ಪುತ್ತೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 9 ಹಿಂದೂ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಯಿಂದ ಒಟ್ಟು ₹ 65 ಲಕ್ಷ ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕ ಅಶೋಕ್ಕುಮಾರ್ ರೈ ತಿಳಿಸಿದ್ದಾರೆ.

ಅನುದಾನಕ್ಕಾಗಿ ಅರ್ಜಿ ಸಲ್ಲಿಸಿರುವ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪುತ್ತೂರು ಹಾಗೂ ಬಂಟ್ವಾಳ ತಾಲ್ಲೂಕು ವ್ಯಾಪ್ತಿಯ ವಿವಿಧ ದೇವಸ್ಥಾನ ಮತ್ತು ದೈವಸ್ಥಾನಗಳ ಅಭಿವೃದ್ಧಿಗೆ ಅನುದಾನ ಒದಗಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಧಾರ್ಮಿಕ ಕೆಂದ್ರಗಳಿಗೆ ಹಂತ ಹಂತವಾಗಿ ಅನುದಾನ ಒದಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಬಂಟ್ವಾಳ ತಾಲ್ಲೂಕಿನ ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ₹ 5 ಲಕ್ಷ, ಮಾಣಿಲ ಗ್ರಾಮದ ಕುಟ್ಯಮಡ್ಕ ಕೊರಗ ತನಿಯ ಹಾಗೂ ಪರಿವಾರ ದೈವಗಳ ದೈವಸ್ಥಾನಕ್ಕೆ ₹ 3 ಲಕ್ಷ, ಪುತ್ತೂರು ತಾಲ್ಲೂಕಿನ ಅರಿಯಡ್ಕ ಗ್ರಾಮದ ಜಾರತ್ತಾರು ಮಹಾಮಾರಿಯಮ್ಮ ದೈವಸ್ಥಾನಕ್ಕೆ ₹ 5 ಲಕ್ಷ, ಬನ್ನೂರು ಗ್ರಾಮದ ಕುಂಟ್ಯಾನ ಸದಾಶಿವ ದೇವಸ್ಥಾನಕ್ಕೆ ₹ 10 ಲಕ್ಷ, ಕೆಯ್ಯೂರು ಗ್ರಾಮದ ಸಂತೋಷ ನಗರದ ಅಣ್ಣಪ್ಪ ಪಂಜುರ್ಲಿ ಪರಿವಾರ ದೈವಸ್ಥಾನಕ್ಕೆ ₹ 5 ಲಕ್ಷ, ಪಡುವನ್ನೂರು ಗ್ರಾಮದ ಪಡುಮಲೆ ಪೂಮಾಣಿ-ಕಿನ್ನಿಮಾಣಿ, ರಾಜನ್ ದೈವಸ್ಥಾನಕ್ಕೆ ₹ 8 ಲಕ್ಷ, ಸರ್ವೆ ಗ್ರಾಮದ ಕಲ್ಪಣೆಯ ಆದಿಮೊಗೆರ್ಕಳ ಗರಡಿಗೆ ₹ 10 ಲಕ್ಷ, ಉಪ್ಪಿನಂಗಡಿ ಗ್ರಾಮದ ಸತ್ಯಸಾರಾಮಣಿ ಪರಿವಾರ ದೈವಗಳ ದೈವಸ್ಥಾನಕ್ಕೆ ₹ 5 ಲಕ್ಷ, ನೆಕ್ಕಿಲಾಡಿ ಗ್ರಾಮದ ಗುರುರಾಘವೇಂದ್ರ ಮಠಕ್ಕೆ ₹ 9 ಲಕ್ಷ ಅನುದಾನ ಬಿಡುಗಡೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.