ಮಂಗಳವಾರ, ಸೆಪ್ಟೆಂಬರ್ 17, 2019
24 °C

ಬಂಟ್ವಾಳ: ₹ 7.5 ಲಕ್ಷದ ಚಿನ್ನಾಭರಣ ಕಳವು

Published:
Updated:
Prajavani

ಬಂಟ್ವಾಳ: ಇಲ್ಲಿನ ಎಸ್‌ವಿಎಸ್ ಶಾಲಾ ಬಳಿ ಭದ್ರಕಾಳಿ ಕಟ್ಟೆ ಸಮೀಪದಲ್ಲಿ ಖಾಸಗಿ ಸರ್ವೇಯರ್ ವಾಸವಾಗಿರುವ ಬಾಡಿಗೆ ಮನೆಗೆ ಮಂಗಳವಾರ ಕಳ್ಳರು ನುಗ್ಗಿ ನಗದು ಸಹಿತ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕದ್ದಿದ್ದಾರೆ.

ಮಂಡ್ಯದ ಲೋಹಿತ್‌ ಎಂಬುವರು ಖಾಸಗಿ ಸರ್ವೇಯರ್‌ ಆಗಿ ಹಲವು ವರ್ಷಗಳಿಂದ ಇಲ್ಲಿ ನೆಲೆಸಿದ್ದು, ಮಂಗಳವಾರ ಮಧ್ಯಾಹ್ನ  ಮನೆಯಲ್ಲಿ ಯಾರೂ ಇಲ್ಲದ ವೇಳೆ ಕೃತ್ಯ ನಡೆದಿದೆ.

‘ಮನೆಯ ಶೌಚಾಲಯದ ಮಾಡಿನ ಸಿಮೆಂಟ್ ಶೀಟ್‌ ತೆಗೆದು ಒಳಗೆ ನುಗ್ಗಿದ ಕಳ್ಳರು ಕಪಾಟಿನಲ್ಲಿದ್ದ ₹ 7.5 ಲಕ್ಷ ಮೌಲ್ಯದ 224 ಗ್ರಾಂ. ಚಿನ್ನಾಭರಣ ಮತ್ತು ₹ 7,500 ನಗದು ಎಗರಿಸಿದ ಬಳಿಕ ಕಪಾಟಿಗೆ ಮತ್ತೆ ಬೀಗ ಹಾಕಿ ಕೀಲಿ ಸಹಿತ ಪರಾರಿಯಾಗಿದ್ದಾರೆ’ ಎಂದು ಆರೋಪಿಸಲಾಗಿದೆ.

ಎಎಸ್‌ಪಿ ಸೈದುಲ್ ಅದಾವತ್, ಇನ್‌ಸ್ಪೆಕ್ಟರ್ ಟಿ.ಡಿ. ನಾಗರಾಜ್, ಅಪರಾಧ ವಿಭಾಗ ಎಸ್‌ಐ ಸುಧಾಕರ ತೋನ್ಸೆ, ಎಎಸ್‌ಐ ಸಂಜೀವ ಕೆ. ಭೇಟಿ ನಿಡಿ ಪರಿಶೀಲನೆ ನಡೆಸಿದ್ದಾರೆ.

 

Post Comments (+)