ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಥೇನಾ ಆಸ್ಪತ್ರೆಯ ಬೆಳ್ಳಿಹಬ್ಬ, ಪದವಿ ಪ್ರದಾನ

Last Updated 1 ಏಪ್ರಿಲ್ 2022, 5:46 IST
ಅಕ್ಷರ ಗಾತ್ರ

ಮಂಗಳೂರು: ಅಥೇನಾ ಆಸ್ಪತ್ರೆಯು ರಜತ ಮಹೋತ್ಸವ ಹಾಗೂ ಪದವಿ ಪ್ರದಾನ ಸಮಾರಂಭ ಅಥೇನಾ ಆಸ್ಪತ್ರೆಯ ಸಭಾಂಗಣದಲ್ಲಿ ಬುಧವಾರ ನಡೆಯಿತು.

ಧರ್ಮಗುರುಗಳಾದ ಪ್ರಭುರಾಜ್ ಮತ್ತು ಆಡ್ರಿಯಾನ್ ದೀಪಾಕ್, ಬೈಬಲ್ ಗ್ರಂಥದಿಂದ ಪ್ರತಿಬಿಂಬ ನೀಡಿ ಆಶೀರ್ವದಿಸಿದರು. ಆಸ್ಪತ್ರೆಯ ಅಧ್ಯಕ್ಷ ಆರ್.ಎಸ್. ಶೆಟ್ಟಿಯಾನ್ ಸ್ವಾಗತಿಸಿದರು. ಆಸ್ಪತ್ರೆಯ 25 ವರ್ಷಗಳ ಸ್ಮರಣೀಯ ಪ್ರಯಾಣವನ್ನು ಕಿರು ಸಾಕ್ಷ್ಯಚಿತ್ರದ ಮೂಲಕ ಪ್ರದರ್ಶಿಸಲಾಯಿತು. ಆಸ್ಪತ್ರೆಯಲ್ಲಿ 20 ವರ್ಷಕ್ಕೂ ಹೆಚ್ಚು ಸೇವೆ ಸಲ್ಲಿಸಿದ ಹಾಗೂ ಸಂಸ್ಥೆಯಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು.

ನಂತರ ಕೃತಜ್ಞತಾ ಸೂಚಕವಾಗಿ ಆರ್.ಎಸ್. ಶೆಟ್ಟಿಯಾನ್ ಜಗದೀಶ್, ಮೇಬಲ್ ಕೆಬ್ರಾಲ್ ಮತ್ತು ಶಂಕರ್ ಅವರು ಸನ್ಮಾನಿಸಲಾಯಿತು. ಡಾಖಾ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಪಂಕಜ್ ಗಿಲ್ಬರ್ಟ್ ಕೋಸ್ತಾ ಸಂದೇಶ ನೀಡಿದರು. ಡಾ. ನಿಶಿತಾ ಫರ್ನಾಂಡಿಸ್ ಶೆಟ್ಟಿಯಾನ್‌ ವಂದಿಸಿದರು.

ಪದವಿ ಪ್ರದಾನ:

ಆಸ್ಪತ್ರೆಯ ಬೆಳ್ಳಿಹಬ್ಬದ ಆಚರಣೆ ಹಾಗೂ ಅಥೇನಾ ಕಾಲೇಜಿನ ಜನರಲ್ ನರ್ಸಿಂಗ್, ಬಿಎಸ್ಸಿ ನರ್ಸಿಂಗ್, ಪಿಬಿಬಿಎಸ್ಸಿ ನರ್ಸಿಂಗ್, ಎಂಎಸ್ಸಿ ನರ್ಸಿಂಗ್ ಹಾಗೂ ಬಿಎಸ್ಸಿ ಅಲೈಡ್ ಹೆಲ್ತ್ ವಿಭಾಗಗಳ ಪದವಿ ಪ್ರದಾನ ಸಮಾರಂಭ ಫಾದರ್‌ ಮುಲ್ಲರ್ಸ್ ಸಭಾಂಗಣದಲ್ಲಿ ಜರುಗಿತು.

ಫಾದರ್ ಮುಲ್ಲರ್ ಸಂಸ್ಥೆಯ ನಿರ್ದೇಶಕ ರೆ. ರಿಚಾರ್ಡ್ ಅಲೋಶಿಯಸ್ ಕುವೆಲ್ಲೊ, ಕೆಎಂಸಿ ಆಸ್ಪತ್ರೆ ಪ್ರಾಧ್ಯಾಪಕ ಡಾ. ಜಿ.ಜಿ. ಲಕ್ಷ್ಮಣ, ಸಂತ ಜಾನ್‌ ನರ್ಸಿಂಗ್ ಕಾಲೇಜಿನ ಉಪ ಪ್ರಾಂಶುಪಾಲೆ ಡಾ. ಬಿಂದು ಮ್ಯಾಥ್ಯೂ ಅತಿಥಿಗಳಾಗಿ ಭಾಗವಹಿಸಿದ್ದರು. ಆರ್.ಎಸ್. ಶೆಟ್ಟಿಯಾನ್ ಅಧ್ಯಕ್ಷತೆ ವಹಿಸಿದ್ದರು.

ಪ್ರಾಂಶುಪಾಲೆ ದೀಪಾ ಪೀಟರ್, ವರದಿ ವಾಚಿಸಿದರು. ಶಿಕ್ಷಣ ಪಡೆದ 371 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ರ‍್ಯಾಂಕ್‌ ಪಡೆದ ಸುಹೈನ್ ಬಿನ್ ಅಸೈನಾರ್, ಆಲ್ಟಿ ಲಿಂಗ್ಡೊ, ಮಿದಿಲಾ ರಾಜ್ ಪಿ.ಆರ್., ಸಾಂತ್ರ ಎಸ್., ರೇಶ್ಮಾಮೊಲ್ ಕೆ.ಆರ್, ಆನೆಟ್ ಕೆ. ಟೊಮ್ ಪ್ರಶಸ್ತಿ ಪಡೆದರು.

ಕಾಲೇಜಿನ ಟ್ರಸ್ಟಿ ಡಾ. ಆಶಿತ್ ಶೆಟ್ಟಿಯಾನ್‌, ಆಸ್ಪತ್ರೆಯು 25 ವರ್ಷಗಳಲ್ಲಿ ಮಾಡಿದ ಸಾಧನೆಯನ್ನು ವಿವರಿಸಿದರು. ಶಿಕ್ಷಣ ಸಂಸ್ಥೆಯ ಮ್ಯಾಗಜಿನ್ ‘ಅಥೆಸ್ಪಿತ’ ಅನಾವರಣ ಮಾಡಲಾಯಿತು. ಕಾಲೇಜಿನ ಕಾರ್ಯದರ್ಶಿ ಆಶಾ ಶೆಟ್ಟಿಯಾನ್, ಆಡಳಿತ ಸಮಿತಿಯ ಸದಸ್ಯರು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ಪೋಷಕರು ಭಾಗವಹಿಸಿದ್ದರು. ರೆನಿಟಾ ತಾವ್ರೊ, ವಿಯೋಲ ಡಿಸೋಜ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT