ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 11 ಲಕ್ಷ ಲಸಿಕೆ ನೀಡಿಕೆ

Last Updated 26 ಜುಲೈ 2021, 3:03 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರದವರೆಗೆ 11,04,450 ಡೋಸ್ ಕೋವಿಡ್ ತಡೆ ಲಸಿಕೆ ನೀಡಲಾಗಿದೆ.

8,49,488 ಜನರು ಮೊದಲ ಡೋಸ್ ಪಡೆದಿದ್ದಾರೆ. ಈ ಮೂಲಕ ಮೊದಲ ಡೋಸ್ ಪಡೆದವರ ಪ್ರಮಾಣ ಶೇ 48ರಷ್ಟಾಗಿದೆ. 2,54,962 ಜನರು ಎರಡೂ ಡೋಸ್ ಪಡೆದಿದ್ದಾರೆ.

60 ವರ್ಷ ವಯಸ್ಸಿಗೂ ಮೇಲಿನವರಲ್ಲಿ 1,83,423 ಜನರು ಮೊದಲ ಡೋಸ್ ಪಡೆದಿದ್ದಾರೆ. ಶೇ 92ರಷ್ಟು ಸಾಧನೆಯಾಗಿದೆ. 1,00,186 ಜನರು ಎರಡೂ ಡೋಸ್‌ಗಳನ್ನು ಪೂರೈಸಿದ್ದು, ಶೇ 55ರಷ್ಟು ಸಾಧನೆಯಾಗಿದೆ.

45ರಿಂದ 60 ವರ್ಷ ಒಳಗಿನವರಲ್ಲಿ ಶೇ 64ರಷ್ಟು ಜನರು ಮೊದಲ ಡೋಸ್ ಪಡೆದಿದ್ದಾರೆ. 2,65,229 ಜನರಿಗೆ ಪ್ರಥಮ ಡೋಸ್ ಲಸಿಕೆ ನೀಡಲಾಗಿದೆ. 98,321 ಜನರಿಗೆ ಎರಡನೇ ಡೋಸ್ ಕೂಡ ನೀಡಲಾಗಿದೆ.

18ರಿಂದ 44 ವರ್ಷದೊಳಗಿನ ವಯೋಮಾನದವರಲ್ಲಿ 3,34,737 ಜನರು ಮೊದಲ ಡೋಸ್ ಪಡೆದಿದ್ದಾರೆ. ಶೇ 31ರಷ್ಟು ಗುರಿ ತಲುಪಲಾಗಿದೆ. 14,166 ಜನರು ಎರಡನೇ ಡೋಸ್ ಪೂರೈಸಿದ್ದಾರೆ. ಶೇ 4ರಷ್ಟು ಗುರಿ ತಲುಪಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕಿಶೋರ್ ಕುಮಾರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT