ಗಣಪತಿ ವಿಸರ್ಜನೆ ವೇಳೆ ಎಚ್.ಗೊಲ್ಲಳ್ಳಿ–ಹೆಮ್ಮಿಗೆಪುರ ಗ್ರಾಮಸ್ಥರ ನಡುವೆ ಗಲಾಟೆ

7

ಗಣಪತಿ ವಿಸರ್ಜನೆ ವೇಳೆ ಎಚ್.ಗೊಲ್ಲಳ್ಳಿ–ಹೆಮ್ಮಿಗೆಪುರ ಗ್ರಾಮಸ್ಥರ ನಡುವೆ ಗಲಾಟೆ

Published:
Updated:
Deccan Herald

ರಾಮನಗರ: ಗಣಪತಿ ಮೂರ್ತಿ ವಿಸರ್ಜನೆ ಸಂಬಂಧ ಬೆಂಗಳೂರು ದಕ್ಷಿಣ ತಾಲ್ಲೂಕಿನ ಎಚ್. ಗೊಲ್ಲಳ್ಳಿ ಹಾಗೂ ಹೆಮ್ಮಿಗೆಪುರ ಗ್ರಾಮಸ್ಥರ ನಡುವೆ ಗುರುವಾರ ರಾತ್ರಿ ಘರ್ಷಣೆ ನಡೆದಿದೆ.

ಹೆಮ್ಮಿಗೆಪುರ ಯುವಕರು ಗಣಪತಿ ಮೂರ್ತಿ ವಿಸರ್ಜನೆ ಮಾಡುತ್ತಿದ್ದು, ಅದನ್ನು ಟ್ರ್ಯಾಕ್ಟರ್ ಮೂಲಕ ಗೊಲ್ಲಳ್ಳಿಗೆ ತಂದಿದ್ದರು. ಇದೇ ವೇಳೆ ಗೊಲ್ಲಳ್ಳಿಯಲ್ಲಿನ ಗಣಪತಿ ವಿಸರ್ಜನೆ ಮೆರವಣಿಗೆಯೂ ನಡೆದಿತ್ತು. ದಾರಿ ಬಿಡುವ ವಿಚಾರವಾಗಿ ಎರಡೂ ಗ್ರಾಮದ ಯುವಕರ ನಡುವೆ ಘರ್ಷಣೆ ನಡೆಯಿತು. ಪೊಲೀಸರು ಸಮಾಧಾನ ಪಡಿಸಲು ಯತ್ನಿಸಿದರು.

ಈ ವೇಳೆ ಗೊಲ್ಲಳ್ಳಿ ಕಡೆಯವರು ಹೆಮ್ಮಿಗೆಪುರದ ರಾಮಯ್ಯ ಎನ್ನುವವರ ಕೈ ಕತ್ತರಿಸಿದ್ದು, ರೊಚ್ಚಿಗೆದ್ದ ಎದುರಾಳಿ ಗ್ರಾಮದವರು ಪ್ರತಿ ಹಲ್ಲೆಗೆ ಮುಂದಾದರು. ಅವರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಗೊಲ್ಲಹಳ್ಳಿ ಗ್ರಾಮದ ಯುವಕನೊಬ್ಬ ಅಡ್ಡಾದಿಡ್ಡಿ ಕಾರು ಚಲಾಯಿಸಿದ್ದು, ಒಬ್ಬ ಕಾನ್‌ಸ್ಟೆಬಲ್‌ ಹಾಗೂ ಐವರು ಯುವಕರು ಗಾಯಗೊಂಡರು. ರೊಚ್ಚಿಗೆದ್ದ ಗ್ರಾಮಸ್ಥರು ಕಾರು ಪುಡಿಪುಡಿ ಮಾಡಿದರು. ಅಪಘಾತ ನಡೆಸಿದ ಕಾರಿನಲ್ಲಿ ಲಾಂಗ್‌ ಹಾಗೂ ಗಣಪತಿ ಮೆರವಣಿಗೆ ನ ಟ್ರ್ಯಾಕ್ಟರ್‌ನಲ್ಲಿ ವಿಕೆಟ್‌ಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.

ಗಲಾಟೆ ಹಿನ್ನೆಲೆಯಲ್ಲಿ ಗ್ರಾಮಸ್ಥರು ಗಣೇಶನ ಮೂರ್ತಿಯನ್ನು ರಸ್ತೆಯಲ್ಲಿಯೇ ಬಿಟ್ಟು ತೆರಳಿದ್ದು, ಪೊಲೀಸರೇ ಮೂರ್ತಿ ವಿಸರ್ಜನೆ ಮಾಡಿದರು. ಗ್ರಾಮದಲ್ಲಿ ಬಿಗುವಿನ ವಾತಾವರಣ ಇದ್ದು, ಕೆಎಸ್‌ಆರ್‌ಪಿ ಹಾಗೂ ಡಿಎಆರ್‌ ತುಕಡಿಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ.

ಆರೋಪಿಗಳ ವಿರುದ್ಧ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಚಾರಣೆ ಮುಂದೂಡಿಕೆ
ಬಿಡದಿ ಧ್ಯಾನ ಪೀಠದ ನಿತ್ಯಾನಂದ ಸ್ವಾಮೀಜಿ ಹಾಗೂ ಅವರ ಶಿಷ್ಯಂದಿರ ವಿರುದ್ಧದ ಅತ್ಯಾಚಾರ ಪ್ರಕರಣದ ವಿಚಾರಣೆಯನ್ನು ಇಲ್ಲಿನ ನ್ಯಾಯಾಲಯವು ಇದೇ 27ಕ್ಕೆ ಮುಂದೂಡಿತು.

ಶುಕ್ರವಾರ ವಿಚಾರಣೆಗೆ ನಿತ್ಯಾನಂದ ಸ್ವಾಮೀಜಿ ಗೈರಾಗಿದ್ದರು. ಸತತ ಗೈರಾಗುತ್ತಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ನ್ಯಾಯಾಧೀಶರು ಇದೇ 6ರಂದು ಬಂಧನ ವಾರೆಂಟ್‌ ಹೊರಡಿಸಿದ್ದರು. ಅದನ್ನು ಪ್ರಶ್ನಿಸಿ ನಿತ್ಯಾನಂದ ಸ್ವಾಮೀಜಿ ಹೈಕೋರ್ಟ್‌ ಮೆಟ್ಟಿಲೇರಿದ್ದು, ನ್ಯಾಯಾಲಯವು ಸ್ವಾಮೀಜಿ ಬಂಧಿಸದಂತೆ ಸೂಚಿಸಿ ವಿಚಾರಣೆಯನ್ನು ಇದೇ 17ಕ್ಕೆ ಮುಂದೂಡಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾ ನ್ಯಾಯಾಲಯವು ಪ್ರಕರಣದ ವಿಚಾರಣೆಯನ್ನು ಮುಂದೂಡಿತು.

ಬರಹ ಇಷ್ಟವಾಯಿತೆ?

 • 2

  Happy
 • 2

  Amused
 • 0

  Sad
 • 2

  Frustrated
 • 1

  Angry

Comments:

0 comments

Write the first review for this !