ಸಿಗರೇಟ್‌ನಲ್ಲಿ ಗಾಂಜಾ: ಆರೋಪಿಗೆ 4 ವರ್ಷ ಶಿಕ್ಷೆ

7

ಸಿಗರೇಟ್‌ನಲ್ಲಿ ಗಾಂಜಾ: ಆರೋಪಿಗೆ 4 ವರ್ಷ ಶಿಕ್ಷೆ

Published:
Updated:

ಶಿವಮೊಗ್ಗ: ಸಿಗರೇಟ್‌ನಲ್ಲಿ ಗಾಂಜಾಪುಡಿ ತುಂಬಿ ಮಾರಾಟ ಮಾಡುತ್ತಿದ್ದ ಆರೋಪಿಗೆ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 4 ವರ್ಷ ಕಾರಾಗೃಹ ಶಿಕ್ಷೆ, 10 ಸಾವಿರ ದಂಡವಿಧಿಸಿದೆ.

ಸಾಗರದ ರೋಲ್ಪಿ ಗೋಮ್ಸ್ ಶಿಕ್ಷೆಗೆ ಒಳಗಾದ ಆರೋಪಿ. 2016ರಲ್ಲಿ ಸಾಗರದ ಮದರ್ ಥೆರೇಸಾ ವೃತ್ತದ ಬಳಿ ಮಾರಾಟ ಮಾಡುವಾಗ ಸಾಗರ ನಗರ ಠಾಣೆ ಪೊಲೀಸರು ಬಂಧಿಸಿದ್ದರು.

ವಾದ ಆಲಿಸಿದ ನ್ಯಾಯಧೀಶರಾದ ಪ್ರಭಾವತಿ ಎಂ. ಹಿರೇಮಠ ಅವರು ಶಿಕ್ಷೆ ವಿಧಿಸಿ, ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಅಭಿಯೋಜಕ ವಿ.ಜಿ. ಯಳಗೇರಿ ವಾದ ಮಂಡಿಸಿದ್ದರು.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !