ಪುತ್ತೂರು: ಕೆಎಸ್ಆರ್ಟಿಸಿ ಬಸ್ ಮತ್ತು ಬೈಕ್ ನಡುವೆ ಭಾನುವಾರ ನಡೆದ ಅಪಘಾತದಲ್ಲಿ ಸವಾರ ತಂದೆ, ಸಹಸವಾರ ಪುತ್ರ ಮೃತಪಟ್ಟಿದ್ದಾರೆ.

ಪುತ್ತೂರು ನಗರದ ಹೊರವಲಯದ ಕಬಕ ಸಮೀಪದ ಕೂವೆತ್ತಿಲ ಎಂಬಲ್ಲಿ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ತಿರುವಿನಲ್ಲಿ ಅವಘಡ ನಡೆದಿದೆ.

ಬಂಟ್ವಾಳ ತಾಲ್ಲೂಕಿನ ನರಿಕೊಂಬು ಸಮೀಪದ ನಾಯಿಲ ಬೋರುಗುಡ್ಡೆ ನಿವಾಸಿ, ನರಿಕೊಂಬು ಗ್ರಾಪಂ ಸದಸ್ಯ, ಸಮಾಜ ಸೇವಾ ಬ್ಯಾಂಕ್ ನಿರ್ದೇಶಕ ಅರುಣ್ ಕುಲಾಲ್ (45), ಅವರ ಪುತ್ರ, ಪ್ರಥಮ ಪಿಯುಸಿಗೆ ದಾಖಲಾಗಿದ್ದ ಧ್ಯಾನ್ (15) ಮೃತಪಟ್ಟವರು.

ಸುಳ್ಯದಲ್ಲಿ ನಡೆಯಲಿದ್ದ ಸಂಬಂಧಿಕರೊಬ್ಬರ ವಿವಾಹ ಸಮಾರಂಭಕ್ಕೆ ತೆರಳುವಾಗ ಅವಘಡ ನಡೆದಿದೆ.

ಅರುಣ್ ಕುಲಾಲ್ ಅವರು ಮಾಣಿ ಕಡೆಯಿಂದ ಸುಳ್ಯಕಡೆಗೆ ಚಲಾಯಿಸುತ್ತಿದ್ದ ಬೈಕ್ಗೆ ಪುತ್ತೂರಿನಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ ಡಿಕ್ಕಿಯಾಗಿದೆ. ಅರುಣ್ ಅವರು ಸ್ಥಳದಲ್ಲೇ ಮೃತಪಟ್ಟಿದ್ದು, ಧ್ಯಾನ್ ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಮೃತಪಟ್ಟರು.

ಪುತ್ತೂರು ಸಂಚಾರ ಠಾಣೆಯಲ್ಲಿ ಬಸ್ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.

ಅರುಣ್ ಕುಲಾಲ್ ಅವರಿಗೆ ಪತ್ನಿ ಜಯಮಾಲಿನಿ, ಪುತ್ರ, 8ನೇ ತರಗತಿ ವಿದ್ಯಾರ್ಥಿ ಪುತ್ರ ರೋಶನ್, ಸಹೋದರ ಗಣೇಶ್ ಕುಲಾಲ್, ಇಬ್ಬರು ಸಹೋದರಿಯರು ಇದ್ದಾರೆ. ಬಡಗಿ ವೃತ್ತಿ ನಡೆಸುತ್ತಿದ್ದ ಅರುಣ್ ಅವರು ಬಿಜೆಪಿ ಕಾರ್ಯಕರ್ತರಾಗಿದ್ದರು.

ಅವಘಡದ ಬಳಿಕ ವಾಹನ ದಟ್ಟಣೆ ಉಂಟಾಗಿ ಇಲಾಖಾ ವಾಹನದಲ್ಲಿ ತಲುಪಲು ಸಾಧ್ಯವಾಗದೆ ಕಬಕದ ಸಮೀಪದಿಂದ ಓಡಿಕೊಂಡು ಬಂದ ಪುತ್ತೂರು ಸಂಚಾರ ಠಾಣೆಯ ಉದಯರವಿ ಅವರು ವಾಹನ ಸಂಚಾರ ನಿಯಂತ್ರಿಸಿದರು. ಇದೇ ರಸ್ತೆಯಾಗಿ ಬಂದ ಮಂಗಳೂರಿನ ಐಜಿ ಅವರೂ ವಾಹನ ದಟ್ಟಣೆಯಲ್ಲಿ ಸಿಲುಕಿಕೊಂಡರು.

ಸಂಸದ ಕ್ಯಾ.ಬ್ರಿಜೇಶ್ ಚೌಟ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.