ಬುಧವಾರ, ನವೆಂಬರ್ 13, 2019
23 °C

ನಿವೃತ್ತ ಬ್ಯಾಂಕ್‌ ನೌಕರ ನಾಪತ್ತೆ:ನದಿಗೆ ಹಾರಿ ಆತ್ಮಹತ್ಯೆ ಶಂಕೆ

Published:
Updated:

ಮಂಗಳೂರು: ನಗರದ ಬಿಜೈ ನಿವಾಸಿಯಾಗಿದ್ದ ನಿವೃತ್ತ ಬ್ಯಾಂಕ್‌ ನೌಕರರೊಬ್ಬರು ನಾಪತ್ತೆಯಾಗಿದ್ದು, ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಲ್ಲಾಪು ಬಳಿಯ ನೇತ್ರಾವತಿ ಸೇತುವೆ ಮೇಲೆ ಅವರ ಬೈಕ್‌ ಪತ್ತೆಯಾಗಿದೆ. ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಬಿಜೈ ನ್ಯೂ ರೋಡ್ ನಿವಾಸಿ, ನಿವೃತ್ತ ಬ್ಯಾಂಕ್ ಉದ್ಯೋಗಿ ಸದಾಶಿವ ರಾವ್ (64) ನಾಪತ್ತೆಯಾದವರು. ಬುಧವಾರ ಬೆಳಿಗ್ಗೆ 6.30ರ ವೇಳೆಗೆ ಮನೆಯಿಂದ ಹೊರ ಹೋಗಿದ್ದರು. 10 ಗಂಟೆಯಾದರೂ ಮನೆಗೆ ಹಿಂತಿರುಗಲಿಲ್ಲ. ಗಾಬರಿಗೊಂಡು ಹುಡುಕಾಟ ಆರಂಭಿಸಿದ್ದರು. ದ್ವಿಚಕ್ರ ವಾಹನವೊಂದನ್ನು ನೇತ್ರಾವತಿ ಸೇತುವೆ ಮೇಲೆ ಬಿಟ್ಟು ಹೋಗಿರುವ ಮಾಹಿತಿ ಆಧರಿಸಿ ಅಲ್ಲಿಗೆ ಬಂದ ಕುಟುಂಬದವರು ಪರಿಶೀಲಿಸಿದರು. ಅದು ಸದಾಶಿವ ರಾವ್‌ ಅವರದ್ದು ಎಂಬುದನ್ನು ಕುಟುಂಬದವರು ಖಚಿತಪಡಿಸಿದರು.

ಉರ್ವ ಪೊಲೀಸ್‌ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ. ಬೈಕ್‌ ಪತ್ತೆಯಾದ ಸ್ಥಳಕ್ಕೆ ಭೇಟಿನೀಡಿದ ಕಂಕನಾಡಿ ನಗರ ಠಾಣೆ ಪೊಲೀಸರು ಪರಿಶೀಲನೆ ನಡೆಸಿದರು. ಸ್ಥಳೀಯ ಮೀನುಗಾರರು ನದಿಯ ಇಕ್ಕೆಲಗಳಲ್ಲಿ ಶೋಧ ನಡೆಸಿದರು. ತಡರಾತ್ರಿಯವರೆಗೂ ಯಾವುದೇ ಸುಳಿವು ಲಭ್ಯವಾಗಿರಲಿಲ್ಲ.

ಪ್ರತಿಕ್ರಿಯಿಸಿ (+)