ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃತಕ ಬುದ್ಧಿಮತ್ತೆಯಿಂದ ಗಮನಾರ್ಹ ಬದಲಾವಣೆ: ಮನೋಜ್‌ ಸಾಲಿಯಾನ್‌

Last Updated 10 ಮೇ 2022, 15:37 IST
ಅಕ್ಷರ ಗಾತ್ರ

ಮಂಗಳೂರು: ನಗರದ ವಿಶ್ವವಿದ್ಯಾಲಯ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಕಾರ್ಯಕ್ರಮ ಸರಣಿಯ ಮೊದಲ ಭಾಗವಾಗಿ ಮಂಗಳವಾರ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಜಗತ್ತಿನಲ್ಲಿ ಕೃತಕ ಬುದ್ಧಿಮತ್ತೆ (ಎಐ) ಉಂಟುಮಾಡುತ್ತಿರುವ ಬದಲಾವಣೆಯ ಬಗ್ಗೆ ಸಿಂಗಾಪುರದಲ್ಲಿರುವ ಪ್ರತಿಭಾ ನಿರ್ವಹಣಾ ತಜ್ಞ ಮನೋಜ್‌ ಸಾಲಿಯಾನ್‌ ವಿಶೇಷ ಉಪನ್ಯಾಸ ನೀಡಿದರು.

ಉದ್ಯೋಗಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಕೃತಕ ಬುದ್ಧಿಮತ್ತೆಯ ಪ್ರವೇಶ ಉಂಟುಮಾಡಿರುವ ಬದಲಾವಣೆಗಳನ್ನು ವೀಡಿಯೊ ಸಹಿತ ವಿವರಿಸಿದ ಅವರು, ‘ಆರ್ಟಿಫಿಷಿಯಲ್‌ ಇಂಟಲಿಜೆನ್ಸ್‌ ಮೂಲಕ ವೃತ್ತಿಪರತೆ, ಸಾಮರ್ಥ್ಯದ ಮಟ್ಟ, ಸಂವಹನ ಚಾತುರ್ಯ, ಸಾಮಾಜಿಕವಾಗಿ ಬೆರೆಯಬಲ್ಲ ಗುಣಗಳನ್ನು ಸಂದರ್ಶನದಲ್ಲಿ ಕೆಲವೇ ಸೆಕೆಂಡ್‌ಗಳಲ್ಲಿ ಅಳೆಯಬಹುದು. ಸಕಾರಾತ್ಮಕ ಮಾತುಗಳು, ನಸುನಗು ಸಂದರ್ಶನಕಾರರನ್ನು ಸೆಳೆಯಬಲ್ಲವು. ಹುದ್ದೆಗೆ ಹೊಂದುವಂತಹ ಸಿವಿ ತುಂಬ ಮುಖ್ಯ’ ಎಂದರು.

ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಂಯೋಜಕ ಡಾ. ಯತೀಶ್‌ ಕುಮಾರ್‌ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ದಿವ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು. ದೀಪಿಕಾ ಎಂ.ಬಿ ವಂದಿಸಿದರು. ಮಧುರಾ ಪ್ರಾರ್ಥಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT