ಗುರುವಾರ , ಜೂನ್ 4, 2020
27 °C

ಬಾಲಕಿಯರಿಗೆ ಗುರುಕುಲ: ಪ್ರವೇಶ ಅವಧಿ ವಿಸ್ತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ರಾಮಚಂದ್ರಾಪುರ ಮಠದ ವತಿಯಿಂದ ಬಾಲಕಿಯರಿಗಾಗಿ ಗೋಕರ್ಣ ಬಳಿ ಆರಂಭಿಸುತ್ತಿರುವ ರಾಜರಾಜೇಶ್ವರಿ ಗುರುಕುಲ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ನೀಡಿದ್ದ ಕೊನೆಯ ದಿನಾಂಕವನ್ನು ಜೂನ್ 15ರವರೆಗೆ ವಿಸ್ತರಿಸಲಾಗಿದೆ.

ಸ್ಮಾರ್ಟ್ ಕ್ಲಾಸ್ ಸೌಲಭ್ಯ, ಶಿಕ್ಷಣ ತಜ್ಞರಿಂದ ಆನ್‌ಲೈನ್ ಪಾಠ, ನುರಿತ ಮೆಂಟರ್‌ಗಳು, ವಿಷಯತಜ್ಞರ ಜತೆ ಮಕ್ಕಳ ಸಂವಾದ, ಕೇಂದ್ರ ಸರ್ಕಾರದ ಎನ್‍ಐಓಎಸ್ ಪಠ್ಯಕ್ರಮದಂತೆ ಪಾಠ, ಪರೀಕ್ಷೆ, ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಬೇಕಾದ ಅರಿವು- ಸಾಮರ್ಥ್ಯ ವೃದ್ಧಿ, ಒಳಾಂಗಣ ಮತ್ತು ಹೊರಾಂಗಣ ಕ್ರೀಡಾ ಸೌಲಭ್ಯ, ವಿಜ್ಞಾನ ಮತ್ತು ಕಂಪ್ಯೂಟರ್ ಪ್ರಯೋಗಾಲಯ, ಭವ್ಯ ಪರಂಪರೆಯ ಬಗ್ಗೆ ಸಮಗ್ರ ಅರಿವು, ಭಾರತೀಯ ವಿದ್ಯೆ, ಕಲೆಗಳ ಸಮಗ್ರ ಪರಿಚಯ, ಸಂಸ್ಕಾರ ಮತ್ತು ಸಂಸ್ಕೃತಿ ಅಳವಡಿಕೆ, ಪ್ರಕೃತಿಗೆ ತೆರೆದುಕೊಂಡ ಮುಕ್ತ ಕುಟೀರಗಳಲ್ಲಿ ಕಲಿಕೆಗೆ ಅವಕಾಶವಿದೆ.

ವಿವರಗಳಿಗೆ ರಾಜರಾಜೇಶ್ವರಿ ಗುರುಕುಲಂ, ಆಂಜನೇಯ ಜನ್ಮಭೂಮಿ, ಕುಟ್ಲೆ, ಅಂಚೆ: ಗೋಕರ್ಣ, ಕುಮಟಾ ತಾಲ್ಲೂಕು, ಉತ್ತರ ಕನ್ನಡ– 581326 ಇಲ್ಲಿ ಸಂಪರ್ಕಿಸಬಹುದು. ಇ-ಮೇಲ್: gurukulam@srisamsthana.org ಅಥವಾ ಮೊ.ಸಂ. 9449595247 ಸಂಪರ್ಕಿಸಬಹುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು