ಬಂಟ್ವಾಳ: ‘ಇಲ್ಲಿನ ಮಣಿನಾಲ್ಕೂರು ಗ್ರಾಮದ ಹಟದಡ್ಕ ಎಂಬಲ್ಲಿ ಮಾಜಿ ಸೈನಿಕರೊಬ್ಬರ ಮೇಲೆ ತಂಡವೊಂದು ಹಲ್ಲೆ ನಡೆಸಿ ಪರಾರಿಯಾದ ಘಟನೆಗೆ ಸಂಬಂಧಿಸಿ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಲ್ಲಿ ಪೊಲೀಸ್ ಇಲಾಖೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ’ ಎಂದು ಮಾಜಿ ಸೈನಿಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ನೊರ್ಬರ್ಟ್ ರಾಡ್ರಿಗಸ್ ಆರೋಪಿಸಿದರು.

ಇಲ್ಲಿನ ಬಿ.ಸಿ.ರೋಡಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಮಾರ್ಚ್ 17ರಂದು ರಾತ್ರಿ 8 ಗಂಟೆಗೆ ಸುಮಾರು 15 ಮಂದಿಯ ತಂಡವು ಮಾಜಿ ಸೈನಿಕ, ನಾವೂರು ಗ್ರಾಮದ ಸಜಂಕಬೆಟ್ಟು ನಿವಾಸಿ ಜಯಪ್ರಕಾಶ್ ಎಂಬುವರ ಮೇಲೆ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಒಡ್ಡಿದೆ’ ಎಂದು ಆರೋಪಿಸಿದರು.

ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಗೆ ದೂರು ಸಲ್ಲಿಸಲಾಗಿದ್ದು, ಎಫ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳನ್ನು ಬಂಧಿಸದೆ ಇರಲು ಕಾರಣ ಏನು ಎಂದು ಪ್ರಶ್ನಿಸಿದರು.

‘ಮಾರ್ಚ್ 17ರಂದು ಬೆಳಿಗ್ಗೆ 9.45ಕ್ಕೆ ಶ್ರೀನಗರದಲ್ಲಿ ಕರ್ತವ್ಯಕ್ಕೆ ಹಾಜರಾಗಬೇಕಿದ್ದ ಸೈನಿಕ ವಸಂತ ಪೂಜಾರಿ ಹಟದಡ್ಕ ಅವರನ್ನು ಜಯಪ್ರಕಾಶ್ ಅವರು ಕಾರಿನಲ್ಲಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಿಟ್ಟು ಬಂದಿದ್ದಾರೆ. ವಸಂತ ಪೂಜಾರಿ ಅವರ ಕೋರಿಕೆಯಂತೆ ಅದೇ ದಿನ ರಾತ್ರಿ 8 ಗಂಟೆಗೆ ಅವರ ಪತ್ನಿ ಸಂಧ್ಯಾ ಮತ್ತು ಅವರ ಮಗ ಸಹಿಷ್ಣು ಅವರನ್ನು ಕಾರಿನಲ್ಲಿ ವೇಣೂರು ಸಮೀಪದ ಪಡ್ಯಾರಬೆಟ್ಟು ಜಾತ್ರೆಗೆ ಕರೆದುಕೊಂಡು ಹೋಗಿ ಬಳಿಕ ಅವರ ಮನೆಗೆ ಬಿಟ್ಟು ಪುತ್ರನೊಂದಿಗೆ ವಾಪಾಸು ಬರುತ್ತಿದ್ದ ವೇಳೆ ಆರೋಪಿಗಳ ತಂಡ ಅಡ್ಡಗಟ್ಟಿದೆ. ಈ ಪೈಕಿ ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಶಾಂತಪ್ಪ ಪೂಜಾರಿ ಮತ್ತು ಕಾಂಗ್ರೆಸ್ ಗ್ರಾ.ಪಂ.ಸದಸ್ಯ ಶಿವಪ್ಪ ಪೂಜಾರಿ ಸಹಿತ 15 ಮಂದಿ ಆರೋಪಿಗಳ ಹೆಸರನ್ನು ಪೊಲೀಸರಿಗೆ ನೀಡಿದ್ದರೂ ಆರೋಪಿಗಳನ್ನು ಬಂಧಿಸಿಲ್ಲ’ ಎಂದು ವಿವರಿಸಿದರು.

‘17 ವರ್ಷ ಸೈನ್ಯದಲ್ಲಿ ದುಡಿದು ಸ್ವಯಂ ನಿವೃತ್ತಿಗೊಂಡು ಡ್ರೈವಿಂಗ್ ಸ್ಕೂಲ್ ನಡೆಸುತ್ತಿರುವ ನನಗೆ ಪುಡಿ ರಾಜಕಾರಣಿಗಳು ಹಲ್ಲೆ ನಡೆಸಿರುವುದು ವಿಪರ್ಯಾಸ. ವಸಂತ ಪೂಜಾರಿ ಕುಟುಂಬಕ್ಕೆ ಯಾವುದೇ ಸಹಾಯ ಮಾಡಬಾರದು ಎಂದು ಆರೋಪಿಗಳು ಎಚ್ಚರಿಸಿದ್ದು, ಎಲ್ಲರನ್ನೂ ಕೊಲ್ಲುವುದಾಗಿ ಜೀವ ಬೆದರಿಕೆಯೊಡ್ಡಿ ಹಲ್ಲೆ ನಡೆಸಿದ ಪರಿಣಾಮ 10 ದಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದೇನೆ’ ಎಂದು ಗಾಯಾಳು ಜಯಪ್ರಕಾಶ್ ತಿಳಿಸಿದರು.

ಕುಟುಂಬಕ್ಕೆ ಭದ್ರತೆ ಬೇಕು: ಸೈನಿಕ ವಸಂತ ಪೂಜಾರಿ ಅವರ ಪತ್ನಿ ಸಂಧ್ಯಾ ಕೆ.ಮಾತನಾಡಿ, ‘ನನ್ನ ಪತಿ ಶ್ರೀನಗರದಲ್ಲಿ ದೇಶದ ಗಡಿ ಕಾಯುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದು, ಇಲ್ಲಿ ಆರು ವರ್ಷದ ಪುತ್ರನೊಂದಿಗೆ ವಾಸವಾಗಿರುವ ನನನಗೆ ಜೀವ ಬೆದರಿಕೆ ಇದೆ. ಈ ಬಗ್ಗೆ ಪೊಲೀಸರು ಸೂಕ್ತ ರಕ್ಷಣೆ ಒದಗಿಸಬೇಕು’ ಎಂದು ಅವರು ಆಗ್ರಹಿಸಿದರು.

ಮಾಜಿ ಸೈನಿಕರ ಜಿಲ್ಲಾ ಸಂಘದ ಕಾರ್ಯದರ್ಶಿ ದಾಸಪ್ಪ ಪೂಜಾರಿ, ಕೋಶಾಧಿಕಾರಿ ಚಂದಪ್ಪ ಡಿ.ಎಸ್. ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260403-29-1060083661

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.