ನಾಯಿ ರಕ್ಷಿಸಲು 14 ಕಿ.ಮೀ. ನಡೆದುಬಂದ ಮಾಲೀಕ

7
ಮಡಿಕೇರಿಯಿಂದ ಜೋಡುಪಾಲಕ್ಕೆ ಸಾಹಸಯಾತ್ರೆ

ನಾಯಿ ರಕ್ಷಿಸಲು 14 ಕಿ.ಮೀ. ನಡೆದುಬಂದ ಮಾಲೀಕ

Published:
Updated:
Deccan Herald

ಮಂಗಳೂರು: ಭೂಕುಸಿತದಿಂದ ಮನೆ ತೊರೆದಿದ್ದ ವ್ಯಕ್ತಿಯೊಬ್ಬರು ಮಡಿಕೇರಿಯಿಂದ ಜೋಡುಪಾಲದವರೆಗೆ 14 ಕಿಲೋಮೀಟರ್‌ ದೂರ ನಡೆದುಬಂದು ಮನೆಯಲ್ಲೇ ಉಳಿದಿದ್ದ ನಾಯಿಯನ್ನು ರಕ್ಷಿಸಿದ್ದಾರೆ!

ಜೋಡುಪಾಲ ನಿವಾಸಿ ನಿತಿನ್‌ ಭರತ್‌ ಭೂಕುಸಿತದಿಂದಾಗಿ ಮಡಿಕೇರಿಯಲ್ಲೇ ಉಳಿದಿದ್ದರು. ಅವರ ಕುಟುಂಬ ಎರಡು ದಿನಗಳ ಹಿಂದೆ ಮನೆ ತೊರೆದು, ಸ್ಥಳಾಂತರ ಹೊಂದಿತ್ತು. ನಾಯಿ ಮನೆಯಲ್ಲೇ ಉಳಿದಿರುವ ವಿಷಯ ಶನಿವಾರ ಸಂಜೆ ಅವರಿಗೆ ಗೊತ್ತಾಗಿತ್ತು. ಪ್ರೀತಿಯ ನಾಯಿಯನ್ನು ರಕ್ಷಿಸಲೇಬೇಕು ಎಂದು ಪಣತೊಟ್ಟಿದ್ದ ಅವರು, ಅದಕ್ಕಾಗಿ ಭಾನುವಾರ ಬೆಳಿಗ್ಗೆಯೇ ಮನೆಗೆ ಹೊರಡಲು ಸಿದ್ಧತೆ ಮಾಡಿಕೊಂಡಿದ್ದರು.

ಭಾನುವಾರ ಬೆಳಿಗ್ಗೆಯೇ ಮಡಿಕೇರಿಯಿಂದ ಕಾಲ್ನಡಿಗೆಯಲ್ಲಿ ಹೊರಟಿದ್ದರು. ಮದೆನಾಡು, ಜೋಡುಪಾಲದವರೆಗಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತ ಸಂಭವಿಸಿ ನಡೆದು ಬರಲಾಗದ ಸ್ಥಿತಿ ಇದೆ. ರಸ್ತೆ ಮೇಲೆ ಬಿದ್ದಿರುವ ಮಣ್ಣು, ಕಲ್ಲು, ಮರದ ರಾಶಿಯನ್ನು ಏರುತ್ತಾ, ಇಳಿಯುತ್ತಾ 14 ಕಿ.ಮೀ. ಕ್ರಮಿಸಿ ಮಧ್ಯಾಹ್ನದ ವೇಳೆಗೆ ಮನೆ ತಲುಪಿದರು.

ಹಸಿವಿನಿಂದ ಬಳಲಿದ್ದ ನಾಯಿ ನಿತಿನ್‌ ಮನೆಗೆ ಬರುತ್ತಿದ್ದಂತೆ ಬಾಚಿ ತಬ್ಬಿಕೊಂಡಿತು. ಸಾಕು ಪ್ರಾಣಿಯನ್ನು ಕಂಡು ಕಣ್ಣೀರಾದ ಅವರು, ಅದನ್ನು ಸಂಪಾಜೆಗೆ ಕರೆತರಲು ಮುಂದಾದರು. ಎನ್‌ಡಿಆರ್‌ಎಫ್‌ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ನೆರವಾದರು. ಜೋಡುಪಾಲ ಭೂಕುಸಿತ ಸಂಭವಿಸಿದ ಸ್ಥಳದಲ್ಲಿ ರಸ್ತೆಯ ಮೇಲೆ ಹರಿಯುತ್ತಿದ್ದ ತೊರೆಯನ್ನು ದಾಟಿ ಬರಲು ವ್ಯವಸ್ಥೆ ಮಾಡಿದರು. ಬಳಿಕ ನಾಯಿಯನ್ನು ವಾಹನದಲ್ಲಿ ಕುಳ್ಳಿರಿಸಿಕೊಂಡು ಸಂಪಾಜೆಯತ್ತ ಸಾಗಿದರು.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !