ತುಳುನಾಡಿನ ಹಲವೆಡೆ ಕಾಣಸಿಗುವ ಗುತ್ತಿನ ಮನೆಗಳು ನೂರಾರು ವರ್ಷಗಳ ಇತಿಹಾಸವನ್ನು ಹೊತ್ತಿವೆ. ಆದರೆ ಸಮರ್ಪಕ ನಿರ್ವಹಣೆ ಇಲ್ಲದೇ ಅನೇಕ ಮನೆಗಳು ಅವಸಾನದ ಅಂಚಿನಲ್ಲಿವೆ. ಇಂತಹ ಸಂದರ್ಭದಲ್ಲಿ, ಮಂಗಳೂರು ಹೊರವಲಯದ ಅಡ್ಯಾರ್ ಗುತ್ತಿನ ಮನೆಯ ಮರುನಿರ್ಮಾಣ ಪಾರಂಪರಿಕ ವೈಭವ ಉಳಿಸುವ ಸಾರ್ಥಕ ಪ್ರಯತ್ನವಾಗಿದೆ. ಹಳೆಯ ವಾಸ್ತುಶೈಲಿಗೆ ಅನುಗುಣವಾಗಿ ನಿರ್ಮಾಣಗೊಂಡ ಈ ಮನೆಯಲ್ಲಿ ಕಾಷ್ಠಶಿಲ್ಪ, ಕುಸರಿ ಕೆತ್ತನೆ, ಭವ್ಯ ಕಂಬಗಳು ಹಾಗೂ ಧರ್ಮಚಾವಡಿ ವಿಶೇಷ ಆಕರ್ಷಣೆಯಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.