ಮಂಗಳೂರು: ಮಂಗಳೂರು– ಬೆಂಗಳೂರು ನಡುವೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ನಿತ್ಯ ಎರಡು ವಿಮಾನಗಳ ಸೇವೆ ಆರಂಭಿಸಿದೆ.
ಎರಡು ಶಿಶುಗಳು ಸೇರಿದಂತೆ 107 ಪ್ರಯಾಣಿಕರನ್ನು ಹೊತ್ತ ಮೊದಲ ವಿಮಾನ ಬುಧವಾರ ಮಧ್ಯಾಹ್ನ 12.30ಕ್ಕೆ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು. ಮಧ್ಯಾಹ್ನ 1.10ಕ್ಕೆ 92 ಪ್ರಯಾಣಿಕರೊಂದಿಗೆ ಇಲ್ಲಿಂದ ಬೆಂಗಳೂರಿಗೆ ವಿಮಾನ ಹೊರಟಿತು. ಪ್ರಸ್ತುತ ಬೆಂಗಳೂರು– ಮಂಗಳೂರು ನಡುವೆ ಏಳು ವಿಮಾನಗಳು ಪ್ರತಿನಿತ್ಯ ಹಾರಾಟ ನಡೆಸುತ್ತವೆ.
ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ದೇಶೀಯ ಕಾರ್ಯಾಚರಣೆಯ ಭಾಗವಾಗಿ ಕೇಕ್ ಕತ್ತರಿಸಲಾಯಿತು. ಮುಖ್ಯ ವಿಮಾನ ನಿಲ್ದಾಣದ ಭದ್ರತಾ ಅಧಿಕಾರಿ ವೀರೇಂದ್ರ ಮೋಹನ್ ಜೋಶಿ, ವಿಮಾನ ನಿಲ್ದಾಣದ ವಿವಿಧ ವಿಭಾಗಗಳ ಮುಖ್ಯಸ್ಥರು ಇದ್ದರು.
ಎರಡನೇ ಎಐಇ ವಿಮಾನವು (ಐಎಕ್ಸ್ 1795) ಕಣ್ಣೂರು- ಬೆಂಗಳೂರು-ಮಂಗಳೂರು ವಲಯದಲ್ಲಿ ಕಾರ್ಯನಿರ್ವಹಿಸಿತು. ಕಣ್ಣೂರಿನಿಂದ ಸಂಜೆ 4.30ಕ್ಕೆ ಹೊರಟು ಸಂಜೆ 5.50ಕ್ಕೆ ಬೆಂಗಳೂರು ತಲುಪಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.