕಿಡ್, ಮೈತ್ರಿ ಅಪಾರ್ಟ್‌ಮೆಂಟ್, ಶಂಕರಘಟ್ಟ ರಸ್ತೆಯಲ್ಲಿರುವ ಒತ್ತುವರಿ ಜಮೀನಿನ ಕೌಂಪೌಂಡ್ ಕಂಡವು ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಕುಟುಕಿದರು.

ಯಡಿಯೂರಪ್ಪನವರ ಆಸ್ತಿಗಳು ಜನರ ಕಣ್ಣು ಕುಕ್ಕುತ್ತಿವೆ. ಬರಿಗೈನಲ್ಲಿ ಬಂದಿದ್ದ ಯಡಿಯೂರಪ್ಪ, ಏನು ಇಲ್ಲದ ಈಶ್ವರಪ್ಪ ಇವತ್ತು ಕೋಟಿಗಟ್ಟಲೆ ಆಸ್ತಿ ಮಾಡಿದ್ದಾರೆ. ಎಲ್ಲಿಂದ ಬಂತು? ಆಯನೂರು ಕೂಡ ಒತ್ತುವರಿ ಮಾಡಿದ್ದಾರೆ. ಶೀಘ್ರ ಎಲ್ಲ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದರು.

ಆಯನೂರು ಮಂಜುನಾಥ್‌ಗೆ ಸಿಗರೇಟು ಸೇದುವ ಚಟವಿದೆ. ಸದಾ ಸಿಗರೇಟಿಗೆ ಬೆಂಕಿ ಹಚ್ಚುತ್ತಲೇ ಇರುತ್ತಾರೆ. ಒಂದು ಸಿಗರೇಟು ಹಚ್ಚಿದಾಗ ಈಶ್ವರಪ್ಪ ಪರ ಮತ್ತೊಂದು ಸಿಗರೇಟು ಹಚ್ಚಿಕೊಂಡಾಗ ಯಡಿಯೂರಪ್ಪರ ಪರ ಮಾತನಾಡುತ್ತಾರೆ. ಅವರನ್ನು ಹಾಗೆ ಮಾತನಾಡಲೆಂದೇ ಆ ಪಕ್ಷದ ಮುಖಂಡರು ಬಿಟ್ಟಿದ್ದಾರೆ ಎಂದು ವ್ಯಂಗ್ಯವಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್‌ ಮುಖಂಡರಾದ ಎಸ್.ಪಿ. ದಿನೇಶ್, ಎನ್. ರಮೇಶ್, ಪಿ.ವಿ. ವಿಶ್ವನಾಥ್ (ಕಾಶಿ), ಚಂದ್ರಭೂಪಾಲ್, ನಾಗರಾಜ್, ಮಧು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !