ಬೆಳ್ತಂಗಡಿ (ದಕ್ಷಿಣ ಕನ್ನಡ): ತಾಲ್ಲೂಕಿನ ಗೇರುಕಟ್ಟೆ ರೇಷ್ಮೆ ರೋಡ್ ಬಳಿ ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ನ ಬಾಗಿಲು ಹಠಾತ್ತನೆ ತೆರೆದುಕೊಂಡ ಪರಿಣಾಮ, ಇಬ್ಬರು ವಿದ್ಯಾರ್ಥಿನಿಯರು ರಸ್ತೆಗೆ ಬಿದ್ದು ಮಂಗಳವಾರ ಗಾಯಗೊಂಡಿದ್ದಾರೆ. ಒಬ್ಬ ವಿದ್ಯಾರ್ಥಿನಿ ಬಸ್ನಿಂದ ಬಿದ್ದು ಗಾಯಗೊಂಡಿದ್ದರೂ, ಪ್ರಥಮ ಚಿಕಿತ್ಸೆ ಪಡೆದು ಸಹಾಯಕರ ನೆರವಿನಿಂದ ಎಸ್ಎಸ್ಎಲ್ಸಿ ಹಿಂದಿ ಪರೀಕ್ಷೆ ಬರೆದಳು.

ಗೇರುಕಟ್ಟೆಯ ಸಹೋದರಿಯರಾದ ಚರಿಷ್ಮಾ (15) ಹಾಗೂ ಜಸ್ಮಿತಾ (17) ರಸ್ತೆಗೆ ಬಿದ್ದು ಗಾಯಗೊಂಡ ವಿದ್ಯಾರ್ಥಿನಿಯರು.

ಚರಿಷ್ಮಾ ಬೆಳ್ತಂಗಡಿ ವಾಣಿ ಇಂಗ್ಲಿಷ್ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ. ಆಕೆ ಎಸ್ಎಸ್ಎಲ್ಸಿ ಪರೀಕ್ಷೆಗೆ ಹಾಜರಾಗಲು ಬೆಳ್ತಂಗಡಿಯ ಸೇಂಟ್ ತೆರೆಸಾ ಶಾಲೆಯ ಪರೀಕ್ಷಾ ಕೇಂದ್ರಕ್ಕೆ ಹಾಗೂ ಆಕೆಯ ಅಕ್ಕ ಜಸ್ಮಿತಾ ಪ್ರಥಮ ಪಿ.ಯು. ಫಲಿತಾಂಶ ನೋಡಲು ವಾಣಿ ಪದವಿ ಪೂರ್ವ ಕಾಲೇಜಿಗೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ಬೆಳ್ತಂಗಡಿ ಕಡೆಗೆ ಹೋಗುತ್ತಿದ್ದ ಬಸ್ ಅನ್ನು ವಿದ್ಯಾರ್ಥಿನಿಯರಿಬ್ಬರೂ ಗೇರುಕಟ್ಟೆಯಲ್ಲಿ ಹತ್ತಿದ್ದರು. ಪ್ರಯಾಣಿಕರಿಂದ ಬಸ್ ಭರ್ತಿ ಆಗಿತ್ತು. ಗೇರುಕಟ್ಟೆ ತಿರುವಿನ ಬಳಿ ಅನಿರೀಕ್ಷಿತವಾಗಿ ಬಸ್ಸಿನ ಬಾಗಿಲು ತೆರೆದುಕೊಂಡಿತ್ತು. ಬಾಗಿಲ ಬಳಿಯೇ ನಿಂತಿದ್ದ ಸಹೋದರಿಯರು ರಸ್ತೆಗೆ ಬಿದ್ದರು. ಸ್ಥಳದಲ್ಲಿದ್ದವರು ತಕ್ಷಣವೇ ಅವರ ರಕ್ಷಣೆಗೆ ಧಾವಿಸಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಗಾಯಗೊಂಡಿದ್ದ ಚರಿಷ್ಮಾ ಗುರುವಾಯನಕೆರೆಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಬಳಿಕ ಸಹಾಯಕರ ನೆರವಿನಿಂದ ಹಿಂದಿ ಪರೀಕ್ಷೆಗೆ ಹಾಜರಾದಳು. ಪರೀಕ್ಷೆ ಮುಗಿದ ಬಳಿಕ ಮತ್ತೆ ಚಿಕಿತ್ಸೆಗಾಗಿ ಉಜಿರೆಯ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಆಕೆಯ ಅಕ್ಕ ಜಸ್ಮಿತಾ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

‘ಬಸ್ನಲ್ಲಿ ಕಿಕ್ಕಿರಿದು ಪ್ರಯಾಣಿಕರಿದ್ದರು. ತಿರುವಿನಲ್ಲಿ ಬಸ್ನ ಬಾಗಿಲು ತೆರದುಕೊಂಡಿದ್ದರಿಂದ ಈ ದುರ್ಘಟನೆ ಸಂಭವಿಸಿದೆ. ಬಿದ್ದು ಗಾಯಗೊಂಡ ವಿದ್ಯಾರ್ಥಿನಿಯರಿಗೆ ಕೆಎಸ್ಆರ್ಟಿಸಿ ವತಿಯಿಂದಲೇ ಚಿಕಿತ್ಸೆ ಕೊಡಿಸಿದ್ದೇವೆ. ಬಸ್ನ ಸಿಬ್ಬಂದಿ ವಿರುದ್ಧ ಸದ್ಯಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಕೆಎಸ್ಆರ್ಟಿಸಿ ಪುತ್ತೂರು ವಿಭಾಗದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.