ವೈದ್ಯಕೀಯ ಕಾಲೇಜು: ಅಧೀಕ್ಷಕರ ವಿರುದ್ಧ ನಕಲಿ ಸಹಿ ಪ್ರಕರಣ

7

ವೈದ್ಯಕೀಯ ಕಾಲೇಜು: ಅಧೀಕ್ಷಕರ ವಿರುದ್ಧ ನಕಲಿ ಸಹಿ ಪ್ರಕರಣ

Published:
Updated:

ಶಿವಮೊಗ್ಗ: ಇಲ್ಲಿನ ಸರ್ಕಾರಿ ವೈದ್ಯಕೀಯ ಕಾಲೇಜಿನ ಕಚೇರಿ ಅಧೀಕ್ಷಕ ಮಹಾಂತೇಶ್ ಮಿಟ್ಟಲಕೊಡೆ ಅವರ ವಿರುದ್ಧ ಸಹಿ ದುರ್ಬಳಕೆ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ.

ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡಿದ್ದು, ಅಧೀಕ್ಷಕರ ಹುದ್ದೆ ಅಲಂಕರಿಸಲು ಅವಕಾಶ ಇಲ್ಲಿದ್ದರೂ ಮೇಲಧಿಕಾರಿಗಳ ಸಹಿ ನಕಲು ಮಾಡಿ ಹುದ್ದೆ ಗಿಟ್ಟಿಸಿಕೊಂಡಿದ್ದರು ಎಂಬ ಆರೋಪ ಅವರ ಮೇಲಿದೆ.

ಪ್ರಸಕ್ತ ವರ್ಷದ ಸೆಪ್ಟೆಂಬರ್‌ಗೆ ಅವರ ಗುತ್ತಿಗೆ ಅವಧಿ ಮುಗಿದಿದೆ. ಅವರನ್ನು ನವೀಕರಿಸುವಂತೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ಆದರೆ, ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿರುವ ಕಾರಣ ನೇಮಕಾತಿ ನವೀಕರಣ ತಡೆಹಿಡಿಯಲಾಗಿದೆ. ಅವರು ನಿರ್ವಹಿಸುವ ಎಲ್ಲ ಕಡತನಗಳನ್ನು ಹಸ್ತಾಂತರಿಸುವಂತೆ ಸೂಚಿಸಲಾಗಿದೆ ಎಂದು ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ನಿರ್ದೇಶಕರು ಮಾಹಿತಿ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !