ಮಂಗಳವಾರ, ಜೂನ್ 2, 2020
27 °C
ದಿಕ್ಕುತಪ್ಪಿದ ವೃದ್ಧನಿಗೆ ಜಿಲ್ಲಾಧಿಕಾರಿ ಶಿವಕುಮಾರ್ ಸ್ಪಂದನೆ

ಕೊರೊನಾ ಭಯ: ಮಗಳ ಮನೆಗೆ ಬಂದ ವೃದ್ಧ ತಂದೆಗೆ ನೋ ಎಂಟ್ರಿ! 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸನಗರ: ಮಗಳ ಮನೆಗೆ ಬಂದ ವೃದ್ಧ ತಂದೆಯನ್ನು ಕೊರೊನಾ ಭೀತಿಯಿಂದ ಅಲ್ಲಿರಲು ಅವಕಾಶ ನೀಡದೇ ಹಾಗೆಯೇ ವಾಪಸ್‌ ಕಳುಹಿಸಿದ ಘಟನೆ ತಾಲ್ಲೂಕಿನ ನಗರ ಹೋಬಳಿಯಲ್ಲಿ ನಡೆದಿದೆ.

ಭದ್ರಾವತಿ ಮಾವಿನಕೆರೆ ಕಾಲೊನಿ ನಿವಾಸಿಯಾದ 77 ವಯಸ್ಸಿನ ವೃದ್ಧರು ನಗರ ಹೋಬಳಿಯಲ್ಲಿನ ಮಗಳ ಮನೆಗೆ ಬಂದಿದ್ದರು. ಮೊದಲೇ ಕೊರೊನಾ ಭೀತಿಯಲ್ಲಿದ್ದ ಗ್ರಾಮಸ್ಥರು ಈ ಬಗ್ಗೆ ಆಕ್ಷೇಪ ಎತ್ತಿದರು. ಹೀಗಾಗಿ ಅವರನ್ನು ಹಾಗೆಯೇ ವಾಪಸ್‌ ಕಳುಹಿಸಲಾಗಿದೆ.

ರಕ್ತದೊತ್ತಡದಿಂದ ಬಳಲುತ್ತಿದ್ದ ಅವರು, ‘ಅದೇನೋ ಕಾಯಿಲೆ ಬಂದಿದೆಯಂತೆ, ಅದಕ್ಕೆ ವಾಪಸ್‌ ಹೋಗು’ ಎಂದು ಗ್ರಾಮಸ್ಥರು ವಾಪಸ್ ಕಳುಹಿಸಿದ್ದಾರೆ’ ಎನ್ನುತ್ತ, ಕಂಡಕಂಡವರಲ್ಲಿ ‘ಭದ್ರಾವತಿಗೆ ಹೋಗಬೇಕು. ಬಿಪಿ ಮಾತ್ರೆ ಬೇಕು’ ಎಂದು ಗೋಗರೆದಿದ್ದಾರೆ.

ಜಿಲ್ಲಾಧಿಕಾರಿ ಸ್ಪಂದನ

ವಯೋವೃದ್ಧರ ಸಮಸ್ಯೆ ತಿಳಿದ ಗ್ರಾಮ ಕಾರ್ಯಪಡೆ ಸದಸ್ಯ ಕರುಣಾಕರ ಶೆಟ್ಟಿ ಸ್ಥಳಕ್ಕೆ ಬಂದು ವೃದ್ಧನಿಗೆ ಮಾಸ್ಕ್ ನೀಡಿ ಜಾಗೃತಿ ಮೂಡಿಸಿದರು. ನಂತರ ನಗರ ಆಸ್ಪತ್ರೆಗೆ ದಾಖಲಿಸಲಾಯಿತು. ಸಾರ್ವಜನಿಕರ ಮಾಹಿತಿಯ ಮೇರೆಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಹೊಸನಗರ ತಹಶೀಲ್ದಾರ್ ವಿ.ಎಸ್.ರಾಜೀವ್‌ ಅವರಿಗೆ ವೃದ್ಧರನ್ನು ಭದ್ರಾವತಿಗೆ ತಲುಪಿಸುವಂತೆ ಸೂಚನೆ ನೀಡಿದರು. ಕೂಡಲೇ 108 ವಾಹನದ ಮೂಲಕ ಅವರನ್ನು ಭದ್ರಾವತಿಗೆ ಕರೆದುಕೊಂಡು ಹೋಗಲಾಯಿತು. ತುರ್ತಾಗಿ ಸ್ಪಂದಿಸಿದ ಜಿಲ್ಲಾಧಿಕಾರಿ ಕ್ರಮಕ್ಕೆ ಸ್ಥಳೀಯರು ಪ್ರಶಂಸೆ ವ್ಯಕ್ತಪಡಿಸಿದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು