ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪುತ್ತೂರು | ಕಾಡು ಹಂದಿ ದಾಳಿ: ಯುವಕನಿಗೆ ಗಾಯ

Published 20 ಆಗಸ್ಟ್ 2024, 12:51 IST
Last Updated 20 ಆಗಸ್ಟ್ 2024, 12:51 IST
ಅಕ್ಷರ ಗಾತ್ರ

ಪುತ್ತೂರು: ತಾಲ್ಲೂಕಿನ ಅರಿಯಡ್ಕ ಗ್ರಾಮದ ಕುರುಂಜ ಸಮೀಪದ ಮಣ್ಣಾಪು ಎಂಬಲ್ಲಿ ಮಂಗಳವಾರ ಬೆಳಿಗ್ಗೆ ಸ್ಕೂಟರ್‌ನಲ್ಲಿ ತೆರಳುತ್ತಿದ್ದ ಯುವಕನ ಮೇಲೆ ಕಾಡು ಹಂದಿ ದಾಳಿ ನಡೆಸಿದೆ. ಘಟನೆಯಲ್ಲಿ ಯುವಕ ಗಂಭೀರ ಗಾಯಗೊಂಡಿದ್ದು, ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮಣ್ಣಾಪು ನಿವಾಸಿ ಸೀತಾರಾಮ ನಾಯ್ಕ ಎಂಬುವರ ಪುತ್ರ, ಕುಂಬ್ರದ ವಿಶಾಲ್ ಎಂಟರ್‌ಪ್ರೈಸಸರ್‌ ಪೆಟ್ರೋಲ್ ಪಂಪ್‌ನ ಮ್ಯಾನೇಜರ್‌ ಧನುಷ್ (22) ಗಾಯಗೊಂಡವರು.

ಪಾಪೆಮಜಲು -ಮಣ್ಣಾಪು ರಸ್ತೆಯ ಮಣ್ಣಾಪು ಬಳಿಯ ಕಚ್ಚಾ ರಸ್ತೆಯ ಇಳಿಜಾರು ಭಾಗದಲ್ಲಿ ಕಾಡು ಹಂದಿ ಏಕಾಏಕಿಯಾಗಿ ದಾಳಿ ನಡೆಸಿದೆ. ದಾಳಿಯಿಂದಾಗಿ ಸ್ಕೂಟರ್ ನಿಯಂತ್ರಣ ಕಳಕೊಂಡು ರಸ್ತೆಗೆ ಬಿದ್ದ ಧನುಷ್ ಅವರ ಕೈ, ಕಾಲು, ತೊಡೆಯ ಭಾಗಕ್ಕೆ ಕಚ್ಚಿ ಗಾಯಗೊಳಿಸಿದೆ. ಧನುಷ್ ಅವರ ಬೊಬ್ಬೆ ಕೇಳಿ ಬಂದ ಸಂಬಂಧಿಕರೊಬ್ಬರು ಹಂದಿಯನ್ನು ಓಡಿಸಿದ್ದಾರೆ. ಸಂಪ್ಯ ಪೊಲೀಸರು ಮಾಹಿತಿ ಪಡೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT