ಆಂಧ್ರದ ಮೀನುಗಾರ ನಾಪತ್ತೆ

7

ಆಂಧ್ರದ ಮೀನುಗಾರ ನಾಪತ್ತೆ

Published:
Updated:

ಮಂಗಳೂರು: ಮೀನುಗಾರಿಕೆ ಕೆಲಸಕ್ಕಾಗಿ ಆಂಧ್ರಪ್ರದೇಶದಿಂದ ನಗರಕ್ಕೆ ಬಂದಿದ್ದ ಮಾರುಪಿಲ್ಲಿ ಯೆರ್ರಯ್ಯ (42) ಎಂಬುವವರು ಸೆಪ್ಟೆಂಬರ್‌ 29ರಿಂದ ನಾಪತ್ತೆಯಾಗಿದ್ದಾರೆ.

ಮೀನುಗಾರರಾದ ಯೆರ್ರಯ್ಯ ತಮ್ಮದೇ ಊರಿನ ಜಂಪಯ್ಯ ಎಂಬುವವರ ಜೊತೆ 20 ದಿನಗಳ ಹಿಂದೆ ನಗರಕ್ಕೆ ಬಂದಿದ್ದರು. ಸೆ. 28ರಂದು ಜಂಪಯ್ಯ ಮತ್ತು ಯೆರ್ರಯ್ಯ ಇಬ್ಬರೂ ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದರು. ಸೆ.29ರ ಬೆಳಗ್ಗಿನ ಜಾವ 4 ಗಂಟೆ ಸುಮಾರಿಗೆ ವಾಪಸು ಬಂದಿದ್ದರು. ಅದೇ ದಿನ ರಾತ್ರಿ ದೂರವಾಣಿ ಮೂಲಕ ಯೆರ್ರಯ್ಯ ಅವರ ಅಳಿಯನನ್ನು ಸಂಪರ್ಕಿಸಿರುವ ಜಂಪಯ್ಯ, ‘ನಿಮ್ಮ ಮಾವ ಬೆಳಗ್ಗಿನ ಜಾವ ದೋಣಿಯಿಂದ ಹೊರ ಹೋಗಿದ್ದು, ರಾತ್ರಿಯಾದರೂ ವಾಪಸು ಬಂದಿಲ್ಲ’ ಎಂದು ತಿಳಿಸಿದ್ದರು.

ನಗರದ ಹಲವೆಡೆ ಹುಡುಕಾಡಿದರೂ ಯಾವುದೇ ಸುಳಿವು ಸಿಕ್ಕಿಲ್ಲ. ಆ ಬಳಿಕ ಯೆರ್ರಯ್ಯ ಅವರ ಕುಟುಂಬದ ಸದಸ್ಯರು ಮಂಗಳೂರು ಉತ್ತರ (ಬಂದರು) ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಯೆರ್ರಯ್ಯ 5.2 ಅಡಿ ಎತ್ತರವಿದ್ದು, ಎಣ್ಣೆ ಕಪ್ಪು ಮೈಬಣ್ಣ ಹೊಂದಿದ್ದಾರೆ. ನೀಲಿ ಬಣ್ಣದ ಮುಕ್ಕಾಲು ಪ್ಯಾಂಟ್, ಬೂದುಬಣ್ಣದ ಟೀ-ಶರ್ಟ್ ಧರಿಸಿದ್ದಾರೆ. ಎದೆ ಭಾಗದಲ್ಲಿ ಮಾರುಪಿಲ್ಲಿ ನಚ್ಚಿಮ್ಮಮ್ಮ ಎಂಬ ಹಚ್ಚೆ ಗುರುತಿದೆ. ಎದೆಯ ಎಡಭಾಗದಲ್ಲಿ ಮಾರುಪಿಲ್ಲಿ ಅಪ್ಪಣ್ಣ ಎಂಬುದಾಗಿ ತೆಲುಗಿನಲ್ಲಿ ಹೆಚ್ಚೆ ಗುರುತಿದೆ. ತೆಲುಗು ಭಾಷೆ ಮಾತನಾಡುತ್ತಾರೆ. ಇವರ ಸುಳಿವು ಸಿಕ್ಕಲ್ಲಿ ಬಂದರು ಠಾಣೆಯ ದೂರವಾಣಿ ಸಂಖ್ಯೆ 0824–2220516 ಸಂಪರ್ಕಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !