ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾನ ನಿಲ್ದಾಣ– 3 ಪ್ರತ್ಯೇಕ ಪ್ರಕರಣ: ₹1 ಕೋಟಿ ಮೌಲ್ಯದ ಚಿನ್ನ ವಶ

ಕಾಸರಗೋಡು, ಬೈಂದೂರಿನ ವ್ಯಕ್ತಿಗಳ ಬಂಧನ
Last Updated 19 ಮೇ 2022, 3:17 IST
ಅಕ್ಷರ ಗಾತ್ರ

ಮಂಗಳೂರು: ನಗರದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಐದು ದಿನಗಳಲ್ಲಿ ಮೂರು ಪ್ರಕರಣಗಳನ್ನು ಪತ್ತೆ ಮಾಡಿರುವ ಕಸ್ಟಮ್ಸ್‌ ಅಧಿಕಾರಿಗಳು, ₹1.04 ಕೋಟಿ ಮೌಲ್ಯದ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ.

ಬುಧವಾರ ಬಹರೇನ್‌ನಿಂದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ಮೂಲಕ ಇಲ್ಲಿಗೆ ಬಂದಿಳಿದ ಕಾಸರಗೋಡಿನ ಚೇಂಗಳದ ಪ್ರಯಾಣಿಕರೊಬ್ಬರು ತಪಾಸಣೆಗೆ ಒಳಪಡಿಸಿದಾಗ ಚಿನ್ನ ಪತ್ತೆಯಾಗಿದೆ. ಅಂಡಾಕಾರದ ನಾಲ್ಕು ಪ್ಯಾಕೆಟ್‌ಗಳಲ್ಲಿ ಪೇಸ್ಟ್ ರೂಪದಲ್ಲಿ ಪ್ಯಾಕ್ ಮಾಡಿ, ಗುದನಾಳದಲ್ಲಿಟ್ಟು ಚಿನ್ನ ಸಾಗಿಸುತ್ತಿದ್ದ. ಈ ಪ್ರಕರಣದಲ್ಲಿ 24 ಕ್ಯಾರೆಟ್‌ನ 756 ಗ್ರಾಂ ಚಿನ್ನ ವಶಕ್ಕೆಪಡೆದಿದ್ದು, ಒಟ್ಟು ₹39.35 ಲಕ್ಷ ಮೌಲ್ಯದ್ದಾಗಿದೆ.

ಮೇ 16 ರಂದು ಬಹರೇನ್‌ನಿಂದ ನಗರಕ್ಕೆ ಬಂದಿಳಿದ ಉಡುಪಿ ಜಿಲ್ಲೆಯ ಬೈಂದೂರಿನ ಪ್ರಯಾಣಿಕನಿಂದ 736 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. 24 ಕ್ಯಾರೆಟ್‌ನ ಈ ಚಿನ್ನದ ಮೌಲ್ಯ ₹37.17 ಲಕ್ಷ. ಈತ ಚಿನ್ನವನ್ನು ಗುದನಾಳದಲ್ಲಿಟ್ಟು ಸಾಗಿಸುತ್ತಿದ್ದ.

ಮೇ 14 ರಂದು ಕಾಸರಗೋಡಿನ ವ್ಯಕ್ತಿಯೊಬ್ಬನನ್ನು ತಪಾಸಣೆಗೆ ಒಳಪಡಿಸಿದಾಗ 547 ಗ್ರಾಂ ಚಿನ್ನ ಪತ್ತೆಯಾಗಿದೆ. ದೇಹದ ಒಳಗಡೆ ಅಂಡಾಕಾರದಲ್ಲಿ ಈ ಚಿನ್ನವನ್ನು ಅಡಗಿಸಿ ಇಟ್ಟಿದ್ದ. ಈ ಚಿನ್ನದ ಮೌಲ್ಯ ₹27.89 ಲಕ್ಷ. ಮೂರು ಪ್ರಕರಣಗಳಲ್ಲಿ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಕಸ್ಟಮ್ಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಮಹಿಳೆಯ ಹತ್ಯೆ ಯತ್ನ: ಬಂಧನ

ಮಂಗಳೂರು: ಮಹಿಳೆಗೆ ಕಿರುಕುಳ ನೀಡಿದ್ದಲ್ಲದೇ ಮಾನಭಂಗ ಮತ್ತು ಹತ್ಯೆಗೆ ಯತ್ನಿಸಿದ ಯುವಕನನ್ನು ನಗರದ ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳ ಕಸಬದ ಮಂಡಾಡಿ ಹೌಸ್ ನಿವಾಸಿ ಶಿವರಾಜ್ ಕುಲಾಲ್ ಬಂಧಿತ ಆರೋಪಿ.

ಪತಿಯೊಂದಿಗೆ ಮನಸ್ತಾಪ ಉಂಟಾಗಿ ಹಳೆಯಂಗಡಿಯ 30 ವರ್ಷದ ಮಹಿಳೆ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ದಾವೆ ಹೂಡಿದ್ದರು. ಈ ನಡುವೆ 2 ವರ್ಷಗಳ ಹಿಂದೆ ಸಾಮಾ
ಜಿಕ ಜಾಲತಾಣದ ಮೂಲಕ ಶಿವರಾಜ್ ಕುಲಾಲ್ ಪರಿಚಯವಾಗಿದ್ದು, ಅವರಿಬ್ಬರು ಪ್ರೀತಿಸುತ್ತಿದ್ದರು. 6 ತಿಂಗಳಿಂದ ಶಿವರಾಜ್ ಕುಲಾಲ್, ಮಹಿಳೆಗೆ ಮಾನಸಿಕ ಹಿಂಸೆ ನೀಡುವುದು, ಮೈಗೆ ಕೈ ಹಾಕಿ ಮಾನಭಂಗ ಮಾಡಲು ಪ್ರಯತ್ನಿಸಿದ್ದರಿಂದ ಆ ಮಹಿಳೆ ಈತನಿಂದ ದೂರವಾಗಿದ್ದರು ಎನ್ನಲಾಗಿದೆ.

ಮಹಿಳೆ ಬಳ್ಳಾಲ್‌ಬಾಗ್‌ ಸಮೀಪದ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಮಂಗಳವಾರ ಸಂಜೆ ಮಹಿಳೆ ಕೆಲಸ ಮುಗಿಸಿ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಲಿಫ್ಟ್‌ನಲ್ಲಿ ಬಂದ ಆರೋಪಿ, ಮಹಿಳೆಯನ್ನು ಬೈದು, ಹೊಡೆದು ಕುತ್ತಿಗೆಯನ್ನು ಹಿಡಿದು ಕೊಲೆ ಮಾಡಲು ಯತ್ನಿಸಿದ್ದಾನೆ ಎಂದು ನಗರ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಆತ್ಮಹತ್ಯೆ

ಉಜಿರೆ: ಸೋಣಂದೂರು ಗ್ರಾಮದ ಪಣಕಜೆಯ ನೂರುಲ್ಲ (32) ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅವರ ಪತ್ನಿ ಬುಧವಾರ ನೀಡಿದ ದೂರಿನಂತೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂವರ ಬಂಧನ

ಬಂಟ್ವಾಳ: ಬೈಕ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ನಗರ ಠಾಣಾ ಪೊಲೀಸರು ನರಿಕೊಂಬು ಗ್ರಾಮದ
ನೆಹರೂನಗರ ನಿವಾಸಿ ಅಕ್ಬರ್( 32), ಬೆಳ್ತಂಗಡಿ ತಾಲ್ಲೂಕು ಕುವೆಟ್ಟು ಗ್ರಾಮದ ಸಬರಬೈಲ್ ನಿವಾಸಿ ಸಿದ್ದಿಕ್ ಯಾನೆ ಅಬೂಬಕ್ಕರ್ ಸಿದ್ದಿಕ್ ( 27) , ಪುಂಜಾಲಕಟ್ಟೆ ಉರ್ಕಿದಬೈಲ್ ನಿವಾಸಿ ಸಮೀರ್ (23) ಎಂಬವರನ್ನು ಬಂಧಿಸಿದ್ದಾರೆ.

ಬಿ.ಸಿ.ರೋಡಿನ ರೈಲ್ವೆ ನಿಲ್ದಾಣದ ಬಳಿ ಏ.23ರಂದು ರೈಲ್ವೆ ಸಿಬ್ಬಂದಿ ಅನೂಪ್ ನಿಲ್ಲಿಸಿದ್ದ ಬೈಕ್, ಏ.27 ರಂದು ಬಂಟ್ವಾಳ ಸಮೀಪದ ಮಣಿಹಳ್ಳ ರಸ್ತೆ ಬದಿ ಮುಖೇಶ್ ನಿಲ್ಲಿಸಿದ್ದ ಬೈಕನ್ನು ಆರೋಪಿಗಳು‌ ಕಳವು ಮಾಡಿದ್ದರು.

ಇನ್‌ಸ್ಪೆಕ್ಟರ್‌ ವಿವೇಕಾನಂದ ನೇತೃತ್ವದಲ್ಲಿ ಸಬ್‌ ಇನ್‌ಸ್ಪೆಕ್ಟರ್‌ ಅವಿನಾಶ್ ಗೌಡ, ಕಲೈಮಾರ್, ಸಿಬ್ಬಂದಿ ಇರ್ಶಾದ್, ಗಣೇಶ್ ನೆಟ್ಲ, ಮನೋಹರ್, ಪ್ರವೀಣ್, ಮೋಹನ್, ನಾಗರಾಜ್, ವನಿತಾ, ನಾರಾಯಣ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಬಾಲಕರ ಸಾವು

ಕಾಸರಗೋಡು: ಕೆರೆಯಲ್ಲಿ ಆಟವಾ
ಡುತ್ತಿದ್ದ ಇಬ್ಬರು ಮಕ್ಕಳು ಬುಧವಾರ ನೀರುಪಾಲಾಗಿ ಮೃತಪಟ್ಟಿದ್ದಾರೆ. ಹೊಸದುರ್ಗ ತಾಲ್ಲೂಕಿನ
ಪನೆಯಾಲ ಗ್ರಾಮದ ಚೆರುಕರ ಎಂಬಲ್ಲಿ ಈ ಘಟನೆ ನಡೆದಿದೆ.

ಸ್ಥಳೀಯ ನಿವಾಸಿಗಳಾದ ದಿಲ್ ಜೀತ್ (14) ಮತ್ತು ನಂದಗೋಪಾಲ್(14) ಮೃತಪಟ್ಟವರು. ಮಾಹಿತಿ ಪಡೆದು ಸ್ಥಳಕ್ಕೆ ಬಂದ ಅಗ್ನಿಶಾಮಕದಳ, ಪೊಲೀಸರು ಮತ್ತು ಕಂದಾಯ ಇಲಾಖೆ ಸಿಬ್ಬಂದಿ ಬಾಲಕರನ್ನು ಮೇಲಕ್ಕೆತ್ತಿ ಜಿಲ್ಲಾ ಆಸ್ಪತ್ರೆಗೆ ಸಾಗಿಸಿದರು. ಅಷ್ಟರಲ್ಲಿ ಇಬ್ಬರೂ ಮೃತಪಟ್ಟಿದ್ದರು. ಇವರಿಬ್ಬರೂ ಚೆರುಕರ ಇಂಗ್ಲಿಷ್‌ ಮಾಧ್ಯಮ ಶಾಲೆ ವಿದ್ಯಾರ್ಥಿಗಳು.

ಕಳವು: ಬಂಧನ

ಉಳ್ಳಾಲ: ಸ್ಕೂಟರ್ ಕಳವು ಆರೋಪದ ಮೇಲೆ ಹಾವೇರಿ ಜಿಲ್ಲೆಯ ಹಾನಗಲ್‌ನ ಸಂತೋಷ ಗೋವಿಂದಪ್ಪ ಬಾಳೂರು(31) ಹಾಗೂ ಪ್ರವೀಣ್ ಕುಮಾರ್ (25) ಎಂಬವರನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.

2021ರ ನವೆಂಬರ್‌ 9 ರಂದು ಮಂಗಳೂರಿನ ತೊಕ್ಕೊಟ್ಟು ಬಸ್ ನಿಲ್ದಾಣದ ಬಳಿ ಜೆಪ್ಪು ನಿವಾಸಿ ಮೊಹಮ್ಮದ್ ಶಕೀಬ್ ಎಂಬವರ ಸ್ಕೂಟರ್‌ ಕಳವು ಮಾಡಲಾಗಿತ್ತು. ಮೇ 16 ರಂದು ಕೋಟೆಕಾರ್ ಜಂಕ್ಷನ್ ಬಳಿ ಸಬ್‌ ಇನ್‌ಸ್ಪೆಕ್ಟರ್ ಶಿವಕುಮಾರ್ ಹಾಗೂ ಸಿಬ್ಬಂದಿ ವಾಹನ ತಪಾಸಣೆ ನಡೆಸುವ ಸಂದರ್ಭ ಆರೋಪಿಗಳು ಸ್ಕೂಟರ್‌ ಸಹಿತ ಸಿಕ್ಕಿಬಿದ್ದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT