ಲಂಚ ಪ್ರಕರಣ: ಐಟಿಐ ಕಾಲೇಜು ಪ್ರಾಂಶುಪಾಲರಿಗೆ ಶಿಕ್ಷೆ

7

ಲಂಚ ಪ್ರಕರಣ: ಐಟಿಐ ಕಾಲೇಜು ಪ್ರಾಂಶುಪಾಲರಿಗೆ ಶಿಕ್ಷೆ

Published:
Updated:

ಶಿವಮೊಗ್ಗ: ಪ್ರಾಯೋಗಿಕ ಪರೀಕ್ಷೆಗೆ ವಿದ್ಯಾರ್ಥಿಗಳಿಂದ ಲಂಚ ಕೇಳಿದ್ದ ಸರ್ಕಾರಿ ಐಟಿಐ ಕಾಲೇಜು ಪ್ರಾಂಶುಪಾಲರಿಗೆ ಜಿಲ್ಲಾ ಮತ್ತು ಸೆಷೆನ್ಸ್ ಮ್ಯಾಯಾಲಯ 6 ತಿಂಗಳು ಸಜೆ ಹಾಗೂ ₹50 ಸಾವಿರ ದಂಡ ವಿಧಿಸಿದೆ.

ಗದಗ ಜಿಲ್ಲೆ ನರಗುಂದದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಂಶುಪಾಲ ನಾಗೇಶ್ವರ ದುರ್ಗಪ್ಪ ಅಲಂಕುಂದಿ ಶಿಕ್ಷೆಗೆ ಒಳಗಾದ ಆರೋಪಿ.

ಗಾಡಿಕೊಪ್ಪದ ಸ್ಯಾನ್‌ಜೋಸ್ ಜೈಗಾರಿಕಾ ತರಬೇತಿ ಕೇಂದ್ರಕ್ಕೆ 2009ರಲ್ಲಿ ಮೇಲ್ವಿಚಾರಕರಾಗಿ ಬಂದಿದ್ದಾಗ ವಿದ್ಯಾರ್ಥಿಗಳಿಂದ ತಲಾ ₨ 1800 ಸಂಗ್ರಹಿಸಿಕೊಡಲು ಕೇಂದ್ರದ ಕಿರಿಯ ತರಬೇತಿ ಅಧಿಕಾರಿ ಇರ್ಫಾನ್ ಅವರಿಗೆ ಸೂಚಿಸಿದ್ದರು. ಹಣ ನೀಡುವ ಮೊದಲು ಲೋಕಾಯುಕ್ತ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅಶೋಕ ಲಾಡ್ಜ್ ಬಳಿ ₨ 30,600 ಪಡೆಯುವಾಗ ಸಿಕ್ಕಿಬಿದ್ದಿದ್ದರು.

ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಪ್ರಭಾವತಿ ಎಂ. ಹಿರೇಮಠ ತೀರ್ಪು ನೀಡಿದ್ದಾರೆ. ಲೋಕಾಯುಕ್ತ ಪರವಾಗಿ ವಿಶೇಷ ಸಾರ್ವಜನಿಕ ಅಭಿಯೋಜಕರಾದ ಬಿ.ವಿ. ಗೀತಾ ಶಿವಮೂರ್ತಿ ವಾದ ಮಂಡಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !