ಬಸ್‌ಗಳ ಡಿಕ್ಕಿ: 50 ಮಂದಿಗೆ ಗಾಯ

7

ಬಸ್‌ಗಳ ಡಿಕ್ಕಿ: 50 ಮಂದಿಗೆ ಗಾಯ

Published:
Updated:
Deccan Herald

ಉಳ್ಳಾಲ : ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕೊಲ್ಯ ಅಡ್ಕ ಸಮೀಪ ಶನಿವಾರ ಬಸ್‌ಗಳ ಮಧ್ಯೆ ನಡೆದ ಭೀಕರ ಅಪಘಾತದಲ್ಲಿ 50 ಮಂದಿ ಗಾಯಗೊಂಡಿದ್ದಾರೆ.

ಅಪೂರ್ವ ಭಟ್, ಜಯಂತಿ, ಮಾರಪ್ಪ, ಪ್ರಜ್ವಲ್ ಪಿ.ಎನ್, ಜಿತೀನ್, ರಾಜೇಶ್, ವೆಂಕಟೇಶ್ವರಿ, ಪುಷ್ಪಾವತಿ, ಆಶಾನ್, ಶಾರದಾ, ಹನುಮಂತಪ್ಪ, ವೈಶಾಖ್, ಸುಕನ್ಯ ಭಟ್, ಬಾಶು, ಲತೀಫ್, ಸುಮಲತಾ, ಕಿರ್ತನಾ, ಸಾಜೀಯಾ, ಪದ್ಮನಾಭ, ಮೈಮುನಾ, ರುಬೀನಾ ಗಾಯಗೊಂಡವರು.

ಕೊಣಾಜೆಯಿಂದ ಮಾಡೂರು ಮಾರ್ಗವಾಗಿ ಕೊಟ್ಟಾರ ಕಡೆಗೆ ಹೋಗುತ್ತಿದ್ದ ಖಾಸಗಿ ಬಸ್‌ ಕೊಲ್ಯ ಸಮೀಪದ ಅಡ್ಕ ಎಂಬಲ್ಲಿ ಪ್ರಯಾಣಿಕರನ್ನು ಹತ್ತಿಸಲು ನಿಂತಿದ್ದ ಸಂದರ್ಭ ಹಿಂಬದಿಯಿಂದ ಕಾಸರಗೋಡಿನಿಂದ ಮಂಗಳೂರಿಗೆ ತೆರಳುತ್ತಿದ್ದ ಕರ್ನಾಟಕ ಸಾರಿಗೆ ಬಸ್‌ ಡಿಕ್ಕಿ ಹೊಡೆದಿದೆ.

ಚಾಲಕನ ಅತೀ ವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಘಟನೆಗೆ ಮೂಲ ಕಾರಣವಾಗಿದ್ದು, ಪರಿಣಾಮವಾಗಿ ಖಾಸಗಿ ಬಸ್‌ನ ಹಿಂಬದಿಯಲ್ಲಿದ್ದವರಿಗೆ ಹಾಗೂ ಸಾರಿಗೆ ಬಸ್ಸಿನ ಮುಂಭಾಗದಲ್ಲಿದ್ದವರಿಗೆ ಗಾಯಗಳಾಗಿವೆ. ಮಂಗಳೂರು ಮಾರ್ಗವಾಗಿ ಚಲಿಸುತ್ತಿದ್ದ ಲಾರಿಯನ್ನು ಹಿಂದಿಕ್ಕುವ ಭರದಲ್ಲಿ   ಅಪಘಾತ ಸಂಭವಿಸಿದೆ ಎಂಧು ಸ್ಥಳೀಯರು ತಿಳಿಸಿದ್ದಾರೆ. ಸ್ಥಳೀಯರು  ಗಾಯಾಳುಗಳನ್ನು ತೊಕ್ಕೊಟ್ಟುವಿನ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.

 ಮಹಿಳೆಗೆ ತೀವ್ರ ಗಾಯ: ಕರ್ನಾಟಕ ಸಾರಿಗೆ ಬಸ್‌ನಲ್ಲಿದ್ದ ಮಹಿಳೆಯೊಬ್ಬರು ತೊಕ್ಕೊಟ್ಟು  ನಿಲ್ದಾಣದಲ್ಲಿ ಇಳಿಯಬೇಕಾಗಿದ್ದ ಕಾರಣ ಮುಂಭಾಗದಲ್ಲಿ ಬಂದು ನಿಂತಿದ್ದರು. ಡಿಕ್ಕಿಯ ರಭಸಕ್ಕೆ  ಮಹಿಳೆ  ಕೆಳಗೆ ಬಿದ್ದು ಮುಖದ ಭಾಗಕ್ಕೆ ಗಂಭೀರ ಗಾಯಗಳಾಗಿವೆ. ಮಂಗಳೂರು ದಕ್ಷಿಣ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !