ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಕನ್ನಡ | 11 ಮಂದಿಗೆ ಕೋವಿಡ್‌–19 ದೃಢ

ಕಾಸರಗೋಡಿನಲ್ಲಿ ಮಹಾರಾಷ್ಟ್ರದ ಸೋಂಕು
Last Updated 27 ಮೇ 2020, 16:23 IST
ಅಕ್ಷರ ಗಾತ್ರ

ಮಂಗಳೂರು: ಮಹಾರಾಷ್ಟ್ರ ಹಾಗೂ ಗುಜರಾತಿನಿಂದ ಬಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕ್ವಾರಂಟೈನ್‌ನಲ್ಲಿದ್ದ ಒಟ್ಟು 11 ಮಂದಿಗೆ ಬುಧವಾರ ಕೋವಿಡ್–19 ಸೋಂಕು ದೃಢಪಟ್ಟಿದೆ. ಇದರಲ್ಲಿ 3 ವರ್ಷ, 7 ವರ್ಷ ಹಾಗೂ 17 ವರ್ಷ ಬಾಲಕಿಯರು ಸೇರಿದ್ದಾರೆ.

ಇದೇ 8 ರಂದು ಮುಂಬೈನಿಂದ ಬಂದು ಬಜ್ಪೆ ಗ್ರಾಮದಲ್ಲಿ ಕ್ವಾರಂಟೈನ್‌ನಲ್ಲಿದ್ದ ಒಂದೇ ಕುಟುಂಬದ 59 ವರ್ಷದ ಮಹಿಳೆ, 46 ವರ್ಷದ ಪುರುಷ, 3 ವರ್ಷದ ಬಾಲಕಿ ಹಾಗೂ 11 ವರ್ಷದ ಬಾಲಕಿಗೆ ಸೋಂಕು ತಗಲಿದೆ. ಇದೇ 16 ರಂದು ಮುಂಬೈನಿಂದ ಬಂದು ಪುತ್ತೂರಿನಲ್ಲಿ ಕ್ವಾರಂಟೈನ್‌ನಲ್ಲಿದ್ದ ಇನ್ನೊಂದು ಕುಟುಂಬದ 39 ವರ್ಷದ ಪುರುಷ, 37 ವರ್ಷದ ಮಹಿಳೆ ಹಾಗೂ 17 ವರ್ಷ ಬಾಲಕಿಗೆ ಸೋಂಕು ಖಚಿತವಾಗಿದೆ.

ಇದೇ 15 ರಂದು ಗುಜರಾತಿನಿಂದ ಬಂದು ಉಳ್ಳಾಲದಲ್ಲಿದ್ದ 22 ವರ್ಷದ ಯುವಕ, ಮುಂಬೈನಿಂದ ಮಂಗಳೂರಿಗೆ ಬಂದಿದ್ದ 36 ವರ್ಷದ ಮಹಿಳೆ, 35 ವರ್ಷದ ಪುರುಷ ಹಾಗೂ ಇದೇ 17 ರಂದು ಮುಂಬೈನಿಂದ ಬಂದು ಬೆಳ್ತಂಗಡಿಯಲ್ಲಿ ಕ್ವಾರಂಟೈನ್‌ನಲ್ಲಿದ್ದ 45 ವರ್ಷದ ಮಹಿಳೆಗೆ ಕೋವಿಡ್‌–19 ಸೋಂಕು ದೃಢವಾಗಿದೆ. ಸೋಂಕಿತರನ್ನು ನಗರದ ವೆನ್ಲಾಕ್‌ ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿಸಲಾಗಿದೆ.

ಕಾಸರಗೋಡಿನಲ್ಲಿ 10 ಮಂದಿಗೆ ಸೋಂಕು: ಕಾಸರಗೋಡು ಜಿಲ್ಲೆಯಲ್ಲಿ ಮುಂಬೈಯಿಂದ ಬಂದಿದ್ದ 8 ಮಂದಿಗೆ, ವಿದೇಶದಿಂದ ಬಂದ ಇಬ್ಬರಿಗೆ ಬುಧವಾರ ಕೋವಿಡ್‌–19 ದೃಢಪಟ್ಟಿದೆ ಎಂದು ಕಾಸರಗೋಡು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದ್ದಾರೆ.

34 ವರ್ಷದ ವರ್ಕಡಿ ನಿವಾಸಿ, 40 ವರ್ಷದ ಮೀಂಜ ನಿವಾಸಿ, 22 ವರ್ಷದ ಮಂಜೇಶ್ವರ ನಿವಾಸಿ, 47 ವರ್ಷದ ಮಂಗಲ್ಪಾಡಿ ನಿವಾಸಿ, 28, 33, 38 ವರ್ಷದ ಚೆಮ್ನಾಡ್ ನಿವಾಸಿಗಳು, 56, 40, 56 ವರ್ಷದ ಕಾಸರಗೋಡು ನಗರಸಭೆ ನಿವಾಸಿಗಳಿಗೆ ಸೋಂಕು ದೃಢವಾಗಿದೆ.

ಪರಿಯಾರಂ ವೈದ್ಯಕೀಯ ಕಾಲೇಜಿನಲ್ಲಿ ದಾಖಲಾಗಿದ್ದ 43 ವರ್ಷದ ಕೋಡೋಂ-ಬೇಳೂರು ನಿವಾಸಿ, 56 ವರ್ಷದ ಕುಂಬಳೆ ನಿವಾಸಿಯ ವರದಿ ನೆಗೆಟಿವ್ ಬಂದಿದೆ.

ಮೂವರು ಗುಣಮುಖ:ಫಸ್ಟ್‌ ನ್ಯೂರೋ ಆಸ್ಪತ್ರೆಯ ಮೂಲದಿಂದ ಕೋವಿಡ್–19 ಸೋಂಕು ತಗಲಿದ್ದ ಮೂವರು ಗುಣಮುಖರಾಗಿದ್ದು, ಬುಧವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಉಡುಪಿ ಜಿಲ್ಲೆಯ ಕಾರ್ಕಳದ ನಿವಾಸಿಗಳಾದ 50 ವರ್ಷದ ಮಹಿಳೆ ಹಾಗೂ 26 ವರ್ಷದ ಪುರುಷನಿಗೆ ಇದೇ 12 ರಂದು ಸೋಂಕು ದೃಢವಾಗಿತ್ತು. ಇಬ್ಬರು ಗಂಟಲು ದ್ರವದ ಮಾದರಿಯನ್ನು ಪರೀಕ್ಷಿಸಲಾಗಿದ್ದು, ನೆಗೆಟಿವ್‌ ಬಂದಿರುವುದರಿಂದ ಬಿಡುಗಡೆ ಮಾಡಲಾಗಿದೆ. ಇದೇ 13 ರಂದು ಸೋಂಕು ದೃಢವಾಗಿದ್ದ ಸೋಮೇಶ್ವರ ಪಿಲಾರು ನಿವಾಸಿ 38 ವರ್ಷದ ಮಹಿಳೆಯೂ ಗುಣಮುಖವಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌ ತಿಳಿಸಿದ್ದಾರೆ.

**
ನಗರದಲ್ಲಿ ಹೋಂ ಕ್ವಾರಂಟೈನ್‌ನಲ್ಲಿದ್ದ ಮೂವರು ನಿಯಮ ಉಲ್ಲಂಘಿಸಿ ಹೊರ ಬಂದು ಓಡಾಡಿದ್ದು, ಅವರ ವಿರುದ್ಧ ಪಾಂಡೇಶ್ವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
-ಸಿಂಧೂ ಬಿ.ರೂಪೇಶ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT