ಮಂಗಳೂರು: ಆಮ್ ಆದ್ಮಿ ಪಾರ್ಟಿಯು ದಕ್ಷಿಣ ಕನ್ನಡ ಜಿಲ್ಲೆಯ ಮೂರು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ ಮಾಡಿದೆ. ಮಂಗಳೂರು ದಕ್ಷಿಣ ಕ್ಷೇತ್ರಕ್ಕೆ ಸಂತೋಷ್ ಕಾಮತ್, ಮೂಲ್ಕಿ– ಮೂಡುಬಿದಿರೆ ಕ್ಷೇತ್ರಕ್ಕೆ ವಿಜಯನಾಥ್ ವಿಠಲ ಶೆಟ್ಟಿ, ಸುಳ್ಯ ಕ್ಷೇತ್ರಕ್ಕೆ ಸುಮನಾ ಬೆಳ್ಳಾರ್ಕರ್ ಹೆಸರನ್ನು ಅಂತಿಮಗೊಳಿಸಲಾಗಿದೆ.
ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ್ ಎಡಮಲೆ ಅವರು, ‘ಬೆಂಗಳೂರಿನಲ್ಲಿ ಸೋಮವಾರ ಬಿಡುಗಡೆಗೊಳಿಸಿರುವ ಮೊದಲ ಪಟ್ಟಿಯಲ್ಲಿ ಜಿಲ್ಲೆಯ ಮೂರು ಕ್ಷೇತ್ರಗಳ ಅಭ್ಯರ್ಥಿಗಳು ಅಂತಿಮಗೊಂಡಿದ್ದು, ಎರಡನೇ ಪಟ್ಟಿ ಮಾರ್ಚ್ 27 ರಂದು ಬಿಡುಗಡೆಯಾಗಿದೆ. ಆಗ ಇನ್ನುಳಿದ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಘೋಷಣೆಯಾಗಲಿದೆ’ ಎಂದರು.
ಸಂತೋಷ್ ಕಾಮತ್ ಅವರು, ರೆಡಿಮೇಡ್ ವಸ್ತ್ರಗಳ ಹೋಲ್‌ಸೇಲ್ ಮತ್ತು ರಿಟೇಲ್ ಮಳಿಗೆ ಹೊಂದಿದ್ದು, ಕೋವಿಡ್ ವೇಳೆ ವ್ಯಾಪಾರಿಗಳ ಧ್ವನಿಯಾಗಿದ್ದರು. ಬಿ.ಕಾಂ ಪದವೀಧರರಾಗಿರುವ ಅವರು ಹಲವು ಸಂಘ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಸುಮನಾ ಬೆಳ್ಳಾರ್ಕರ್ ಅವರು ಸುಳ್ಯ ಶಾಸಕರಾಗಿದ್ದ ಕೆ. ಕುಶಲ ಅವರ ಪುತ್ರಿ. ಎಂಬಿಎ ಪದವೀಧರೆ. ಆಶ್ರಯ ಸಮಿತಿ ಸದಸ್ಯರಾಗಿದ್ದರು. ವಿಜಯನಾಥ ವಿಠ್ಠಲ ಶೆಟ್ಟಿ ಅವರು ಮಾಜಿ ಯೋಧರು, ಮೂಡುಬಿದಿರೆಯ ಉದ್ಯಮಿಯಾಗಿರುವ ಇವರು ಶಾಸ್ತಾವು ಭೂತನಾಥೇಶ್ವರ ಟ್ರಸ್ಟ್‌ನ ಮುಖ್ಯ ಸಂಚಾಲಕರಾಗಿದ್ದಾರೆ ಎಂದು ತಿಳಿಸಿದರು.
ಪಕ್ಷದ ಪ್ರಮುಖರಾದ ವಿವೇಕಾನಂದ ಸಾಲ್ಯಾನ್, ವೆಂಕಟೇಶ್ ಬಾಳಿಗಾ ಇ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.