ಗುರುವಾರ , ನವೆಂಬರ್ 21, 2019
26 °C

ದಂಪತಿ ಆತ್ಮಹತ್ಯೆ

Published:
Updated:

ಹೊಳೆಹೊನ್ನೂರು: ಸಮೀಪದ ಅಗರದಹಳ್ಳಿ ಕ್ಯಾಂಪ್‌ನಲ್ಲಿ ವೈಯಕ್ತಿಕ ಕಾರಣಗಳಿಂದ ದಂಪತಿ  ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಭಾನುವಾರ ಭೂಮಿ ಹುಣ್ಣಿಮೆ ಪ್ರಯುಕ್ತ ಕುಟುಂಬದವರು ತೋಟಕ್ಕೆ ಊಟಕ್ಕೆ ಹೋಗುವಾಗ ಸಂತೋಷ್ (32) ಹಾಗೂ ಪಾರ್ವತಿ (24) ತಡವಾಗಿ ಬರುವುದಾಗಿ ತಿಳಿಸಿದ್ದರು. ಮನೆಯವರು ಬಂದು ನೋಡಿದಾಗ ಇಬ್ಬರೂ ಒಂದೇ ಸೀರೆಗೆ ನೇಣು ಹಾಕಿಕೊಂಡಿದ್ದರು ಎಂದು ಸಂತೋಷ್‌ ಸಹೋದರ ಈಶ್ವರ್ ತಿಳಿಸಿದರು.

ಕ್ಯಾಂಪ್‌ನಲ್ಲಿ ಎಗ್‌ರೈಸ್ ಅಂಗಡಿ ನಡೆಸುತ್ತಿದ್ದ ಸಂತೋಷ್ ಒಂದೂವರೆ ವರ್ಷದ ಹಿಂದೆ ಮದುವೆಯಾಗಿದ್ದರು. ಮಕ್ಕಳಿರಲಿಲ್ಲ. ವೈಯಕ್ತಿಕ ಸಮಸ್ಯೆಯೇ ಆತ್ಮಹತ್ಯೆಗೆ  ಕಾರಣವಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ಹೊಳೆಹೊನ್ನೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿಕ್ರಿಯಿಸಿ (+)