ಅಳಿಕೆ‘ ಸರಸ್ವತಿ ಚೆಂಡುಕಳ ಉಪಾಧ್ಯಕ್ಷೆ

7

ಅಳಿಕೆ‘ ಸರಸ್ವತಿ ಚೆಂಡುಕಳ ಉಪಾಧ್ಯಕ್ಷೆ

Published:
Updated:
Deccan Herald

 ವಿಟ್ಲ: ಅಳಿಕೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸ್ಥಾನಕ್ಕೆ ಕಾರಣಾಂತರಗಳಿಂದ ರಾಜೀನಾಮೆ ಸಲ್ಲಿಕೆಯಾಗಿದ್ದ ಜಾಗಕ್ಕೆ ಶುಕ್ರವಾರ ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ನೇತೃತ್ವದಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಿತು.

ಅಳಿಕೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ ಸೆಲ್ವಿನಾ ಡಿಸೋಜ ಇದ್ದು, ಜನವರಿಯಲ್ಲಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಶುಕ್ರವಾರ ಬೆಳಿಗ್ಗೆ ನಾಮ ಪತ್ರ ಸಲ್ಲಿಕೆ ನಡೆಯಿತು. ಮೀಸಲಾತಿಯ ಪ್ರಕಾರ ಸಾಮಾನ್ಯ ಮಹಿಳೆ ಉಪಾಧ್ಯಕ್ಷೆಯಾಗಬೇಕಾಗಿದ್ದು, ಆಡಳಿತ ಪಕ್ಷದ ಒಬ್ಬರು ಮಹಿಳೆ  ಮಾತ್ರ ನಾಮಪತ್ರ ಸಲ್ಲಿಸಿದ್ದರು.

ಚುನಾವಣಾಧಿಕಾರಿ ಪುರಂದರ ಹೆಗ್ಡೆ  ಸರಸ್ವತಿ ಚೆಂಡುಕಳ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವುದನ್ನು ಘೋಷಿಸಿದರು.  ಉಪತಹಶೀಲ್ದಾರ್ ರಾಜೇಶ್ ನಾಯ್ಕ, ಕಂದಾಯ ನಿರೀಕ್ಷಕ ದಿವಾಕರ್, ಗ್ರಾಮ ಕರಣಿಕ ಪ್ರಕಾಶ್, ಚುನಾವಣಾ ಶಾಖೆಯ ಸಿಬ್ಬಂದಿ ವಿನಯ ನಾಗರಾಜ್, ರಾಜ್ ಕುಮಾರ್, ಗ್ರಾಮ ಸಹಾಯಕ ಜಗನ್ನಾಥ, ಚಂದ್ರ ಅವರು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.

ಅಧಿಕಾರ ಸ್ವೀಕಾರ: ಅಳಿಕೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆಯಾಗಿ ಸರಸ್ವತಿ ಚೆಂಡುಕಳ ಅವರ ಅಧಿಕಾರ ಸ್ವೀಕಾರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಿನ್ನಪ್ಪ ಗೌಡ ಅವರ ಸಮಕ್ಷಮದಲ್ಲಿ ನಡೆಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು, ಪಂಚಾಯಿತಿ ಸದಸ್ಯರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !