ಬಂಟ್ವಾಳ: ಕಾರಿಂಜ ಕ್ಷೇತ್ರ, ನರಹರಿ ಪರ್ವತದಲ್ಲಿ ಭಕ್ತರಿಂದ ತೀರ್ಥಸ್ನಾನ

7

ಬಂಟ್ವಾಳ: ಕಾರಿಂಜ ಕ್ಷೇತ್ರ, ನರಹರಿ ಪರ್ವತದಲ್ಲಿ ಭಕ್ತರಿಂದ ತೀರ್ಥಸ್ನಾನ

Published:
Updated:
Deccan Herald

ಬಂಟ್ವಾಳ : ತಾಲ್ಲೂಕಿನ ಪುರಾಣ ಪ್ರಸಿದ್ಧ ಕಾರಿಂಜೇಶ್ವರ ದೇವಸ್ಥಾನದಲ್ಲಿ ಶನಿವಾರ ಆಟಿ ಅಮಾವಾಸ್ಯೆ ಪ್ರಯುಕ್ತ ಭಕ್ತರು ತೀರ್ಥಸ್ನಾನ ಮಾಡಿ ಪಾರ್ವತಿ, ಪರಮೇಶ್ವರ ದೇವರ ದರ್ಶನ ಪಡೆದರು.

ಇಲ್ಲಿನ ಗದಾತೀರ್ಥದಲ್ಲಿ ತೀರ್ಥಸ್ನಾನ ಬಳಿಕ ಮೀನುಗಳಿಗೆ ಧವಸ ಧಾನ್ಯ ಸಮರ್ಪಿಸಿದ ಬಳಿಕ ಬಂಡೆ ಮೇಲಿರುವ ಉಂಗುಷ್ಟ ತೀರ್ಥ, ಜಾನು ತೀರ್ಥ ಕುಂಡಗಳಲ್ಲಿ ತೀರ್ಥ ಪ್ರೋಕ್ಷಣೆ ಮಾಡಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.

ಮಾಜಿ ಸಚಿವ ಬಿ. ರಮಾನಾಥ ರೈ, ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಪದ್ಮಶೇಖರ ಜೈನ್, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಿ.ಜಿನರಾಜ ಆರಿಗ  ಉಪಸ್ಥಿತರಿದ್ದರು.

ಇಲ್ಲಿನ ಮೆಲ್ಕಾರ್-ಕಲ್ಲಡ್ಕ ರಾಷ್ಟ್ರೀಯ ಹೆದ್ದಾರಿ ನಡುವಿನ ಪ್ರಸಿದ್ಧ ನರಹರಿ ಪರ್ವತಕ್ಕೆ ಸಾವಿರಾರು ಮಂದಿ ಭಕ್ತರು ಭೇಟಿ ನೀಡಿ ಬಂಡೆ ಮೇಲಿರುವ ಶಂಖ, ಚಕ್ರ, ಗದಾ, ಪದ್ಮ ತೀರ್ಥ ಕುಂಡದಲ್ಲಿ ತೀರ್ಥಸ್ನಾನ ಮಾಡಿದರು.

ಇಲ್ಲಿನ ಸದಾಶಿವ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡರು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ಪ್ರಶಾಂತ ಮಾರ್ಲ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ.ಆತ್ಮರಂಜನ್ ರೈ  ಇದ್ದರು.

ದಿನವಿಡೀ ಮಳೆಯೂ ಕಡಿಮೆ ಮತ್ತು ಶಾಲಾ ಕಾಲೇಜುಗಳಿಗೆ ರಜೆ ಇದ್ದ  ಕಾರಣ ತಾಲ್ಲೂಕಿನ ವಾಮದಪದವು ಸಮೀಪದ ನೀಲಿ ಶ್ರೀ ನೀಲಕಂಠೇಶ್ವರ ದೇವಸ್ಥಾನ, ತಾಕೊಡೆ ಸಮೀಪದ ಹನ್ನೆರಡುಕವಲು, ಬಂಟ್ವಾಳ, ಪೆದಮಲೆ, ತುಂಬೆ, ರಾಯಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಗಳಲ್ಲಿ  ಭಕ್ತರ ಸಂಖ್ಯೆ ಹೆಚ್ಚಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !