ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ‘ಜನ ಸಹಾಯವಾಣಿ’ ಕೇಂದ್ರ ಆರಂಭ

Last Updated 4 ಏಪ್ರಿಲ್ 2020, 16:08 IST
ಅಕ್ಷರ ಗಾತ್ರ

ವಿಜಯಪುರ: ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಆರಂಭಿಸಲಾಗಿರುವ ’ಜನ ಸಹಾಯವಾಣಿ 24x7’ ಕೇಂದ್ರವನ್ನು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಾಜು ಆಲಗೂರ ಉದ್ಘಾಟಿಸಿದರು.

ನಗರದ ಐದು ಬಡ ಕುಟುಂಬಗಳಿಗೆ ಸಾಂಕೇತಿಕವಾಗಿ ಆಹಾರ ಸಾಮಗ್ರಿಗಳನ್ನು ಹಂಚುವ ಮುಖಾಂತರ ಸಹಾಯವಾಣಿಗೆ ಚಾಲನೆ ನೀಡಿ ಮಾತನಾಡಿದ ಅವರು, ದೇಶ ಇಂದು ಕೊರೊನಾ ಎಂಬ ಮಹಾಮಾರಿಯಿಂದ ತತ್ತರಿಸಿದ್ದು ಜನ ಆತಂಕದಲ್ಲಿದ್ದಾರೆ. ಆದರೆ, ಈ ಮಹಾಮಾರಿಯನ್ನು ಓಡಿಸಲು ಜನರು ಸಾಮಾಜಿಕ ಅಂತರ ಕಾಯ್ದುಕೊಂಡು ತಮ್ಮ ಪರಿವಾರ ಮತ್ತು ಸಮಾಜದಲ್ಲಿ ಈ ರೋಗ ಹರಡದಂತೆ ಸಹಕರಿಸಬೇಕು ಎಂದರು.

ಕಾಂಗ್ರೆಸ್‌ನ ಪ್ರತಿಯೊಬ್ಬ ಮುಖಂಡರು, ಕಾರ್ಯಕರ್ತರು ತಮ್ಮ ತಮ್ಮ ಕ್ಷೇತ್ರಗಳಲ್ಲಿ, ವಾರ್ಡ್‌ಗಳಲ್ಲಿ, ಓಣಿಗಳಲ್ಲಿ ಜನರಿಗೆ ಏನಾದರೂ ತೊಂದರೆಗಳಾದಲ್ಲಿ ಸ್ವಯಂ ಪ್ರೇರಿತರಾಗಿ ಜನರ ಸಹಾಯಕ್ಕೆ ಬರಬೇಕು. ತಕ್ಷಣ ಸ್ಪಂದಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

ಟಾಸ್ಕ್‌ಪೋರ್ಸ್‌ ಸಮಿತಿ ಜಿಲ್ಲಾ ಆಧ್ಯಕ್ಷ ಮಹ್ಮದ ರಫೀಕ ಟಪಾಲ, ವಿಜಯಪುರ ನಗರ ಬ್ಲಾಕ್‌ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಮೀರ್‌ ಅಹ್ಮದ್‌ ಬಕ್ಷಿ, ಜಲ ನಗರ ಬ್ಲಾಕ್‌ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಆರತಿ ಶಹಾಪೂರ, ಕಾಂಗ್ರೆಸ್ ಮುಖಂಡರಾದ ಅಬ್ದುಲ್‌ ಹಮೀದ್‌ ಮುಶ್ರೀಫ್, ಎಸ್.ಎಂ.ಪಾಟೀಲ(ಗಣಿಯಾರ), ಸಜ್ಜಾದೇ ಪೀರಾ ಮುಶ್ರಿಫ್, ಶಬ್ಬೀರ ಜಾಗೀರದಾರ, ವಸಂತ ಹೊನಮೊಡೆ, ಅಬ್ದುಲ್‌ ಖಾದರ್‌, ಸಾಹೇಬಗೌಡ ಬಿರಾದಾರ, ಐ.ಎಂ.ಇಂಡಿಕರ, ಪರವೇಜ್‌ ಚಟ್ಟರಕಿ, ಸಮದ್ ಸುತಾರ, ಚನ್ನಬಸಪ್ಪ ನಂದರಗಿ, ಮಲ್ಲಿ ತೊರವಿ, ಧನರಾಜ.ಎ, ರವೀಂದ್ರ ಜಾಧವ, ಇಲಿಯಾಸ ಬಕ್ಷಿ, ಹಾಜಿಲಾಲ ದಳವಾಯಿ, ದಾವಲಸಾಬ ಬಾಗವಾನ, ತಾಜುದ್ದೀನ್‌ ಖಲಿಪಾ, ಶರಣಪ್ಪ ಯಕ್ಕುಂಡಿ, ಬಾಬು ಯಾಳವಾರ, ಆಸೀಫ್‌ ಜುನೇದಿ, ಮಂಜುಳಾ ಗಾಯಕವಾಡ,ವಸಂತ ಹೊನಮೊಡೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT