ಬುಧವಾರ, ನವೆಂಬರ್ 13, 2019
23 °C

ಮೀಸಲಾತಿ ಕುರಿತ ಭಾಗವತ್ಹೇಳಿಕೆ ಖಂಡನೀಯ; ಸಾಗರ

Published:
Updated:

ವಿಜಯಪುರ: ‘ಮೀಸಲಾತಿ ವಿಷಯದಲ್ಲಿ ಚರ್ಚೆ ನಡೆಯಬೇಕು ಎಂಬ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಹೇಳಿಕೆ ಖಂಡನೀಯ’ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಡಿ.ಜಿ.ಸಾಗರ ಇಲ್ಲಿ ಹೇಳಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೀಸಲಾತಿ ಚರ್ಚೆಯೇ ಅನಗತ್ಯ. ಎಲ್ಲಿಯವರೆಗೆ ದೇಶದಲ್ಲಿ ಜಾತಿ ವ್ಯವಸ್ಥೆ ಇರುತ್ತದೆಯೋ ಅಲ್ಲಿಯವರೆಗೆ ಮೀಸಲಾತಿ ಬೇಕೇಬೇಕು. ಸಮಾಜದಲ್ಲಿರುವ ದಮನಿತರು, ಶೋಷಿತರಿಗೆ ಮೀಸಲಾತಿಯ ಅವಶ್ಯಕತೆ ಇದೆ. ಹೀಗಾಗಿ, ಭಾಗವತ್ ಹೇಳಿಕೆಯನ್ನು ತೀವ್ರವಾಗಿ ವಿರೋಧಿಸುತ್ತೇವೆ’ ಎಂದು ಖಾರವಾಗಿ ಹೇಳಿದರು.

‘ದೇಶದಲ್ಲಿ ಮಹಾನುಭಾವರ ಪ್ರತಿಮೆ ಧ್ವಂಸಗೊಳಿಸುವ ವಿಕೃತ ಕೃತ್ಯಗಳು ಜರುಗುತ್ತಿದ್ದು, ಇದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಡಿವಾಣ ಹಾಕಬೇಕು ಮತ್ತು ಪ್ರತಿಮೆಗಳಿಗೆ ರಕ್ಷಣೆ ನೀಡಬೇಕು’ ಎಂದು ಒತ್ತಾಯಿಸಿದರು.

ಪ್ರತಿಕ್ರಿಯಿಸಿ (+)