ಉಪ್ಪಿನಂಗಡಿಯಲ್ಲಿ ತೀರ್ಥ ಸ್ನಾನ,

7
ಆಟಿ ಅಮಾವಾಸ್ಯೆ:ವಿಶೇಷ ಪೂಜೆ

ಉಪ್ಪಿನಂಗಡಿಯಲ್ಲಿ ತೀರ್ಥ ಸ್ನಾನ,

Published:
Updated:
Deccan Herald

ಉಪ್ಪಿನಂಗಡಿ: ಆಟಿ ಅಮಾವಾಸ್ಯೆ ದಿನವಾದ ಶನಿವಾರ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ಬಳಿ ನದಿ ತಟದಲ್ಲಿ, ಸಂಗಮ ಸ್ನಾನ ಘಟ್ಟದಲ್ಲಿ ಸಾವಿರಾರು ಮಂದಿ ಭಕ್ತಾಧಿಗಳು ತೀರ್ಥ ಸ್ನಾನ ಮಾಡಿ, ದೇವಳದಲ್ಲಿ ವಿಶೇಷ ಪೂಜೆ ನೆರವೇರಿಸಿ ಪುನೀತರಾದರು.

ಬೆಳಿಗ್ಗೆನಿಂದಲೇ ದೇವಳದ ಬಳಿಯಲ್ಲಿ ಜಮಾಯಿಸಿದ ಭಕ್ತಾಧಿಗಳು ಸರತಿ ಸಾಲಿನಲ್ಲಿ ತೆರಳಿ, ಸಂಗಮ ಸ್ನಾನ ಘಟ್ಟದಲ್ಲಿ ಮಿಂದು ತೀರ್ಥ ಸ್ನಾನ ಮಾಡಿದರು. ಬಳಿಕ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರೆವೇರಿಸಿದರು. ಮಧ್ಯಾಹ್ನದ ತನಕ ಸುಮಾರು 7 ಸಾವಿರಕ್ಕೂ ಮಿಕ್ಕಿ ಮಂದಿ ಭಕ್ತಾಧಿಗಳು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪೂಜೆ ನೆರವೇರಿಸಿ ಪುನೀತರಾದರು.

ಭಕ್ತರಿಗೆ ಉಪಾಹಾರ : ಭಕ್ತರು ನಸುಕಿನಿಂದಲೇ ದೇವಳಕ್ಕೆ ಬಂದು ವಿವಿಧ ಇಷ್ಠಾರ್ಥ ಸೇವೆಗಳನ್ನು ಪೂರೈಸಿದ ಬಳಿಕ ಅವರಿಗೆ ಬೆಳಗ್ಗಿನ ಉಪಹಾರ ವ್ಯವಸ್ಥೆ ಮಾಡಲಾಗಿತ್ತು.  3 ಸಾವಿರ ಮಂದಿ ಉಪಾಹಾರ ಸ್ವೀಕರಿಸಿದ್ದಾರೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ. ರಘುನಾಥ ರೈ ತಿಳಿಸಿದರು.

ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರುಗಳಾದ ಪ್ರಕಾಶ್ ರೈ ಬೆಳ್ಳಿಪ್ಪಾಡಿ, ಡಾ. ರಾಜಾರಾಮ್, ಕಾರ್ಯನಿರ್ವಹಣಾಧಿಕಾರಿ ಹರೀಶ್ಚಂದ್ರ, ಮೆನೇಜರ್ ವೆಂಕಟೇಶ್, ಸಹಾಯಕ ಕೃಷ್ಣ ಪ್ರಸಾದ್ ಮುಂಚೂಣಿಯಲ್ಲಿ ನಿಂತು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !