ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಮಾಪನ ಅಧಿಕಾರಿ ಎಸಿಬಿ ಬಂಧನ

ಹಿರೇಬಂಡಾಡಿ: ಪೋಡಿ ವಿಭಜನೆಗೆ ಲಂಚ
Last Updated 4 ಅಕ್ಟೋಬರ್ 2019, 13:26 IST
ಅಕ್ಷರ ಗಾತ್ರ

ಉಪ್ಪಿನಂಗಡಿ: ಜಮೀನು ಪೋಡಿ ವಿಭಜನೆ (ಪ್ಲಾಟಿಂಗ್) ಮಾಡಿಕೊಡಲು ಲಂಚ ಪಡೆಯುತ್ತಿದ್ದ ವೇಳೆ ಭೂಮಾಪನ ಅಧಿಕಾರಿ (ಸರ್ವೆಯರ್) ಶುಕ್ರವಾರ ಉಪ್ಪಿನಂಗಡಿಯಲ್ಲಿ ಭ್ರಚ್ಟಾಚಾರ ನಿಗ್ರಹ ದಳ ಬಂಧಿಸಿದೆ.

ಪುತ್ತೂರು ತಾಲ್ಲೂಕು ಕಚೇರಿಯ ಭೂ ಮಾಪನ ಇಲಾಖೆಯ ಅಧಿಕಾರಿ ಎಂ. ಶಿವಕುಮಾರ್ ಬಂಧಿತ ಆರೋಪಿ. ಹಿರೇಬಂಡಾಡಿ ಗ್ರಾಮದ ಗೋಪಾಲ ಮೊಗೇರ ಎಂಬುವರಿಂದ ಜಮೀನಿನ ಪೋಡಿ ಅಳತೆಗಾಗಿ ಲಂಚ ಪಡೆಯುತ್ತಿದ್ದಾಗ ಎಸಿಬಿ ಬಲೆಗೆ ಕೆಡವಿದೆ.

‘ಗೋಪಾಲ ಮುಗೇರ ತನ್ನ ತಾಯಿ ಹಾಗೂ ಅಣ್ಣನ ಜಂಟಿ ಖಾತೆಯಲ್ಲಿದ್ದ ಜಮೀನಿನ ಪೋಡಿ ವಿಭಜನೆಗಾಗಿ 2015ರಲ್ಲಿ ಅರ್ಜಿ ಸಲ್ಲಿಸಿದ್ದರು. ನಾಲ್ಕು ವರ್ಷವಾದರೂ ಪೋಡಿ ವಿಭಜನೆ ಮಾಡಿಕೊಡಲು ಭೂಮಾಪನ ಇಲಾಖೆ ಮುಂದಾಗಿರಲಿಲ್ಲ. ಈ ಬಗ್ಗೆ ವಿಚಾರಿಸಿದಾಗ ಭೂಮಾಪಕ ಎಂ. ಶಿವಕುಮಾರ್ ಇದಕ್ಕೆ ಹಲವರಿಗೆ ಹಣ ಕೊಡಲು ಇದ್ದು, ₹30 ಸಾವಿರ ಲಂಚ ನೀಡಬೇಕೆಂದು ಗೋಪಾಲ ಮೊಗೇರ ಅವರಲ್ಲಿ ಬೇಡಿಕೆ ಇಡಲಾಗಿತ್ತು. ಕೊನೆಗೆ₹ 20 ಕೊಡಲೇ ಬೇಕು. ಕಂತಿನಲ್ಲಿ ನೀಡಲು
ಸೂಚಿಸಲಾಗಿತ್ತು’. ಈ ಬಗ್ಗೆ ಗೋಪಾಲ ಮೊಗೇರ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದರು.

ಕಾರ್ಯಾಚರಣೆಯಲ್ಲಿ ಪ್ರಭಾರ ಎಸ್ಪಿ ಸುಧೀರ್ ಹೆಗ್ಡೆ, ಇನ್‌ಸ್ಪೆಕ್ಟರ್‌ಗಳಾದ ಯೋಗೀಶ್ ಕುಮಾರ್, ಶ್ಯಾಮಸುಂದರ್, ಪೊಲೀಸ್ ಸಿಬ್ಬಂದಿ ಹರಿಪ್ರಸಾದ್, ಕೆ. ರಾಧಾಕೃಷ್ಣ, ಉಮೇಶ್, ಡಿ. ರಾಧಾಕೃಷ್ಣ, ಪ್ರಶಾಂತ್, ವೈಶಾಲಿ, ರಾಕೇಶ್, ರಾಜೇಶ್ ಹಾಗೂ ಗಣೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT