ಗೋವಿಂದ್‌ ಕೊಲೆಯ ಪ್ರಮುಖ ಆರೋಪಿಗಳ ಬಂಧನ

ಶುಕ್ರವಾರ, ಜೂಲೈ 19, 2019
22 °C

ಗೋವಿಂದ್‌ ಕೊಲೆಯ ಪ್ರಮುಖ ಆರೋಪಿಗಳ ಬಂಧನ

Published:
Updated:

ಶಿವಮೊಗ್ಗ: ರೌಡಿಶೀಟರ್ ಗೋವಿಂದ್‌ ಕೊಲೆ ಪ್ರಕರಣದ ಆರೋಪಿಗಳನ್ನು ದೊಡ್ಡಪೇಟೆ ಪೊಲೀಸರು ಕೊನೆಗೂ ಬಂಧಿಸಿದ್ದಾರೆ.

ರೌಡಿಶೀಟರ್ ಖರಾಬ್ ಶಿವು (ಎಸ್.ಕೆ. ಸೀತಾರಾಮ್), ಆತನ ಸಹೋದರರಾದ ನಾಗಿ (ಎಸ್.ಕೆ. ನಾಗರಾಜ್), ಸುಬ್ಬು (ಎಸ್.ಕೆ. ಸುಬ್ರಮಣಿ) ಬಂಧಿತ ಆರೋಪಿಗಳು.

ಎರಡು ಕುಟುಂಬಗಳ ನಡುವಿನ ದ್ವೇಷದ ಕಾರಣ ಪ್ರಸಕ್ತ ವರ್ಷದ ಜನವರಿ 30ರಂದು ಗಾರ್ಡನ್ ಏರಿಯಾ 2ನೇ ಕ್ರಾಸ್‌ನಲ್ಲಿ ಗೋವಿಂದ ಲಕ್ಷ್ಮೀನಾರಾಯಣನ ಹತ್ಯೆ ನಡೆದಿತ್ತು. ಪ್ರಕರಣ ನಡೆದ ನಂತರ ಆರೋಪಿಗಳಾದ ಚೇತನ್, ಸಂಜಯ್, ಮಂಜುನಾಥ್, ರಿಜ್ವಾನ್, ಸಂದೇಶ್, ಪ್ರೇಮರಾಜ್, ಶಿವರಾಜ್, ಲಕ್ಷ್ಮಮ್ಮ ಅವರನ್ನು ಬಂಧಿಸಲಾಗಿತ್ತು. ಬೆಂಗಳೂರಿನಲ್ಲಿ ತಲೆ ಮರೆಸಿಕೊಂಡಿದ್ದ ಪ್ರಮುಖ ಆರೋಪಿಗಳನ್ನು ಈಗ ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಎಂ.ಅಶ್ವಿನಿ ಮಂಗಳವಾರ ಪತ್ರಿಕಾಗೊಷ್ಠಿಯಲ್ಲಿ ಮಾಹಿತಿ ನೀಡಿದರು.

ಬೆಂಗಳೂರಿನಲ್ಲಿ ಮಗನನ್ನ ಶಾಲೆಗೆ ಸೇರಿಸಲು ಬಂದಾಗ ದೊಡ್ಡಪೇಟೆ ಠಾಣೆ ಪಿಎಸ್‌ಐ ವಸಂತ್ ಕುಮಾರ್, ಜಯನಗರ ಠಾಣೆ ಪಿಎಸ್ಐ ಅಭಯ ಪ್ರಕಾಶ್ ಸೋಮನಾಳ್ ನೇತೃತ್ವದ ತಂಡ ಬಂಧಿಸಿದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !