ಬಂಟ್ವಾಳ: ಇಲ್ಲಿನ ಅಮ್ಡಾಡಿ ಗ್ರಾಮದ ಮಂಗ್ಲಿಮಾರ್ ಸಮೀಪದ ಅಕ್ಕೇರಿಪಾದೆ ಎಂಬಲ್ಲಿ ನವೀಕರಣಗೊಂಡ ಗುಡಿಯಲ್ಲಿ ದೈವಗಳ ಪುನರ್ ಪ್ರತಿಷ್ಠೆ ಸೋಮವಾರ ನಡೆಯಿತು.

ಕ್ಷೇತ್ರದ ತಂತ್ರಿ ಉದಯ ಪಾಂಗಣ್ಣಾಯ ಅವರ ಮಾರ್ಗದರ್ಶನದಲ್ಲಿ ಪುರೋಹಿತ ನರಸಿಂಹ ಮಯ್ಯ ಅವರು ಬ್ರಹ್ಮಲಿಂಗೇಶ್ವರ ಸಹಿತ ರಕ್ತೇಶ್ವರಿ, ಅಣ್ಣಪ್ಪ ಸ್ವಾಮಿ ಮತ್ತು ಜುಮಾದಿ ಬಂಟ ದೈವಗಳ ಗುಡಿಯಲ್ಲಿ ಬಿಂಬ ಪುನರ್ ಪ್ರತಿಷ್ಠೆ ಮತ್ತು ಕಲಶಾಭಿಷೇಕ ನೆರವೇರಿಸಿದರು.

ಕಲಾಯಿ ಮಹಮ್ಮಾಯಿ ದೇವರಿಗೆ ದೃಢಕಲಶ, ಭೈರವ ಸಹಿತ ಕಲ್ಲುರ್ಟಿ ಪಂಜುರ್ಲಿ ದೈವ ಪ್ರತಿಷ್ಠೆ ಮತ್ತು ನಾಗ ಸಾನಿಧ್ಯದಲ್ಲಿ ವಿಶೇಷ ಪೂಜೆ ನಡೆಯಿತು. ಮಧ್ಯಾಹ್ನ ಮಂಗಲಿಮಾರು ಅಣ್ಣಪ್ಪ ಸ್ವಾಮಿ ದೈವಸ್ಥಾನದಲ್ಲಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

ದೈವಸ್ಥಾನದ ಗಡಿಪ್ರಧಾನ ಬಡಾಜೆ ರವಿಶಂಕರ ಶೆಟ್ಟಿ, ಆರಾಧನಾ ಸಮಿತಿ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ, ಪ್ರಮುಖರಾದ ಎಂ.ತುಂಗಪ್ಪ ಬಂಗೇರ, ದೇವಪ್ಪ ಕುಲಾಲ್, ಕರುಣೇಂದ್ರ ಪೂಜಾರಿ, ಮಲ್ಲಿಕಾ ವಿ.ಶೆಟ್ಟಿ, ಲೋಕೇಶ ಸುವರ್ಣ, ಪ್ರೇಮನಾಥ ಕರ್ಕೇರ, ನರಸಿಂಹ ಹೊಳ್ಳ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260407-29-1307823202

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.