ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರ್ಯಾಕ್ಟರ್ ಸಾಲ: ಬಿಒಬಿ 3 ಹೊಸ ಯೋಜನೆ

Last Updated 19 ಸೆಪ್ಟೆಂಬರ್ 2020, 16:48 IST
ಅಕ್ಷರ ಗಾತ್ರ

ಮಂಗಳೂರು: ಬ್ಯಾಂಕ್‌ ಆಫ್ ಬರೋಡ, ರೈತರಿಗೆ ಉತ್ತಮ ಹಣಕಾಸು ಸೇವೆ ಒದಗಿಸುವ ಹಾಗೂ ಕೃಷಿ ಯಾಂತ್ರೀಕರಣಕ್ಕಾಗಿ ಒಂದೇ ದಿನ ಮೂರು ಯೋಜನೆಗಳನ್ನು ಘೋಷಿಸಿದೆ.

ಕ್ಲಸ್ಟರ್ ಮಾದರಿಯನ್ನು ಮಂಗಳೂರು ಸೇರಿದಂತೆ 11 ವಲಯಗಳ ವ್ಯಾಪ್ತಿಯಲ್ಲಿ ಜಾರಿಗೆ ತಂದಿದೆ. ಈ ಯೋಜನೆಯಡಿ ಟ್ರ್ಯಾಕ್ಟರ್ ಸಾಲಕ್ಕಾಗಿಯೇ ವಿಶೇಷ ಅಧಿಕಾರಿಯೊಬ್ಬರನ್ನು ನಿಯೋಜಿಸಲಾಗಿದೆ. ಗ್ರೋಮ್ಯಾಕ್ಸ್ ಅಗ್ರಿ ಇಕ್ವಿಪ್‍ಮೆಂಟ್ ಕಂಪನಿ ಜತೆ ಒಪ್ಪಂದ ಮಾಡಿಕೊಂಡಿದ್ದು, ಇದರ ಅನ್ವಯ ಬ್ಯಾಂಕ್ ಆಫ್ ಬರೋಡ ಗ್ರಾಹಕರು ಟ್ರ್ಯಾಕ್ಟರ್ ಖರೀದಿ ಮೇಲೆ ಕಂಪನಿ ಮಳಿಗೆಗಳಲ್ಲಿ ₹1 ಲಕ್ಷದವರೆಗೆ ರಿಯಾಯಿತಿ ಪಡೆಯಲಿದ್ದಾರೆ. ಒಂದೇ ದಿನ ಕ್ಲಸ್ಟರ್ ಮಾದರಿಯಲ್ಲಿ 600ಕ್ಕೂ ಹೆಚ್ಚು ಸಾಲಗಳನ್ನು ಮಂಜೂರು ಮಾಡಿದೆ.

ವರ್ಚುವಲ್ ಕಾರ್ಯಕ್ರಮದ ಮೂಲಕ ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕ ವಿಕ್ರಮಾದಿತ್ಯ ಸಿಂಗ್ ಖಿಚಿ ಈ ಯೋಜನೆಗೆ ಚಾಲನೆ ನೀಡಿದರು. ಗ್ರಾಮೀಣ ಮತ್ತು ಕೃಷಿ ಸಾಲ ವಿಭಾಗದ ಸಿಜಿಎಂ ರೋಹಿತ್ ಪಟೇಲ್, ಮಹಾಪ್ರಬಂಧಕ, ಮುಖ್ಯಸ್ಥ ಎಂ.ವಿ. ಮುರಳಿಕೃಷ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT