ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಜಾಗೃತಿಗೆ ಸೈಕಲ್ ಜಾಥಾ

Last Updated 13 ಆಗಸ್ಟ್ 2022, 3:01 IST
ಅಕ್ಷರ ಗಾತ್ರ

ಮಂಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಲಯನ್ಸ್ ಕ್ಲಬ್ ಕದ್ರಿ ಹಿಲ್ಸ್, ಜ್ಯೂಯಿಸ್‌ ಫಿಟ್‌ನೆಸ್ ಕ್ಲಬ್ ಹಾಗೂ ಜಿಲ್ಲೆಯ 30 ಸಂಘಟನೆಗಳ ಸಹಯೋಗದಲ್ಲಿ ಆ.14ರಂದು ಬೆಳಿಗ್ಗೆ 7ಕ್ಕೆ ಜನಜಾಗೃತಿಗಾಗಿ ಸೈಕಲ್ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದುಸಂಯೋಜಕ ಸಂತೋಷ್ ಶೆಟ್ಟಿ ತಿಳಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಮಣ್ಣು ಉಳಿಸಿ ಘೋಷವಾಕ್ಯದ ಅಡಿಯಲ್ಲಿ ನಡೆಯುವ ಕಾರ್ಯಕ್ರಮವನ್ನು ಮಂಗಳಾ ಕ್ರೀಡಾಂಗಣದಲ್ಲಿ ಗಿಡ ನೆಡುವ ಮೂಲಕ ಮೇಯರ್ ಪ್ರೇಮಾನಂದ ಶೆಟ್ಟಿ ಉದ್ಘಾಟಿಸುವರು. ಶಾಸಕ ವೇದವ್ಯಾಸ ಕಾಮತ್, ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಸ್. ಯಡಪಡಿತ್ತಾಯ, ಲಯನ್ಸ್ ಡಿಸ್ಟ್ರಿಕ್ಟ್‌ 317ರ ಗವರ್ನರ್ ಸಂಜೀತ್ ಶೆಟ್ಟಿ ಭಾಗವಹಿಸುವರು’ ಎಂದರು.

ಮಂಗಳ ಕ್ರೀಡಾಂಗಣದಿಂದ ಲೇಡಿಹಿಲ್, ಪಿ.ವಿ.ಎಸ್, ಜ್ಯೋತಿ, ಬೆಂದೂರವಲ್, ಕಂಕನಾಡಿ, ಮಾರ್ಗನ್ಸ್ ಗೇಟ್, ಮಂಗಳಾದೇವಿ ಸರ್ಕಲ್, ಮಂಗಳಾದೇವಿ ದೇವಸ್ಥಾನ, ಸಿಟಿ ಸೆಂಟರ್, ನವ ಭಾರತ್ ಸರ್ಕಲ್, ಲಾಲ್‌ಬಾಗ್ ಮಾರ್ಗವಾಗಿ ಸಂಚರಿಸುವ ಜಾಥಾ ಪುನಃ ಮಂಗಳ ಕ್ರೀಡಾಂಗಣವನ್ನು ತಲುಪಲಿದೆ ಎಂದರು. ಲಯನ್ಸ್ ಕ್ಲಬ್ ಕದ್ರಿ ಹಿಲ್ಸ್‌ ಅಧ್ಯಕ್ಷೆ ಸುಮಿತ್ರಾ ವಿ. ಶೆಟ್ಟಿ, ವಿನಯ ಕೃಷಿ ಬೆಳೆಗಾರರ ಸಂಘದ ನಿರ್ದೇಶಕ ಡಾ. ಅಣ್ಣಯ್ಯ ಕುಲಾಲ್, ಜ್ಯೂಯಿಸ್ ಫಿಟ್‌ನೆಸ್ ಕ್ಲಬ್‌ನ ಕದ್ರಿ ರಾಜೇಶ್, ಮಂಗಳೂರು ಸೈಕ್ಲಿಂಗ್ ಕ್ಲಬ್‍ನ ಅನಿಲ್ ಶೇಟ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT