ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೌರತ್ವ: ಕಾಂಗ್ರಸ್ ಪ್ರತಿಭಟನೆ ಹತ್ತಿಕ್ಕಿದ ಜಿಲ್ಲಾಡಳಿತ

ಪೊಲೀಸ್ ಸರ್ಪಗಾವಲು, ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ದಿಗ್ಭಂಧನ
Last Updated 19 ಡಿಸೆಂಬರ್ 2019, 11:29 IST
ಅಕ್ಷರ ಗಾತ್ರ

ಶಿವಮೊಗ್ಗ: ಜಿಲ್ಲಾಡಳಿತ ನಿಷೇಧಾಜ್ಞೆ ಹೇರುವಮೂಲಕ ಪೌರತ್ವ ಕಾಯ್ದೆ ವಿರೋಧಿಸಿ ಕಾಂಗ್ರೆಸ್ ಗುರುವಾರಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಯಶಸ್ವಿಯಾಗಿ ಹತ್ತಿಕ್ಕಿತು.

ಅಪಾರ ಸಂಖ್ಯೆಯ ಪೊಲೀಸರು ಬೆಳಗ್ಗೆಯೇ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ದಿಗ್ಬಂಧನ ಹಾಕಿದ್ದರು. ಪ್ರತಿಭಟನೆಯಲ್ಲಿ ಭಾಗವಹಿಸಲು ಬಂದ ಮುಖಂಡರು, ಕಾರ್ಯಕರನ್ನು ನಿರ್ಬಂಧಿಸಿದರು. ನಗರದ ಪ್ರಮುಖ ಸ್ಥಳಗಳಲ್ಲಿಪೊಲೀಸ್ ಸರ್ಪಗಾವಲು ಹಾಕಲಾಗಿತ್ತು. ಎಲ್ಲೂ ಪ್ರತಿಭಟನಾ ಜಾಥಾ ನಡೆಸದಂತೆ ತಡೆ ಹಾಕಲಾಯಿತು.

ನಿಷೇಧಾಜ್ಞೆ ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾಡಳಿತ, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.ಬಿಜೆಪಿ ಚಳವಳಿ ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ. ಏನೇ ಪೊಲೀಸ್‌ ಬಲ ಬಳಸಿದರೂ ಪೌರತ್ವ ತಿದ್ದುಪಡಿ ಕಾಯ್ದೆ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.

ಇದುಪ್ರಜಾಪ್ರಭುತ್ವ ವಿರೋಧಿನೀತಿ. ಇಂತಹ ಬೆದರಿಕೆಗೆ ಬಗ್ಗುವುದಿಲ್ಲ. ದಬ್ಬಾಳಿಕೆ ವಿರುದ್ಧ, ಪೌರತ್ವ ಕಾಯ್ದೆ ವಿರುದ್ಧರಾಜ್ಯದ ಎಲ್ಲೆಡೆ ಕಾಂಗ್ರೆಸ್ ಮತ್ತಷ್ಟು ಸಂಘಟಿತವಾಗಿ ಹೋರಾಟ ಮುಂದುವರಿಸುತ್ತದೆ ಎಂದು ಮಾಜಿ ಸಚಿವರಾದಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಕಿಮ್ಮನೆ ರತ್ನಾಕರ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಸ್.ಸುಂದರೇಶ್ಘೋಷಿಸಿದರು.

ಬಿಜೆಪಿ ಶಾಂತಿಯುತ ಚಳವಳಿಯನ್ನೇ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಮೋದಿ, ಅಮಿತ್ ಶಾ ಪ್ರಜಾಪ್ರಭುತ್ವ ನೀತಿ ಗಾಳಿಗೆ ತೂರಿ ಸರ್ವಾಧಿಕಾರಿಗಳಂತೆ ವರ್ತಿಸುತ್ತಿದ್ದಾರೆ. ಗುಜರಾತ್ ಮುಖ್ಯಮಂತ್ರಿಯಾದ ವೇಳೆ ನಡೆದಿಕೊಂಡಂತೆ ಈಗಲೂ ನಡೆದುಕೊಳ್ಳುತ್ತಿದ್ದಾರೆ. ಜನರ ನೋವು ಅವರಿಗೆ ಅರ್ಥವೇ ಆಗುವುದಿಲ್ಲ.ಬಿಜೆಪಿ ಆಡಳಿತ ಯಂತ್ರದುರುಪಯೋಗ ಮಾಡುತ್ತಿದೆ. ಅಭಿಪ್ರಾಯ ವ್ಯಕ್ತಪಡಿಸಲೂಅವಕಾಶನೀಡುತ್ತಿಲ್ಲ. ಪ್ರಜಾತಂತ್ರದಲ್ಲಿ ನಂಬಿಕೆಯೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಯ್ದೆ ಅಸಂವಿಧಾನಿಕ. ಭಾರತದ ಗಣರಾಜ್ಯದ ತಳಹದಿಯ ತತ್ವಾದೇಶಗಳಿಗೂ ಇದುವಿರುದ್ಧ.ಸಂವಿಧಾನದ ವಿಧಿಗಳಾದ 14, 21 ಮತ್ತು 25ನ್ನು ಸಂಪೂರ್ಣವಾಗಿ ಉಲ್ಲಂಘಿಸುತ್ತದೆ. ಧರ್ಮ ಮತ್ತು ಧರ್ಮಾಧಾರಿತದೌರ್ಜನ್ಯ ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಪಕ್ಷದ ಮುಖಂಡರಾದ ಎನ್‌.ರಮೇಶ್, ಬಿ.ಎ.ರಮೇಶ್ ಹೆಗ್ಡೆ, ಎಚ್.ಸಿ.ಯೋಗೀಶ್, ಎಸ್.ಪಿ.ಶೇಷಾದ್ರಿ, ದೇವೇಂದ್ರಪ್ಪ, ಕಲಗೋಡು ರತ್ನಾಕರ್, ಪಂಡಿತ್ ವಿ.ವಿಶ್ವನಾಥ್, ಯಮುನಾ ರಂಗೇಗೌಡಪ್ರತಿಭಟನೆಗೆ ಆಗಮಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT