ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾತ್ರೆಗೆ ಹಣ ಪಡೆದು ವಂಚನೆ: ದೂರು

Last Updated 12 ಡಿಸೆಂಬರ್ 2019, 13:13 IST
ಅಕ್ಷರ ಗಾತ್ರ

ಶಿವಮೊಗ್ಗ: ಉಮ್ರಾ ಯಾತ್ರೆಗೆ ಕಳಿಸುವುದಾಗಿ ಹೇಳಿಹಣ ಪಡೆದು ವಂಚಿಸಿದ್ದಾರೆ ಎಂದು ಆರೋಪಿಸಿಶಾಹಿದಾಬಾನು ನೇತೃತ್ವದಲ್ಲಿಹಲವರು ಗುರುವಾರ ದೊಡ್ಡಪೇಟೆ ಠಾಣೆಗೆ ದೂರು ನೀಡಿದರು.

ನಗರದ ಖಾಸಗಿ ಸಂಸ್ಥೆ ಉಮ್ರಾ ಯಾತ್ರೆಗೆ ಕಳಿಸುವುದಾಗಿ₨ 1.14 ಲಕ್ಷ ಪಡೆದುಕೊಂಡಿತ್ತು. ಆದರೆ, ಸಂಸ್ಥೆ ಹಣ ವಾಪಸ್ ಕೊಡದೆ, ಯಾತ್ರೆಗೂ ಕಳುಹಿಸದೇ ಮೋಸಮಾಡಿದ್ದಾರೆ. ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ಶಾಹಿದಾಬಾನು ದೂರಿನಲ್ಲಿ ತಿಳಿಸಿದ್ದಾರೆ.

ಮೆಕ್ಯಾನಿಕ್ ಕೆಲಸಮಾಡಿಕೊಂಡು ಸಂಪಾದಿಸಿದ್ದ ಹಣ ಕೂಡಿಟ್ಟು ಉಮ್ರಾ ಯಾತ್ರೆ ಮಾಡಲು ಸಂಕಲ್ಪ ಮಾಡಿಕೊಂಡಿದ್ದೆವು. 2018ರ ಮಾರ್ಚ್‌ನಲ್ಲೇಸಂಸ್ಥೆಗೆ ಹಣನೀಡಿದ್ದೆವು. 2019ರ ಏಪ್ರಿಲ್‌ನಲ್ಲಿಯಾತ್ರೆಗೆ ಕಳಿಸುವುದಾಗಿ ತಿಳಿಸಿದ್ದರು. ಈಗ ಮೋಸ ಮಾಡಿದ್ದಾರೆ ಎಂದು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT