ಮಂಗಳೂರು: ದುಬೈನಿಂದ ಕಳ್ಳಸಾಗಣೆಯಾದ 191 ಗ್ರಾಂ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ಬಜಪೆಯ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಂಡಿದ್ದಾರೆ.
'ದುಬೈನಿಂದ ಮಂಗಳೂರಿಗೆ ಮಂಗಳವಾರ ಬಂದಿಳಿದ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸಿದ್ದ ಪುರುಷ ಹಾಗೂ ಮಹಿಳೆಯನ್ನು ತಪಾಸಣೆಗೆ ಒಳಪಡಿಸಿದ್ದೆವು. ಮಾಸ್ಕ್ ಧರಿಸಿದ್ದ ಪುರುಷ ಪ್ರಯಾಣಿಕನ ಕೆನ್ನೆಯ ಭಾಗವು ಅಸಹಜ ರೀತಿಯಲ್ಲಿ ಉಬ್ಬಿರುವಂತೆ ಕಂಡುಬಂದಿತ್ತು. ಹೆಚ್ಚಿನ ಪರಿಶೀಲನೆ ನಡೆಸಿದಾಗ ಆತನ ಬಾಯಿಯ ಬಳಗೆ ಚಿನ್ನದ ಎರಡು ತುಂಡುಗಳು ಪತ್ತೆಯಾದವು. ಮಹಿಳೆಯನ್ನು ಹೆಚ್ಚಿನ ತಪಾಸಣೆಗೆ ಒಳಪಡಿಸಿದಾಗ, ಆಕೆ ಧರಿಸಿದ್ದ ಹೇರ್‌ಬ್ಯಾಂಡ್‌ನಲ್ಲಿ ಚಿನ್ನವನ್ನು ಅಡಗಿಸಿಟ್ಟು ಸಾಗಿಸಿರುವುದು ಕಂಡುಬಂತು. ಆ ಹೇರ್‌ಬ್ಯಾಂಡ್‌ನಲ್ಲಿದ್ದ ಚಿನ್ನದ ಮಣಿಗಳಿಗೆ ರೋಡಿಯಂ ಲೇಪಿಸಿ ಕಳ್ಳಸಾಗಣೆ ಮಾಡಲಾಗಿತ್ತು’ ಎಂದು ಕಸ್ಟಮ್ಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
‘ವಶಪಡಿಸಿಕೊಂಡ ಚಿನ್ನದ ಒಟ್ಟು ಮೌಲ್ಯ ₹ 11.44 ಲಕ್ಷ ಎಂದು ಅಂದಾಜಿಸಲಾಗಿದೆ’ ಎಂದು ಅವರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.