ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡಿಕೆ ಬಗ್ಗೆ ಅಧ್ಯಯನ: ಒಪ್ಪಂದ

Last Updated 4 ಡಿಸೆಂಬರ್ 2021, 3:09 IST
ಅಕ್ಷರ ಗಾತ್ರ

ಮಂಗಳೂರು: ಅಡಿಕೆ ಕುರಿತು ಅಧ್ಯಯನ ನಡೆಸುವ ನಿಟ್ಟಿನಲ್ಲಿ ನಿಟ್ಟೆ ವಿಶ್ವವಿದ್ಯಾಲಯ, ಕ್ಯಾಂಪ್ಕೊ ಮತ್ತು ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನಗಳ ಮಧ್ಯೆ ಶುಕ್ರವಾರ ಒಪ್ಪಂದ ಮಾಡಿಕೊಳ್ಳಲಾಗಿದೆ.

ಜೀವಿ ಮತ್ತು ಜೀವಕಣಗಳ ಮೇಲೆ ಅಡಿಕೆಯಿಂದ ಆಗುವ ಪರಿಣಾಮಗಳ ಬಗ್ಗೆ ಅಧ್ಯಯನ, ಅಡಿಕೆಯಿಂದ ಆಗುವ ಪರಿಣಾಮಗಳ ಬಗ್ಗೆ ‘ಡ್ರೊಸೊಫಿಲಾ’ ಎಂಬ ಕೀಟದ ಮೇಲೆ ಸಮಗ್ರ ಅಧ್ಯಯನ, ಜೀವಕೋಶಗಳ ಪ್ರಸರಣಗಳ ಬಗ್ಗೆ ಅಡಿಕೆ ಮತ್ತು ಅರೆಕೋಲಿನ್‌ಗಳ ಪ್ರಭಾವ ತಿಳಿಯಲು ‘ಜೀಬ್ರಾಮೀನು’ಗಳ ಭ್ರೂಣಗಳ ಮೇಲೆ ಪ್ರಯೋಗ ಹಾಗೂ ಅಡಿಕೆ ಜಗಿಯುವುದರಿಂದ ಮನುಷ್ಯನ ಆರೋಗ್ಯದ ಮೇಲಾಗುವ ಪರಿಣಾಮಗಳ ಸಮಗ್ರ ಅಧ್ಯಯನ ನಡೆಸಲು ಈ ಒಪ್ಪಂದ ಮಾಡಿಕೊಳ್ಳಲಾಗಿದೆ.

ಈ ವಿಷಯಗಳಲ್ಲಿ ಸಂಶೋಧನೆ ಮಾಡಲು ನಿಟ್ಟೆ ವಿಶ್ವವಿದ್ಯಾಲಯಕ್ಕೆ ಮನವಿ ಮಾಡಲಾಗಿದೆ. ಅಡಿಕೆಯಿಂದ ಆಗುವ ಪ್ರಯೋಜನಗಳು, ಅದರ ಮೌಲ್ಯವರ್ಧನೆ, ಔಷಧೀಯ ಉತ್ಪನ್ನಗಳು ಮತ್ತು ಇತರ ವಾಣಿಜ್ಯ ಬಳಕೆಗಳ ಬಗ್ಗೆ ಸಮಗ್ರ ಸಂಶೋಧನೆಯನ್ನು ಮುಂದಿನ ದಿನಗಳಲ್ಲಿ ಮಾಡಲಾಗುವುದು ಎಂದು ಕ್ಯಾಂಪ್ಕೊ ಪ್ರಕಟಣೆ
ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT