ಬುಧವಾರ, ಏಪ್ರಿಲ್ 14, 2021
31 °C
ಮಂಗಳೂರು ವಿಮಾನ ನಿಲ್ದಾಣದ ಮೂಲಕ ಕಳ್ಳ ಸಾಗಾಣಿಕೆ

4 ವರ್ಷಗಳಲ್ಲಿ 95.12 ಕೆ.ಜಿ ಚಿನ್ನ ಜಪ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಮಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2017ರಿಂದ ಈ ತನಕ ಕಳ್ಳ ಸಾಗಾಣಿಕೆಗೆ ಯತ್ನ ಪ್ರಕರಣಗಳಲ್ಲಿ ಒಟ್ಟು 95.12 ಕೆ.ಜಿ ಚಿನ್ನ ಜಪ್ತಿ ಮಾಡಲಾಗಿದೆ.  

ಗಲ್ಫ್‌ ರಾಷ್ಟ್ರಗಳಿಂದ ಬಂದ ಪ್ರಯಾಣಿಕರಲ್ಲಿ ಈ ಚಿನ್ನವು ದೊರೆತಿದೆ ಎಂದು ಮಾಹಿತಿ ಹಕ್ಕು ಅರ್ಜಿ ಅಡಿಯಲ್ಲಿ ವಿಮಾನ ನಿಲ್ದಾಣದಲ್ಲಿನ ಕಸ್ಟಮ್ಸ್‌ ಸಹಾಯಕ ಆಯುಕ್ತರು ಮಾಹಿತಿ ನೀಡಿದ್ದಾರೆ.

ಕಸ್ಟಮ್ಸ್ ಕಾಯ್ದೆ 1962ರ ಅನ್ವಯ ಸೂಕ್ತ ಕ್ರಮಗಳನ್ನು ಕೈಗೊಂಡ ಬಳಿಕ ಈ ಚಿನ್ನವನ್ನು ಕಾಲಕಾಲಕ್ಕೆ ವಿಲೇವಾರಿ ಮಾಡಲಾಗುತ್ತಿದೆ.

ಚಾಕೊಲೇಟ್, ಚೂಯಿಂಗ್‌ ಗಮ್, ಬುರ್ಕಾ ಕಸೂತಿ, ಫೇಸ್ ಕ್ರೀಂ, ಮೇಕಪ್‌ ಕಿಟ್ಸ್, ಎಲೆಕ್ಟ್ರಾನಿಕ್ಸ್‌ ಸಾಧನಗಳು, ಪೆನ್, ನ್ಯಾಪ್‌ಕಿನ್, ಟ್ರಾಲಿ ಚಕ್ರಗಳ ಒಳಗೆ ಇರಿಸಿರುವುದಲ್ಲದೇ ಕೆಲವೊಂದು ಪ್ರಕರಣದಲ್ಲಿ ಗುದದ್ವಾರದ ಬಳಿ ಮಾತ್ರೆರೂಪದಲ್ಲಿ ಚಿನ್ನವನ್ನು ಇರಿಸಿದ ಪ್ರಕರಣವನ್ನೂ ವಿಮಾನ ನಿಲ್ದಾಣದ ಸಿಬ್ಬಂದಿ ಪತ್ತೆ ಮಾಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು