ಶನಿವಾರ, ಸೆಪ್ಟೆಂಬರ್ 25, 2021
24 °C
13 ವಿದ್ಯಾರ್ಥಿಗಳಿಗೆ 620ಕ್ಕಿಂತ ಅಧಿಕ ಅಂಕ

ಎಸ್ಸೆಸ್ಸೆಲ್ಸಿ ಪರೀಕ್ಷೆ: ಆಳ್ವಾಸ್‌ನಲ್ಲಿ ಉತ್ತಮ ಫಲಿತಾಂಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೂಡುಬಿದಿರೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಆಳ್ವಾಸ್ ಪ್ರೌಢಶಾಲೆಯ ವಿದ್ಯಾರ್ಥಿ ಗಣೇಶ್ ಹನುಮಂತಪ್ಪ 625 ಅಂಕಗಳನ್ನು ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಆಳ್ವಾಸ್ ಪ್ರೌಢಶಾಲೆಯ 499 ವಿದ್ಯಾರ್ಥಿಗಳಲ್ಲಿ 13 ಮಂದಿ 620ಕ್ಕಿಂತ ಅಧಿಕ, 115 ವಿದ್ಯಾರ್ಥಿಗಳು 600ಕ್ಕಿಂತ ಅಧಿಕ, 37 ವಿದ್ಯಾರ್ಥಿಗಳು ಶೇ 95ಕ್ಕಿಂತ ಅಧಿಕ, 88 ವಿದ್ಯಾರ್ಥಿಗಳು ಶೇ 90ಕ್ಕಿಂತ ಅಧಿಕ ಹಾಗೂ 66 ವಿದ್ಯಾರ್ಥಿಗಳು ಶೇ 85ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿದ್ದಾರೆ ಎಂದರು.

6 ವಿದ್ಯಾರ್ಥಿಗಳು 5 ವಿಷಯಗಳಲ್ಲಿ, 19 ವಿದ್ಯಾರ್ಥಿಗಳು 4 ವಿಷಯಗಳಲ್ಲಿ, 27 ವಿದ್ಯಾರ್ಥಿಗಳು 3 ವಿಷಯಗಳಲ್ಲಿ, 54 ವಿದ್ಯಾರ್ಥಿಗಳು ಎರಡು ವಿಷಯಗಳಲ್ಲಿ ಹಾಗೂ 82 ವಿದ್ಯಾರ್ಥಿಗಳು ಒಂದು ವಿಷಯದಲ್ಲಿ 100ಕ್ಕೆ 100 ಅಂಕ ಪಡೆದಿದ್ದಾರೆ. ಅಂಬಿಕಾ ವಿ.ಪಿ, ಪುಷ್ಪರಾಜ್ ಉದಯ ಕುಮಾರ್ ಪಾಟೀಲ್, ಸದಾಶಿವ್ ಎಸ್, ಸತೀಶ್ ಗಿರೀಶ್ ಕುದರೆ ಹಾಗೂ ಶಿವರಾಜ್ ತರಿವಾಲ್ (623), ದಿಶಾ ಶಂಕರ್ (622), ಪವನ್ ಕುಮಾರ್ ಪಾಟೀಲ್ (621), ಪ್ರಿಯಾಂಕಾ ಮಲ್ಲಪ್ಪ, ಸಾಗರ್ ಗುರಪ್ಪ, ಶ್ರದ್ಧಾ ಬಸವರಾಜ್, ಆದರ್ಶ ಎಂ.ನಾಯರಿ, ಪ್ರಜೂಷಾ ಮಹಾವೀರ ಹಾಗೂ ವೈಷ್ಣವಿ ವಿ.ಭಟ್(621) ಹೆಚ್ಚು ಅಂಕ ಪಡೆದಿದ್ದಾರೆ ಎಂದು ಮೋಹನ ಆಳ್ವ ತಿಳಿಸಿದ್ದಾರೆ.

ಆಳ್ವಾಸ್ ಪಿಯು ಕಾಲೇಜಿನ ಪ್ರಾಂಶುಪಾಲ ಸದಾಕತ್, ಆಡಳಿತಾಧಿಕಾರಿ ಪ್ರಕಾಶ್ ಶೆಟ್ಟಿ, ಆಳ್ವಾಸ್ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ವಿಜಯ ಟಿ., ಪ್ರಶಾಂತ್, ಸಿಬಿಎಸ್‌ಇ ವಿಭಾಗದ ಮುಖ್ಯ ಶಿಕ್ಷಕ ಮಹಮ್ಮದ್ ಶಾಫಿ ಇದ್ದರು.

ಲಹರಿ ಪ್ರಥಮ

ಉಪ್ಪಿನಂಗಡಿ: ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಇಲ್ಲಿನ ಇಂದ್ರಪ್ರಸ್ಥ ವಿದ್ಯಾಲಯದಒಟ್ಟು 72 ವಿದ್ಯಾರ್ಥಿಗಳಲ್ಲಿ 29 ವಿದ್ಯಾರ್ಥಿಗಳು ಉನ್ನತ ಶ್ರೇಣಿ, 17 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 25 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿ, ಒಬ್ಬ ವಿದ್ಯಾರ್ಥಿ ತೃತೀಯ ಶ್ರೇಣಿಯಲ್ಲಿ ಪಾಸಾಗಿದ್ದಾರೆ.

ಲಹರಿ (623 ಅಂಕ), ಆಶಿಕಾ ಎಂ. (621), ಸೃಷ್ಟಿ ಎಸ್.ಎನ್ (619) ಉತ್ತಮ ಸಾಧನೆ ಮಾಡಿದ್ದಾರೆ ಎಂದು ಶಾಲೆ ಪ್ರಮುಖರು ತಿಳಿಸಿದ್ದಾರೆ.

ಜೆನ್‌ಸ್ಟನ್‌ಗೆ 623

ಮೂಡುಬಿದಿರೆ: ತಾಲ್ಲೂಕಿನ ಪಾಲಡ್ಕದ ಸೇಂಟ್ ಇಗ್ನೇಷಿಯಸ್ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿ ಜೆನ್‌ಸ್ಟನ್ ಸಿಕ್ವೇರಾ ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 623 ಅಂಕ ಪಡೆದಿದ್ದಾನೆ.

ಈತ ಮೂಡುಬಿದಿರೆಯ ವಿನ್ಸೆಂಟ್ ಸಿಕ್ವೇರಾ ಹಾಗೂ ಜೆಸಿಂತಾ ಸಿಕ್ವೇರಾ ದಂಪತಿ ಪುತ್ರ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು