14ರಂದು ಅಖಂಡ ಸಂಕಲ್ಪ ದಿನ

7
ಪುತ್ತೂರಿನಲ್ಲಿ -ಪಂಜಿನ ಮೆರವಣಿಗೆ

14ರಂದು ಅಖಂಡ ಸಂಕಲ್ಪ ದಿನ

Published:
Updated:

ಪುತ್ತೂರು: ‘ವಿಶ್ವ ಹಿಂದೂ ಪರಿಷತ್, ಬಜರಂಗದಳ ಮತ್ತು ಹಿಂದೂ ಜಾಗರಣ ವೇದಿಕೆಯ ಆಶ್ರಯದಲ್ಲಿ ಆಗಸ್ಟ್ 14ರಂದು ಸಂಜೆ ಪುತ್ತೂರಿನಲ್ಲಿ ಅಖಂಡ ಸಂಕಲ್ಪ ದಿನಾಚರಣೆ ಮತ್ತು ಪಂಜಿನ ಮೆರವಣಿಗೆ ನಡೆಯುವುದು’ ಎಂದು ವಿಶ್ವ ಹಿಂದೂ ಪರಿಷತ್ ಪುತ್ತೂರು ಪ್ರಖಂಡ ಅಧ್ಯಕ್ಷ ಜನಾರ್ದನ ಬೆಟ್ಟ ತಿಳಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಆಗಸ್ಟ್ 14ರಂದು ಸಂಜೆ ಆರು ಗಂಟೆಯಿಂದ ಪುತ್ತೂರು ದರ್ಬೆ ವೃತ್ತದಿಂದ ಪಂಜಿನ ಮೆರವಣಿಗೆ ಆರಂಭಗೊಳ್ಳುವುದು. ಹಿಂದೂ ಸಂಘಟನೆಗಳ ಮಾರ್ಗದರ್ಶಕ ಎಂ.ಕೆ. ಪ್ರಸಾದ್ ಭಂಡಾರಿ ಅವರು ಪಂಜಿನ ಮೆರವಣಿಗೆಗೆ ಚಾಲನೆ ನೀಡುವರು. ಮೆರವಣಿಗೆ ದರ್ಬೆಯಿಂದ  ಕಲ್ಲಾರೆ, ಏಳ್ಮುಡಿ, ಬಸ್ ನಿಲ್ದಾಣ, ಕೋರ್ಟ್‌ ರಸ್ತೆ, ಸಂತೆಕಟ್ಟೆ ಮೂಲಕ ಕಿಲ್ಲೆ ಮೈದಾನದ ಅಮರ್ ಜವಾನ್ ಜ್ಯೋತಿ ಮೈದಾನ ತಲುಪುವುದು. ಉಪನ್ಯಾಸಕ ರೋಹಿಣಾಕ್ಷ ಶಿರ್ಲಾಲು ದಿಕ್ಸೂಚಿ ಭಾಷಣ ಮಾಡುವರು. ವಿಶ್ವ ಹಿಂದೂ ಪರಿಷತ್, ಹಿಂದೂ ಜಾಗರಣ ವೇದಿಕೆ, ಬಜರಂಗದಳ ಮುಖಂಡರು ಅತಿಥಿಗಳಾಗಿರುವರು’ ಎಂದರು.

ಆಗಸ್ಟ್ 12ರಂದು ಸಂಜೆ ಪರ್ಪುಜದಿಂದ ಕುಂಬ್ರದವರೆಗೆ ಪಂಜಿನ ಮೆರವಣಿಗೆ ನಡೆಯುವುದು. ಕುಂಬ್ರದಲ್ಲಿ ಕ್ಯಾ. ಗಣೇಶ್ ಕಾರ್ಣಿಕ್ ದಿಕ್ಸೂಚಿ ಭಾಷಣ ಮಾಡುವರು. 13ರಂದು ಸವಣೂರಿನಲ್ಲಿ ಮಂಜುನಾಥ ಉಡುಪ  ದಿಕ್ಸೂಚಿ ಭಾಷಣ ಮಾಡುವರು.

13ರಂದು ಉಪ್ಪಿನಂಗಡಿಯಲ್ಲಿ ನಡೆಯುವ ಅಖಂಡ ಭಾರತ ಸಂಕಲ್ಪ ದಿನಾಚಣೆಯಲ್ಲಿ ರಘು ಸಕಲೇಶಪುರ ದಿಕ್ಸೂಚಿ ಭಾಷಣ ಮಾಡುವರು. ಬೆಟ್ಟಂಪಾಡಿಯಲ್ಲಿಶರಣ್ ಪಂಪ್‌ವೆಲ್ದಿಕ್ಸೂಚಿ ಭಾಷಣ ಮಾಡುವರು. 14ರಂದು ಬೆಳಂದೂರಿನಲ್ಲಿ ಮುರಳಿಕೃಷ್ಣ ಹಸಂತಡ್ಕ ಅವರು ದಿಕ್ಸೂಚಿ ಭಾಷಣ ಮಾಡುವರು ಎಂದರು.

ಹಿಂದೂ ಜಾಗರಣ ವೇದಿಕೆಯ ನಿಧಿ ಪ್ರಮುಖ್ ಪುಷ್ಪರಾಜ್, ನಗರ ಉಪಾಧ್ಯಕ್ಷ ದಿನೇಶ್ ಪುರುಷರಕಟ್ಟೆ, ಬಜರಂಗದಳ ಪ್ರಖಂಡ ಸಂಚಾಲಕ ನಿತಿನ್ ನಿಡ್ಪಳ್ಳಿ, ನಗರ ಸಹ ಸಂಚಾಲಕ ಪ್ರವೀಣ್  ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !