ವಿಟ್ಲ: ಕಾರಿನಲ್ಲಿ ಬಂದಿದ್ದ ಆರು ಮಂದಿಯ ತಂಡವೊಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಸೋಗಿನಲ್ಲಿ ಬೀಡಿ ಉದ್ಯಮಿಯ ಮನೆಗೆ ಶುಕ್ರವಾರ ರಾತ್ರಿ ದಾಳಿ ನಡೆಸಿ, ಮನೆಯಲ್ಲಿದ್ದ ₹ 30 ಲಕ್ಷ ನಗದು ಹಾಗೂ ಐದು ಮೊಬೈಲ್ಗಳೊಂದಿಗೆ ಪರಾರಿಯಾಗಿದೆ.

'ಬಂಟ್ವಾಳ ತಾಲ್ಲೂಕಿನ ಕೊಳ್ನಾಡು ನಿವಾಸಿ, ಬೀಡಿ ಉದ್ಯಮಿ ಸುಲೇಮಾನ್ ಅವರ ಮನೆಗೆ ಶುಕ್ರವಾರ ರಾತ್ರಿ 8.10 ರ ಸುಮಾರಿಗೆ, ತಮಿಳುನಾಡಿನ ನೋಂದಣೆ ಹೊಂದಿರುವ ಕಾರಿನಲ್ಲಿ 6 ಜನ ಅಪರಿಚಿತ ವ್ಯಕ್ತಿಗಳು ಬಂದು, ತಮ್ಮನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳೆಂದು ಪರಿಚಯಿಸಿಕೊಂಡರು. ಮನೆಯನ್ನು ಪರಿಶೀಲನೆ ನಡೆಸಲು ಅದೇಶವಾಗಿರುತ್ತದೆ ಎಂದು ತಿಳಿಸಿ ಮನೆ ಒಳಗೆ ಬಂದರು. ಮನೆಯಲ್ಲಿದ್ದ 5 ಮೊಬೈಲ್ ಪೊನ್ಗಳನ್ನು ತಮ್ಮ ವಶಕ್ಕೆ ಪಡೆದುಕೊಂಡರು. ಬಳಿಕ ಮನೆಯನ್ನು ಹುಡುಕಾಡಿದರು ಎಂದು ಸುಲೆಮಾನ್ ಅವರ ಮನೆಯವರು ಮಾಹಿತಿ ನೀಡಿದ್ದಾರೆ' ಎಂದು ಪೊಲೀಸರು ತಿಳಿಸಿದ್ದಾರೆ.

'ಮನೆಯ ಕೊಣೆಯ ಕಪಾಟಿನಲ್ಲಿ ವ್ಯವಹಾರಕ್ಕಾಗಿ ಇಟ್ಟಿದ್ದ ಸುಮಾರು ₹30 ಲಕ್ಷ ನಗದನ್ನು ಪಡೆದುಕೊಂಡ ಅಪರಿಚಿತರು, 'ಇಷ್ಟೊಂದು ಹಣವನ್ನು ನಿಮ್ಮಲ್ಲಿ ಇಟ್ಟುಕೊಳ್ಳಲು ಅವಕಾಶವಿಲ್ಲ. ನಿಮ್ಮನ್ನು ಬಂಧಿಸಿ ಕಸ್ಟಡಿ ತೆಗೆದುಕೊಳ್ಳುತ್ತೇವೆʼʼ ಎಂದು ತಿಳಿಸಿದ್ದರು. ಶುಕ್ರವಾರ ರಾತ್ರಿ ಸುಮಾರು 10.30 ಗಂಟೆಗೆ ಮನೆಯಿಂದ ಹೊರಟರು. ಮನೆಯಲ್ಲಿ ಪತ್ತೆಯಾದ ಹಣಕ್ಕೆ ಸೂಕ್ತ ದಾಖಲೆಗಳನ್ನು ನೀಡಿ, ಬೆಂಗಳೂರಿನಲ್ಲಿರುವ ಕಚೇರಿಯಿಂದ ಪಡೆದುಕೊಳ್ಳುವಂತೆ ತಿಳಿಸಿ ಹಣದೊದಿಗೆ ಹೊರಟು ಹೋದರು' ಎಂದು ಸುಲೇಮಾನ್ ಅವರ ಮನೆಯವರು ಮಾಹಿತಿ ನೀಡಿದ್ದಾರೆ' ಎಂದು ಪೊಕೀಸರು ತಿಳಿಸಿದ್ದಾರೆ.

ಈ ಕೃತ್ಯದ ಕುರಿತು ಸುಲೇಮಾನ್ ಅವರ ಮಗ ಮಹಮ್ಮದ್ ಇಕ್ಬಾಲ್ (27) ಎಂಬುವರು ದೂರು ನೀಡಿದ್ದು, ವಿಟ್ಲ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಕೃತ್ಯ ನಡೆದ ಮನೆಗೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್, ಅವರು ಶನಿವಾರ ಭೇಟಿ ನೀಡಿ ಪರಿಶೀಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.